SKH
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
SKH

ಕೊರೊನಾ ಬಿಕ್ಕಟ್ಟಿನ ತಲ್ಲಣ ಸಮಾಜ ಕಾರ್ಯದಲ್ಲಿದೆ ಸಾಂತ್ವಾನ

4/20/2020

2 Comments

 
ಕೊರೊನಾ-2 ಸೋಂಕು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಈ ವೈರಾಣು ಸೂಕ್ತ ವೈಜ್ಞಾನಿಕ ಪುರಾವೆಯಂತೆ ವೇಗವಾಗಿ ರೋಗಗ್ರಸ್ಥ ಮಾನವನಿಂದ ಇನ್ನೊಬ್ಬ ಮಾನವನಿಗೆ ಹರಡುವುದನ್ನು ತಡೆಗಟ್ಟಲು ಇರುವ ಏಕೈಕ ಮಾರ್ಗ ಪ್ರತೇಕ ವಾಸ. ಹೀಗಾಗಿ ಎಲ್ಲರೂ ಮನೆಯಲ್ಲಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ಹರಡುವಿಕೆಯ ಸರಪಣಿಯನ್ನು ತುಂಡರಿಸಬೇಕು ಎಂಬ ಕಾರಣಕ್ಕೆ ಜಗತ್ತಿನಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಹೇರಲಾಗಿದ್ದು, ಇದರ ಅಪಾಯವನ್ನು ತಗ್ಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಆಯಾ ದೇಶದ ಸರ್ಕಾರಗಳು ಮುಂದಾಗಿವೆ. ನಮ್ಮ ದೇಶವು ಬಲವಂತದ ದಿಗ್ಬಂಧನ (ಲಾಕ್ ಡೌನ್) ಘೋಷಿಸಿದೆ. ಅದರ ನಡುವೆಯೂ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದನ್ನು ಕಂಡ ಜನರಿಗೆ ರೋಗದ ಭಯ, ಸಾವಿನ ಭೀತಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಇತರೆ ಸಾಂಕ್ರಮಿಕ ರೋಗಗಳಂತೆ ಇದು ಸಂಪೂರ್ಣ ನಿರ್ಮೂಲನೆವಾಗುವಂತದ್ದೇ ಅಥವಾ  ಸರ್ವನಾಶ ಮಾಡುವಂತದೇ? ಇದು ಮುಂದುವರೆದರೆ ತುತ್ತಿನ ಚೀಲ ತುಂಬಿಕೊಳ್ಳುವುದು ದುಸ್ಥರ. ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಬರಿಗೈಯಲ್ಲಿ ಕುಳಿತಿದ್ದಾರೆ, ಭವಿಷ್ಯದ ಬಗ್ಗೆ ಇರುವ ಅನಿಶ್ಚಿತತೆ, ಆಕಾರಣ ಭಯ, ಆತಂಕ, ಖಿನ್ನತೆ, ದುಃಸ್ವಪ್ನಗಳು ಬಡವರು, ಶ್ರೀಮಂತರು ಎಂಬ ಭೇದವಿಲ್ಲದೆ ಹಳಬರು, ಹೊಸಬರೆನ್ನದೇ ದೇವರು, ಧರ್ಮವೆನ್ನದೇ ಎಲ್ಲ ಜನತೆಯನ್ನು ಕಾಡತೊಡಗಿವೆ. ಸೋಂಕಿತರ ತಕ್ಷಣದ ಚಿಕಿತ್ಸೆಗಾಗಿ ಸ್ಥಳಾಂತರ, ವಲಸಿಗರು ತಮ್ಮ ಮೂಲ ನೆಲೆಗಳಿಗೆ ಇಲ್ಲವೇ ಆಶ್ರಯವೇ ಇಲ್ಲದ ನಿರಾಶ್ರಿತರಿಗೆ ತಾತ್ಕಾಲಿಕ ತಾಣಗಳಲ್ಲಿನ ಸಮಸ್ಯೆಗಳು. ಈಗಾಗಲೇ ಹಲವಾರು ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಮತ್ತು ಆರೈಕೆದಾರರ ಆಸ್ಪತ್ರೆಯಲ್ಲಿನ ಸಮಸ್ಯೆಗಳು ಇವೆಲ್ಲವುಗಳ ಮಧ್ಯೆ ಸಾಮಾಜಿಕ ಅಂತರ ಮತ್ತು ಶುಚಿತ್ವದ ಕಟ್ಟುಪಾಡು. 
