SKH
  • HOME
    • About Us
  • English Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Join Our Online Groups
  • Social Work News
  • Search
  • Contact Us
  • HOME
    • About Us
  • English Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Join Our Online Groups
  • Social Work News
  • Search
  • Contact Us
SKH
  • ಸಮಾಜಕಾರ್ಯ ಪುಸ್ತಕಗಳು
  • >
  • ಗ್ರಾಮೋನ್ನತಿ

ಗ್ರಾಮೋನ್ನತಿ

SKU:
$0.00
Unavailable
per item
ಮುನ್ನುಡಿ
 
ಗ್ರಾಮ ಸಮಾಜದ ರಚನೆ, ಕ್ರಿಯೆ, ರೋಗಸ್ಥಿತಿ, ಅಭ್ಯುದಯದ ತತ್ತ್ವಾದರ್ಶ ಮತ್ತು ಮಾರ್ಗೋಪಾಯಗಳು, ಇತ್ಯಾದಿಗಳನ್ನು ವಿವರಿಸುವ ಲೇಖನಗಳ ಸಂಗ್ರಹವೇ ಈ ಪುಸ್ತಕ.
​
ಇಲ್ಲಿನ ಲೇಖನಗಳು ಈಗಾಗಲೇ ಪ್ರಜಾವಾಣಿ ಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ, ಕರ್ನಾಟಕ ಸರಕಾರವು ಪ್ರಕಟಿಸುತ್ತಿರುವ ಕರ್ನಾಟಕ ವಿಕಾಸ ಮತ್ತು ಜನಪದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ ಅಲ್ಲಿಯೇ ಉಳಿದರೆ ಜನರ ಮನಸ್ಸಿನಿಂದ ಚದುರಿ ಹೋಗುತ್ತವೆ, ವಿಷಯದ ಒಟ್ಟಂದದ ಚಿತ್ರ ದೊರೆಯದೆ ಹೋಗುತ್ತದೆ, ಎಂಬುದರಿಂದ ಆ ಲೇಖನಗಳಲ್ಲಿ ಹತ್ತನ್ನು ಆಯ್ದು, ಸೂಕ್ತವಾಗಿ ಪರಿಷ್ಕರಿಸಿ ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗಿದೆ.
​
ಪ್ರತ್ಯಪ್ರತ್ಯೇಕವಾಗಿ ಬರೆದ ಲೇಖನಗಳು ಇವಾಗಿರುವುದರಿಂದ ವಿಷಯದ ಕೆಲವು ಅಂಶಗಳು, ಚರ್ಚೆಯ ಕೆಲವು ನಿಲುವುಗಳು, ದೃಷ್ಟಾಂತಗಳ ಕೆಲವು ತುಣುಕುಗಳು ಪುನರಾವರ್ತನೆಗೊಂಡಿವೆ. ಪುನರಾವರ್ತನೆಯು ಒಂದು ದೋಷವಾದರೂ ಗ್ರಾಮೋನ್ನತಿಯ ವಿಷಯವನ್ನು ಮನಂಬುಗುವ ಹಾಗೆ ಅರುಹಬೇಕಾದರೆ ಇಂಥ ಕ್ರಮವು ಕ್ಷಮಾರ್ಹವೆಂದು ಭಾವಿಸಿ, ಅದನ್ನು ಹಾಗೆಯೇ ಉಳಿಸಲಾಗಿದೆ. ಜೊತೆಗೆ, ಮೊದಲ ಲೇಖನದಿಂದ ಕೊನೆಯ ಲೇಖನದವರೆಗೆ ಲೇಖಕನು ನಂಬಿದ, ಆತನಿಗೆ ಆದ   ಅನುಭವದ ವಿಚಾರವು ತಾರ್ಕಿಕವಾಗಿ ಹರಿದು ಎಲ್ಲ ಲೇಖನಗಳನ್ನೂ ಸ್ವೀಕಾರಾರ್ಹ ಮಾಲೆಯ ಸಂವೈಧಾನಿಕ ಘಟಕಗಳನ್ನಾಗಿಸಿವೆ ಎಂದು ಭಾವಿಸುತ್ತೇನೆ.
​
ಕರ್ನಾಟಕದ ತೀರಾ ಹಿಂದುಳಿದ ಹಳ್ಳಿಗಳಲ್ಲಿ ಸಾಮಾಜಿಕ ಪರಿವರ್ತನೆ ಮತ್ತು ಅಭ್ಯುದಯದಲ್ಲಿ ನಿರತರಾಗಿರುವ ಸ್ವಸ್ತಿಯ ಕಾರ್ಯಕರ್ತರಿಗೆ ಹಾಗೂ ಹಿತೈಷಿಗಳಿಗೆ ಆಗುವ ಅನುಭವಗಳು ಅನ್ಯ ಸಂಘಟನೆಗಳವರಿಗೂ ದೊರೆಯಲೆಂಬುದು ಈ ಪುಸ್ತಕ ಪ್ರಕಟನೆಯ ಒಂದು ಉದ್ದೇಶ. ಅನುಷ್ಠಾನಯೋಗ್ಯ ಕಾರ್ಯಯೋಜನೆಯನ್ನು ಈ ಪುಸ್ತಕವು ಒಳಗೊಂಡಿರುವುದರಿಂದ ಸಮುದಾಯದ ಸಮಗ್ರ ಅಭ್ಯುದಯದಲ್ಲಿ ಪ್ರಾಮಾಣಿಕವಾದ ಆಸ್ಥೆಯುಳ್ಳ ಎಲ್ಲರಿಗೂ ಈ ಪುಸ್ತಕವು ಉಪಯುಕ್ತವಾಗುತ್ತದೆಂಬ ನಂಬುಗೆಯಿಂದಲೂ ಇದನ್ನು ಪ್ರಕಟಿಸಲಾಗಿದೆ. ಸ್ವಸ್ತಿಯು ಕೈಗೊಂಡಿರುವ ಹಲವಾರು ಕಾರ್ಯಕ್ರಮಗಳಿಗೆ ಅಗತ್ಯವಾದ ಸಂಪನ್ಮೂಲವು ಈ ಪುಸ್ತಕದ ಮಾರಾಟದಿಂದಲೂ ದೊರೆಯುತ್ತದೆಂಬ ನಿರೀಕ್ಷೆಯಿಂದಲೂ ಇದು ಪ್ರಕಾಶನಗೊಳ್ಳುತ್ತಿದೆ.
​
ನಮ್ಮ ಈ ಉದ್ದೇಶ ಈ ನಿರೀಕ್ಷೆಗಳು ಉಂಟಾದದ್ದು ನಮ್ಮ ಮೊದಲ ಪ್ರಕಟನೆ ಕುಟುಂಬ ಯೋಜನೆ ಏನು, ಎಂತು ? ಕೇವಲ ಹದಿನೈದು ತಿಂಗಳುಗಳಲ್ಲಿಯೇ ಐದು ಮುದ್ರಣಗಳನ್ನು ಕಂಡದ್ದುದರಿಂದ. ಆ ಪುಸ್ತಿಕೆಗೆ ದೊರೆತ ಸ್ವಾಗತವು ಈ ಪುಸ್ತಕಕ್ಕೂ ದೊರೆಯುತ್ತದೆಂಬ ಆಶಾಭಾವನೆ ನಮ್ಮದು.
​
ಗ್ರಾಮೋನ್ನತಿಯ ಬಗೆಗೆ ಆಲೋಚಿಸುವ, ಯೋಜಿಸುವ ಕಾರ್ಯನಿರತರಾಗಿರುವ ಆಸ್ಥೆಯುಳ್ಳ ಎಲ್ಲರಿಗೂ ಈ ಪುಸ್ತಕವು ಮೆಚ್ಚುಗೆಯಾಗುತ್ತದೆಂದು ಆಶಿಸುತ್ತೇವೆ.
 
