SKH
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
SKH
  • ಸಮಾಜಕಾರ್ಯ ಪುಸ್ತಕಗಳು
  • >
  • ಸಮಾಜಕಾರ್ಯ

ಸಮಾಜಕಾರ್ಯ

SKU:
$0.00
Unavailable
per item
ಸಮಾಜಕಾರ್ಯ
 
ಜನರ ಜೀವನವು ಬರಬರುತ್ತಾ ಕ್ಲಿಷ್ಟವಾಗುತ್ತಾ ಗೊಂದಲಮಯವಾಗುತ್ತಿದೆ. ಅದು ಹೆಚ್ಚು ಅವೈಯಕ್ತಿಕತೆಯ, ಪರಕೀಯ ಭಾವನೆಯ ಆಗರವಾಗುತ್ತಲಿದೆ. ಇದರಿಂದಾಗಿ ಸಮಸ್ಯೆಗಳು ಸಂಖ್ಯೆಯಲ್ಲೂ, ಗಾತ್ರದಲ್ಲೂ, ತೀಕ್ಷ್ಣತೆಯಲ್ಲೂ ಹೆಚ್ಚುತ್ತಲಿವೆ. ಇವುಗಳನ್ನು ನಿರ್ಬಂಧಿಸುವ, ಪರಿಹರಿಸುವ, ಮಾನವನ ಜೀವನವನ್ನು ಮಧುರವಾಗಿಸುವ ಪ್ರಯತ್ನವು ನಾನಾ ರಂಗಗಳಲ್ಲಿ ವಿವಿಧ ಮುಖವಾಗಿ ನಡೆಯುತ್ತಲಿದೆ. ಸಮಾಜಕಾರ್ಯವೂ ಅಂಥ ಒಂದು ಸಾರ್ಥಕ ಪ್ರಯತ್ನವಾಗಿದೆ.
​
ಸಮಾಜಕಾರ್ಯವು, ಪರಸ್ಪರ ಸಹಾಯವನ್ನು ನೀಡುವ ಅರ್ಥದಲ್ಲಿ, ಮಾನವ ಸಮಾಜದ ಉಗಮದಿಂದಲೂ, ಮಾನವನ ಜೀವನದಲ್ಲಿ ಹಾಸುಹೊಕ್ಕಾಗಿರುವುದು ಸಾಧಿತವಾಗಿದೆ. ಆದರೆ, ಇದನ್ನು ಒಂದು ವೃತ್ತಿಯಾಗಿ ಪರಿಗಣಿಸತೊಡಗಿದ್ದುದು ಹತ್ತೊಂಬತ್ತನೆಯ ಶತಮಾನದಿಂದ, ಭಾರತದಲ್ಲಿ ಈ ಶತಮಾನದ ಮೂರನೆಯ ದಶಕದಿಂದ.
​
ವೈಜ್ಞಾನಿಕ ಜ್ಞಾನದ ಆವರಣದಲ್ಲಿ, ನಿಶ್ಚಿತ ತತ್ತ್ವಾದರ್ಶದ ನೆಲೆಗಟ್ಟಿನ ಮೇಲೆ, ಪರಿಷ್ಕೃತ ವಿಧಾನ ಮತ್ತು ತಂತ್ರಗಳ ಮೂಲಕ ಕ್ರೋಢೀಕೃತವಾಗಿ ನಡೆಯುವ ಪ್ರಯತ್ನವಾದ ಸಮಾಜಕಾರ್ಯವನ್ನು ಸಂಗತ ಕಾರ್ಯವನ್ನಾಗಿ ಪರಿವರ್ತಿಸಿಕೊಳ್ಳುವುದು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಕಾರ್ಯಕರ್ತರ ಮತ್ತು ಇಂಥವರ ಯತ್ನಕ್ಕೆ ನೆರವಾಗುವುದು ಇತರರ ಪ್ರಥಮ ಕರ್ತವ್ಯವಾಗಿದೆ.
ಸಮಾಜಕಾರ್ಯವು ತೀವ್ರಗಾಮಿಯಾಗುವುದರ ಜೊತೆಗೆ ಇದರ ಪರಿಚಯವು ಜನ ಸಾಮಾನ್ಯರಿಗೆಲ್ಲರಿಗೂ ಆಗಬೇಕಾದದ್ದು ಅಗತ್ಯ. ಕರ್ನಾಟಕದಲ್ಲಿ ಸಾಮಾಜಿಕ ಅಭ್ಯುದಯದಲ್ಲಿ ತೊಡಗಿರುವ ಎಲ್ಲ ಕಾರ್ಯಕರ್ತರಿಗೂ, ಹುಲ್ಲು ಬೇರುಗಳಾಗಿರುವ ಶ್ರೀಸಾಮಾನ್ಯರಿಗೂ ಸಮಾಜಕಾರ್ಯದ ಸೂಕ್ತ ಪರಿಚಯವಾಗಬೇಕು, ಎಂಬ ಅಪೇಕ್ಷೆಯಿಂದ ಈ ಪುಸ್ತಕವನ್ನು ಪ್ರಕಟಿಸಲಾಗಿದೆ. ಸುಮಾರು ಎರಡು ದಶಕಗಳ ಹಿಂದೆ ಸಮಾಜಕಾರ್ಯವನ್ನು ಕುರಿತು ಒಂದು ಕಿರು ಪುಸ್ತಿಕೆಯನ್ನು ಪ್ರಕಟಿಸಿದ್ದೆ. ಆದರೆ ನನ್ನ ಅನುಭವ, ಅಧ್ಯಾಪನ, ಅಧ್ಯಯನ, ದೇಶ-ವಿದೇಶಗಳ ನಾನಾ ಕಡೆಗಳಲ್ಲಿನ ವೀಕ್ಷಣೆ, ಇತ್ಯಾದಿಗಳಿಂದ ಸಮಾಜಕಾರ್ಯ ಕುರಿತ ಪುಸ್ತಕದ ಹರವು ಮತ್ತು ಆಯಾಮ ಭಿನ್ನವಾಗಿರುವ ಅಗತ್ಯವಿದೆ, ಎಂದು ಕಂಡುಬಂದಿತು. ಇದನ್ನು ಗಮನದಲ್ಲಿರಿಸಿಕೊಂಡು ಈ ಪುಸ್ತಕವನ್ನು ಬರೆದಿರುವೆ. ಇದನ್ನು ಆಸಕ್ತರೆಲ್ಲ ಆದರದಿಂದ ಬರಮಾಡಿಕೊಳ್ಳುತ್ತಾರೆಂದು ಆಶಿಸುತ್ತೇನೆ.
​
ನನ್ನ ಕಿರು ಪುಸ್ತಿಕೆಯನ್ನು ಮೊದಲು ಪ್ರಕಟಿಸಿದ್ದ, ಅದರ ವಸ್ತುವನ್ನು ಬಳಸಿಕೊಳ್ಳಲು ಅನುಮತಿಯನ್ನಿತ್ತ ಕರ್ನಾಟಕ ವಿಶ್ವವಿದ್ಯಾಲಯದವರಿಗೂ, ನನ್ನ ಬರಹಕ್ಕೆ ಮೆಚ್ಚುಗೆಯ ಪ್ರೋತ್ಸಾಹ ನೀಡುತ್ತಿರುವ ಶ್ರೀ ಚೆನ್ನವೀರ ಕಣವಿಯವರಿಗೂ, ಮುಖಪುಟ ರಚಿಸಿದ ಶ್ರೀ ಕಮಲೇಶ್ ಅವರಿಗೂ, ಕರಡು ತಿದ್ದುವಲ್ಲಿ ನೆರವಾದ ಸತೀಶನಿಗೂ, ಪುಸ್ತಕ ಮುದ್ರಿಸಿದ ಶ್ರೀ ರಂಗನಾಥ ಮುದ್ರಣಾಲಯದ ಸ್ನೇಹಿತರಿಗೂ, ಪ್ರಕಟನೆಗೆ ನೆರವಾದ ಇತರ ಎಲ್ಲ ಸ್ನೇಹಿತರಿಗೂ ನನ್ನ ಹೃತ್ಪೂರ್ವಕ ವಂದನೆಗಳು.
 