ಇಂತಹ ದಿಗ್ಬ್ರಾಂತಿಯಲ್ಲಿರುವ ಜನತೆಗೆ ಆಸರೆಯಾಗಿ, ಸಾಂತ್ವಾನ ಮಾಡಬೇಕಾದ ಜರೂರತೆ ಕೇವಲ ಸರ್ಕಾರವಷ್ಟೇ ಮಾಡಿದರೆ ಸಾಲದು ಸ್ವಾಸ್ಥ್ಯ ಸಮುದಾಯಗಳು ಬೆಂಬಲವಾಗಿ ನಿಲ್ಲಬೇಕು. ಮೊದಲನೇ ಜಾಗತಿಕ ಮಹಾಯುದ್ಧ ಮುಗಿಯುವ ಹಂತದಲ್ಲಿ ಜಗತ್ತೇ ನಿಟ್ಟುಸಿರು ಬಿಡುತ್ತಿರುವಾಗಲೇ ಎರಗಿದ ಸ್ಪ್ಯಾನಿಷ್ ಪ್ಲೂ (ಪ್ಲೇಗ್) ಎಂಬ ಕಾಯಿಲೆ ಕೋಟಿಗಟ್ಟಲೇ ಜನರ ಜೀವಹರಣ ಮಾಡಿ ಜಗತ್ತಿನ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗವನ್ನು ಸಂಕಷ್ಟಕ್ಕೆ ಸಿಲುಕಿದಾದ ಯುದ್ಧದ ಗಾಯಾಳುಗಳ ಮತ್ತು ಸೋಂಕಿತರ ಚಿಕಿತ್ಸೆ, ಆರೋಗ್ಯ ಸೇವೆಗಳನ್ನು ನೀಡುವ ಮನೋ-ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡಿದ ಜಾನ್ ಎಡಮ್ಸ್ ಮತ್ತು ಮೇರಿ ಎಲೀನ್ ರಿಚ್ಮಂಡ್ ರವರು ಸಾಂತ್ವಾನದ ಮಾದರಿಯಲ್ಲಿ ಹಾಗೂ ಸಾಮಾಜಿಕ ಮನೋವಿಜ್ಞಾನದ ತಳಹದಿಯ ಮೇಲೆ ಮಾನವ ಜೀವನದ ಎಲ್ಲಾ ಆಯಾಮಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಸಮಸ್ಯೆಗಳನ್ನು ಗುರುತಿಸಿ ಸೂಚಿತ ಪರಿಹಾರಗಳನ್ನು ಅನುಷ್ಠಾನಕ್ಕೆ ತರುವ ಜ್ಞಾನ ಶಾಖೆಯಾಗಿ ಸಮಾಜಕಾರ್ಯವನ್ನು ಪರಿಚಯಿಸಿದರು. ಇಂದು ಪ್ರಪಂಚದ ಇತರೆ ರಾಷ್ಟ್ರಗಳಂತೆ ಭಾರತದಲ್ಲಿಯೂ ಒಂದು ಪ್ರೊಫೆಷಿನಲ್ ಕೋರ್ಸ್ ಆಗಿ ಇಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಸಮಾಜದ ಇಂಜನಿಯರ್ ಆಗಿ ಕಾರ್ಯ ನಿರ್ವಹಿಸುತ್ತದೆ.