ಎಚ್.ಎಂ. ಮರುಳಸಿದ್ಧಯ್ಯ
 
 
ಪರಿವಿಡಿ

 
  1. ಬದಲಾಗುತ್ತಿರುವ ಗ್ರಾಮೀಣ ಬದುಕು
  2. ಸಂದಿಲ್ಲದ ಸರಪಳಿ
  3. ಬುಡಕಟ್ಟು-ಗ್ರಾಮ-ನಗರ ಅವಿರಳ ಸರಪಳಿ
  4. ಸಮಸ್ಯೆಗಳ ಗತಿಚಕ್ರ
  5. ಗ್ರಾಮೀಣ ಪುನಾರಚನೆಯ ಒಂದು ಆಂದೋಳನ
  6. ಅಭ್ಯುದಯದಲ್ಲಿ ಒಂದು ನೂತನ ಪ್ರಯೋಗ
  7. ಅಭ್ಯುದಯದ ಗುರಿಗಳ ತಾತ್ತ್ವಿಕ ಹಿನ್ನೆಲೆ
  8. ಜ್ಯೋತಿ ಇದ್ದೆಡೆಯಲ್ಲಿ ತಮಂಧ ಉಂಟೆ ?
  9. ಪರಿಪೂರ್ಣ ಆರೋಗ್ಯ
  10. ಸತ್ಯ ಶುದ್ಧ ಕಾಯಕ
  11. ಸಾಮರಸ್ಯವೇ ಜೀವನ
  • Facebook
  • Twitter
  • Pinterest
  • Google+
Not Available

Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)