ಎಚ್.ಎಂ. ಮರುಳಸಿದ್ಧಯ್ಯ
ಮಾರ್ಚ್‍ 14, 1983
 
 
ಪರಿವಿಡಿ
 
ಅಧ್ಯಾಯಗಳು
1.         ಸಮಸ್ಯೆಗಳು-ಕಾರ್ಯಕ್ಷೇತ್ರಗಳು
2.         ಸಮಾಜಕಾರ್ಯ
3.         ಸಮಾಜಕಾರ್ಯ ವಿಧಾನಗಳು
4.         ಕೆಲವು ಮೂಲಸೂತ್ರಗಳು
5.         ಸಮಾಜಕಾರ್ಯಕರ್ತ
6.         ಭಾರತದಲ್ಲಿ ಸಮಾಜಕಾರ್ಯ
7.         ಅಂತಾರಾಷ್ಟ್ರೀಯ ಸಮಾಜಕಾರ್ಯ
 
ಅನುಬಂಧಗಳು
1.         ಆದರ್ಶ ರಾಜ್ಯದ ರಾಜರ್ಷಿಗಳು
2.         ಸಾಮಾಜಿಕ ಮೌಲ್ಯಗಳು ಅಂದು-ಇಂದು
3.         ಹೊಣೆಗಾರಿಕೆಯೆಂಬ ಬೆಳ್ಳಿರೇಖೆ
4.         ಸಮಾಜಕಾರ್ಯ ವೃತ್ತಿಯ ವ್ಯಾಖ್ಯೆ
5.         ವೃತ್ತ್ಯಾತ್ಮಕ ಸಮಾಜಕಾರ್ಯಕರ್ತರಿಗೆ ಅಂತಾರಾಷ್ಟ್ರೀಯ ನೀತಿಮಂಜರಿ
6.         ಅಂತಾರಾಷ್ಟ್ರೀಯ ಸಮಾಜಕಾರ್ಯದಲ್ಲಿ ಒಂದು ಪ್ರಯೋಗ
7.         ಶಬ್ದಕೋಶ
8.         ಭಾರತದಲ್ಲಿರುವ ಸಮಾಜಕಾರ್ಯ ಪ್ರಶಿಕ್ಷಣ ಶಾಲೆಗಳು
 
ಉಪಯುಕ್ತ ಸಾಹಿತ್ಯ 
  • Facebook
  • Twitter
  • Pinterest
  • Google+
Not Available

Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
+91-9980066890
+91-8310241136
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)