ಸೋಂಕಿತರನ್ನು ಮಾನವೀಯ ನೆಲೆಗಟ್ಟಿನ ಮೇಲೆ ನಡೆಸಿಕೊಳ್ಳುವ ಸಂಯಮ, ಆತ್ಮಸ್ಥೈರ್ಯ ಮೂಡಿಸುವ ಕಾರ್ಯದಲ್ಲಿ ಸರ್ಕಾರ ಮತ್ತು ಸಮುದಾಯದ ಜನರ ಮನಸ್ಸು ಬಲಗೊಳಿಸುವ ಸಿದ್ಧತೆ ಮಾಡಲು ತೊಡಗಿದ್ದಾರೆ. ವೃತ್ತಿಪರ ಸಮಾಜಕಾರ್ಯವು ವ್ಯಕ್ತಿಗತ, ವೃಂದಗತ ಹಾಗೂ ಸಮುದಾಯಿಕವಾಗಿ ಇಂತಹ ಸಂದರ್ಭದಲ್ಲಿ ಸಂಕಷ್ಟಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ಅಗತ್ಯವಾಗಿದೆ. ಈ ಬಿಕ್ಕಟ್ಟು ಸಂಭವಿಸಿದಾಗ ಇದು ನನಗೆ ಸಂಬಂಧಿಸಿದ್ದು ಎಂಬ ಭಾವನೆ ದೇಶದ ನಿವಾಸಿಗಳಲ್ಲಿ ಬರುವಂತೆ ಆ ಬಗ್ಗೆ ಸಮುದಾಯದ ಜನರನ್ನು ಸಜ್ಜುಗೊಳಿಸುವ ಪ್ರಚಾರ ತೀವ್ರಗೊಳಿಸುವ ಹಾಗೂ ಸಕಾರಾತ್ಮಕ ಮತ್ತು ಚಿಕಿತ್ಸಾತ್ಮಕ ಕಾರ್ಯವು ಇದರ ಉದ್ಧೇಶವಾಗಿದೆ. ನಮ್ಮ ದೇಶ ಮತ್ತು ರಾಜ್ಯ ಸರ್ಕಾರಗಳು ಸಹ ಸಮಾಜಕಾರ್ಯದ ಆಶಯವನ್ನು ಪರಿಗಣಿಸಿ ಕೋವಿಡ್-19ನಿಂದ ಸಂಕಷ್ಟದಲ್ಲಿರುವವರಿಗೆ ನೆರವು, ಸಾಂತ್ವಾನ, ಬೆಂಬಲಾರ್ಥವಾಗಿ ಸಹಾಯ ತಗೆದುಕೊಳ್ಳಲು ಜಿಲ್ಲಾವಾರು ನೋಂದಣೆ ಕಾರ್ಯ ನಿಮ್ಹಾನ್ಸ್ ಗೆ ನೀಡಿ ಕಾರ್ಯ ತತ್ಪರರಾಗಲು ಸಿದ್ಧರಾಗಿಸುವುದು ಸ್ವಾಗತಾರ್ಹ ಕ್ರಮ.

ಆರಂಭಿಕ ಸಮಯದಲ್ಲಿ ಕೋವಿಡ್-19 ಅಪಾಯವನ್ನು ಹಗುರವಾಗಿ ಪರಿಗಣಿಸಿದ ಜಗತ್ತಿನ ರಾಷ್ಟ್ರಗಳಾದ ಇಟಲಿ, ಪ್ರಾನ್ಸ್, ಜರ್ಮನಿ, ಅಮೆರಿಕ, ಬ್ರೆಜೀಲ್, ಆಸ್ಟ್ರೇಲಿಯಾ ಈಗ ಪಶ್ಚಾತ್ತಾಪ ಪಡುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡೆಡ್ ರೋಸ್ ಅದನಾಮ್ ಗೆಬ್ರಯೆಸಸ್ ಕೊರೊನಾ ವೈರಾಣು ವ್ಯಾಪಕವಾಗಿ ಹರಡುತ್ತಿರುವುದರಿಂದ ಇದನ್ನು 'ಜಾಗತಿಕ ಮಹಾಮಾರಿ' (ಪ್ಯಾಂಡೆಮಿಕ್) ಎಂದು ಘೋಷಿಸಿದ್ದಾರೆ. ಹಿಂದೆಂದೂ ಈ ತರಹದ ಸಾಂಕ್ರಾಮಿಕ ರೋಗ ಜಾಗತಿಕವಾಗಿ ವ್ಯಾಪಿಸಿರಲಿಲ್ಲ. ಇದೇ ಮೊದಲು ಬಾರಿಗೆ ಕೊರೊನಾ ವೈರಸ್ ಎಂಬ ಪಿಡುಗು ಪ್ರಪಂಚವೇ ತಲ್ಲಣಗೊಳಿಸಿದೆ ಮತ್ತು ಈ ಕಾಯಿಲೆಗೆ ಲಸಿಕೆ ಅಥವಾ ವ್ಯಾಕ್ಸಿನ್ ಇಲ್ಲ ಎಂದು ಕಳವಳ ವ್ಯಕ್ತಪಡಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ವಚ್ಛತೆಯ ಮಾರ್ಗಸೂಚಿಗಳನ್ನು ಪಾಲಿಸುವುದು ಈ ಸೋಂಕು ಹರಡುವುದನ್ನು ತಡೆಯಲು ಇರುವ ಎರಡು ಅತ್ಯತ್ತಮ ಮಾರ್ಗಗಳು. ನೀವೂ ಬದುಕಿ ಹಾಗೂ ಇತರರಿಗೆ ಬದುಕಲು ಬಿಡಿ ಎಚ್ಚರಿಕೆ, ತಿಳುವಳಿಕೆ ಹಾಗೂ ಸರ್ವರ ಪ್ರಯತ್ನ ಇವುಗಳಿಂದ ಕೊರೊನಾವನ್ನು ಹತೋಟಿಗೆ ತರಬಹುದು. ಈ ಕಾರ್ಯದಲ್ಲಿ ವೈದ್ಯರು, ಪೊಲೀಸರು, ಆರೋಗ್ಯ ಕಾರ್ಯಕರ್ತರು, ವೃತ್ತಿಪರ ಸಮಾಜಕಾರ್ಯಕರ್ತರ ಪಾತ್ರ ಮುಖ್ಯವಾಗಿದೆ ಎಂದಿದ್ದಾರೆ.

ಭಾರತ ಸರ್ಕಾರ ಸೋಂಕು ಹರಡದಂತೆ ಕ್ರಮಗಳ ಕುರಿತಾಗಿ ಹಲವಾರು ಸಲಹೆ-ಸೂಚನೆಯನ್ನು ನೀಡಿದೆ. ಪ್ರತಿ ದಿನವೂ ಹೊಸ ಸೋಂಕಿತರು ಕಾಣಿಸಿಕೊಳ್ಳುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಈ ಭಯ ಹೋಗಲಾಡಿಸಲು, ಅದರೊಂದಿಗೆ ಜೀವಿಸಲು ಮಾನಸಿಕವಾಗಿ ಸಿದ್ಧರಾಗಲು, ಸಹಬಾಳ್ವೆ ಮಾಡಲು ಸಮಾಜಕಾರ್ಯದ ಸಹೃದಯ ಸ್ವಯಂ ಸೇವಕರು ಸಹ ಮಾನಸಿಕ ಪ್ರಥಮ ಚಿಕಿತ್ಸೆ ಹಾಗೂ ಆಪ್ತ ಸಲಹೆಯ ಅವಶ್ಯಕತೆ ಈಡೇರಿಸಲು ನಾವಿನ್ಯತೆಯ ತರಬೇತಿ ಪಡೆದವರಾಗಿರುಗಿರುವುದರಿಂದ ಈ ಸಂದಿಗ್ದತೆಯಲ್ಲಿ ಸಮಾಜಕಾರ್ಯಕರ್ತರು ಜನತೆ ಮತ್ತು ಸರ್ಕಾರದ ನಡುವೆ ಈ ಸಂದರ್ಭದಲ್ಲಿ ಸಂಪರ್ಕ ಸೇತುವೆಯಾಗಿ ತನ್ನ ವೃತ್ತಾತ್ಮಕ ಕಾರ್ಯ ಮಾಡವುದು ಅವಶ್ಯ. ಅಗತ್ಯವಾಗಿ ಬೇಕಾಗಿರುವುದು ಮಾಹಿತಿಯೇ ಇರುವಾಗ ಅದನ್ನು ಹಂಚಿಕೊಂಡು ಪರಸ್ಪರರನ್ನು ಹುರಿದುಂಬಿಸುವಂತಹ ಚಟುವಟಿಕೆಗಳು, ಕೆಲವೊಮ್ಮೆ ವೈದ್ಯರಿಂದ ಪಡೆಯುವ ಗುಳಿಗೆಗಳನ್ನು ತಗೆದುಕೊಳ್ಳುವ ಬದ್ಧತೆ, ಮನಸ್ಸಿಗೆ ಉಲ್ಲಾಸಮಯವಾಗುವ ಯೋಗ ಪ್ರಾಣಾಯಮ, ವ್ಯಾಯಾಮ ಇತರೆ ಕಲೆಗಳನ್ನು ಕಲಿಸಿ ರೂಢಿಗತವಾಗಿಸುವುದು ಹೀಗೆ ಹಲವಾರು ಉಪಾಯಗಳಿಂದ ಶೀಘ್ರವಾಗಿ ಸಹಜ ಸ್ಥಿತಿಗೆ ತರುವುದು ಈ ಸಮಯದಲ್ಲಿ ಕೇವಲ ಒಂದು ಔಪಚಾರಿಕ ವಿದಿಯಷ್ಟೇ ಅಲ್ಲದೆ ಪ್ರಭಾವಿ ಉಪಶಮನ ನೀಡಬಲ್ಲ ಕರ್ತವ್ಯವು ಆಗಿರಬೇಕು ಮತ್ತು ಜನರು ನಿರೀಕ್ಷಿಸುವುದು ಇದನ್ನೇ.

Picture
For More Details
ಸರ್ಕಾರಿ ಅರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮಾಜಕಾರ್ಯಕರ್ತರಾಗಿ, ಆಪ್ತ ಸಲಹೆಗಾರರಾಗಿ, ವೈದ್ಯಕೀಯ, ಮನೋ ವೈದ್ಯಕೀಯ ಸಮಾಜಕಾರ್ಯಕರ್ತರಾಗಿ ಹೆಚ್.ಐ.ವ್ಹಿ/ಏಡ್ಸ್, ಕ್ಷಯ ನಿಯಂತ್ರಣ ಹಾಗೂ ತಂಬಾಕು ನಿಷೇಧ ಕಾರ್ಯಕ್ರಮ. ಸಾರ್ವತ್ರಿಕ ಲಸಿಕೆ ಮತ್ತು ವೈದ್ಯಕೀಯ ಸಮುದಾಯ ಆರೋಗ್ಯ ಶಿಫಾರಸ್ಸು ಸೇವೆಗಳಲ್ಲಿ ಸಮಾಜಕಾರ್ಯಕರ್ತರು ಸಕ್ರಿಯವಾಗಿ ಕಾರ್ಯೋನ್ಮುಖರಾಗಿದ್ದಾರೆ.

ಕೊರೊನಾ ಪಿಡುಗು ಮುಗಿದ ನಂತರವೂ ಮನೋ ವೈದ್ಯಕೀಯ ಸಮಸ್ಯೆಗಳು ಮತ್ತಷ್ಟು ದೀರ್ಘಕಾಲ ಇಡೀ ಜನತೆಯನ್ನು ಕಾಡಬಹುದು. ಮನೋವೈದ್ಯರ ಮೇಲೆ ಈಗಾಗಲೇ ಇರುವ ಕೆಲಸದ ಹೊರೆ ಹೆಚ್ಚಾಗಬಹುದು ಹಾಗಾಗಿ ವೃತ್ತಿಪರ ಸಮಾಜಕಾರ್ಯಕರ್ತರು ಆ ಕೊರತೆಯನ್ನು ನೀಗಿಸಲು ತರಬೇತಿ ತಗೆದುಕೊಂಡ ಪರಿಣಿತರೇ ಇರುವುದರಿಂದ ದೀರ್ಘ ರಜೆಯಿಂದ ಕೆಲ ಜನರಲ್ಲಿ ಏರಬಹುದಾದ ಚಟಗಳು, ನರಳುವ ಆರ್ಥಿಕ ಮುಗ್ಗಟ್ಟಿನ ಪರಿಣಾಮವಾಗಿ ಹೆಚ್ಚುವ ಖಿನ್ನತೆ, ಆತ್ಮಹತ್ಯೆಗಳು ಮಕ್ಕಳಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮಾಜದ ಎಲ್ಲರಿಗೂ ಇಂತಹ ಸಮಯದಲ್ಲಿ ಬೇಕಾದ ಮನೋ ಸಾಮಾಜಿಕ ಚಿಕಿತ್ಸೆಯ ಕುರಿತು ನಮ್ಮ ಆಡಳಿತ ವ್ಯವಸ್ಥೆ ಗಂಭೀರವಾಗಿ ಯೋಚಿಸಬೇಕಿದೆ ಮತ್ತು ಪರಿಹರಿಸಬೇಕಿದೆ. ಶಿಸ್ತುಬದ್ಧವಾದ ಆಪ್ತ ಸಲಹೆ, ನೈತಿಕ ಸ್ಥೈರ್ಯ ಮೂಡಿಸುವ ಕೌಶಲಗಳು, ಮನೋರೋಗ ತಜ್ಞರು, ವಿದ್ಯುಕ್ತವಾಗಿ ಮನಃಶಾಸ್ತ್ರ ಕಲಿತವರಿಂದಲೇ ಸಕಾಗುವುದಿಲ್ಲ ಈ ರೀತಿಯ ತಜ್ಞರ ಸಂಖ್ಯೆಯು ಎಲ್ಲಾ ಜನತೆಗೆ ತಲುಪಲು ಸಾಧ್ಯವೂ ಇಲ್ಲ. ಬದಲಾದ ಸನ್ನಿವೇಶಕ್ಕೆ ಅವಶ್ಯಕ ಸೇವೆಗಳನ್ನು ತಲುಪಿಸುವಲ್ಲಿ ವೃತ್ತಾತ್ಮಕ ಸಮಾಜಕಾರ್ಯಕರ್ತರನ್ನು ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಬೇಕು ಕಾರಣ ಮತ್ತು ಸ್ವಯಂ ಆಗಿ ಕ್ಷೇತ್ರಕ್ಕೆ ಇಳಿಯಬೇಕು. ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದರೂ ಆರೋಗ್ಯಕ್ಕೆ ಸಂಬಂಧಿಸಿದ ಹೊಸ ಸವಾಲುಗಳನ್ನು ವೈದ್ಯಕೀಯ ಕ್ಷೇತ್ರದ ಮುಂದೆ ತಂದಿಡುವುದು ನಿಶ್ಚಿತ. ಈಗಾಗಿ ಮೀಸಲು ಪಡೆಯಂತೆ ಸಿದ್ಧತೆ ಮಾಡಿಕೊಳ್ಳುವುದು ಅವಶ್ಯ.

ಯಾವುದೇ ಆಘಾತವಾದಾಗ ಮತ್ತೇ ಪುಟಿದು ಏಳುವ ಸ್ವಭಾವ ಸಾಧಾರಣ ಎಲ್ಲರಲ್ಲೂ ಇದೆ ಎಂಬುದು ಸ್ವಾಭಾವಿಕ ಮಾತು. ತೀವ್ರತರವಾದ ಬಿಕ್ಕಟ್ಟಿನಲ್ಲಿ ತ್ವರಿತಗೊಳಿಸಬಹುದಾದ ಮಾನಸಿಕ ಸ್ಚಾಸ್ಥ್ಯ ಹಾಗೂ ಚಿಕಿತ್ಸೆ ಅತೀ ಅವಶ್ಯಕ. ಪ್ರೀತಿ, ಸಹಕಾರ, ಸಹಾನುಭೂತಿ, ವಿಶ್ವಾಸ, ಸಹಾಯ ಸಂಬಧಗಳ ಮೂಲವಾದ ಸಮಾಜಕಾರ್ಯವು ಸಹೃದಯ ಸ್ವಯಂ ಸೇವಕರನ್ನು ತರಬೇತಿಗೊಳಿಸುವಾಗ ನೀಡುವ ನೈತಿಕತೆಗಳು.  ಇವರನ್ನು ತಕ್ಷಣ ಬಿಕ್ಕಟ್ಟಿಗೆ ಬಳಸಿದಲ್ಲಿ, ನಮ್ಮಲ್ಲಿರುವ ಸಂಪನ್ಮೂಲಗಳು ಬಳಕೆ ಆಗುತ್ತದೆ ಹಾಗೂ ಇದು ಪರಿಣಾಮಕಾರಿಯೂ ಆಗುತ್ತದೆ ಈ ಸಂಕಷ್ಟದಲ್ಲಿರುವವರ ಪುನರ್ ವಸತಿ, ಮರು ನಿರ್ಮಾಣವೇ ಮಹತ್ವದ ಕಾರ್ಯ.  ಉತ್ತಮ ಯೋಜನೆ, ತಿಳುವಳಿಕೆ ಮತ್ತು ಉಪಶಮನ ಕ್ರಮಗಳನ್ನು ಕೈಗೊಂಡರೆ ನಮ್ಮ ಭವಿಷ್ಯದಲ್ಲಿ ಬಿಕ್ಕಟ್ಟುಗಳ ಪರಿಣಾಮಗಳನ್ನು ಕಡಿಮೆಗೊಳಿಸಬಹುದು. ವಿಕೋಪಗಳು ಅನಿರೀಕ್ಷಿತವಾದವುಗಳಾಗಿರುವುದರಿಂದ ಸಮಸ್ಯೆಗಳು ಬಂದಾಗ ಓಡಾಡುವುದಕ್ಕಿಂತ ಬರದ ಹಾಗೆ ತಡೆಗಟ್ಟುವುದು ಅತಿಮುಖ್ಯವಾದ ಕಾಳಜಿಯಾಗಿದೆ.

ಮೊದಲು ಸೋಂಕಿನ ಪ್ರಮಾಣವನ್ನು ಕಡಿಮೆ ಮಟ್ಟಕ್ಕೆ ಕೊಂಡೊಯ್ಯುವುದು. ಹೊಸ ಸೋಂಕು ಬೆಳೆಯುವುದನ್ನು ನಿಲ್ಲಿಸುವುದು. ಲಸಿಕೆ ಅಥವಾ ವಾಕ್ಸಿನ್ ತಯಾರಿಸಲು ಇದು ಸಮಯ ಮತ್ತು ಸಹಾಯ ಮಾಡುತ್ತದೆ. ಈ ರೀತಿಯಾಗಿ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ಇದು ಸಹಾಯ ಮಾಡುತ್ತದೆ. ಕೊರೊನಾ ವೈರಸ್  ಸೋಂಕನ್ನು ವಿಳಂಬಗೊಳಿಸುವುದು ಮತ್ತು ರೋಗಿಗಳ ಸಂಖ್ಯೆಯನ್ನು ವಿವಿಧ ರೀತಿಯಲ್ಲಿ ಕಡಿಮೆ ಮಾಡುವುದು ಇನ್ನೊಂದು ಮಾರ್ಗವಾಗಿರಬಹುದು. ಕೊರೊನಾ ವೈರಸ್ ಅನ್ನು ಎದುರಿಸಲು ಹೆಚ್ಚಿನ ದೇಶಗಳು ಕಠಿಣ ಕ್ರಮ ಕೈಗೊಂಡಿದ್ದು ಈ ಸದುದ್ಧೇಶದಿಂದ ಎಂದರೆ ತಪ್ಪಾಗಲಾರದು. ಕೊರೊನಾ ಸೋಂಕು ಪೀಡಿತ ದೇಶಗಳ ಪಟ್ಟಿಯಲ್ಲಿ ಭಾರತವು ಈ ಸೋಂಕಿಗೆ ತುತ್ತಾದವರಲ್ಲಿ ಸಾವಿನ ಪ್ರಮಾಣ ಅತೀ ಕಡಿಮೆ! ಕಬಳಿಕೆಗಿಂತ ಹರಡುವಿಕೆ ಮೂಲಕ ಜಗತ್ತನ್ನು ಅಲುಗಾಡಿಸುತ್ತಿರುವುದು ಈ ಸೋಂಕಿನ ವಿಶೇಷ.

ಸಾಮಾನ್ಯವಾಗಿ ಆರೋಗ್ಯವೆಂದರೆ ಅಂಗಾಂಗಳ ಸಹಜ ಕಾರ್ಯ ನಿರ್ವಹಣೆ ಹಾಗೂ ಅನಾರೋಗ್ಯವೆಂದರೆ ಈ ಅಂಗಾಂಗಳ ಬಂಡಾಯವೆಂದು ಸ್ಥೂಲವಾಗಿ ಅರ್ಥೈಸಬಹುದು. ಅದಕ್ಕಾಗಿ ರೋಗ ನಿರೋಧಕ ಶಕ್ತಿ ಬಲಿಷ್ಟವಾಗಬೇಕಾದರೆ ಪೌಷ್ಠಿಕ ಆಹಾರದ ಅವಶ್ಯಕತೆ ಇರುವುದರಿಂದ ಆ ದಿನದ ದುಡಿಮೆ ಅವಲಂಬಿಸಿದ ಹೊಟ್ಟೆ ಇಂದು ಉಪವಾಸದಿಂದ ಬೀಳುವಂತಾಗಿದೆ. ಹಸಿವು ಕೊರೊನಾದಷ್ಟೇ ಬೀಕರ ರೋಗ. ದೈಹಿಕ ಸದೃಢತೆಗೆ ಸಾತ್ವಿಕ ಆಹಾರ. ಅದರಂತೆ ಮನಸ್ಸಿಗೆ ಖುಷಿ ನೀಡುವ ಮನೋರಂಜನೆ, ಕ್ರೀಡೆಗಳು ಉತ್ತಮವಾದ ಸಂಗೀತ ಕೇಳುವುದು. ಉತ್ತಮ ವಾತಾವರಣದಲ್ಲಿ ಜೀವಿಸುವುದು ಎಲ್ಲರ ಹಕ್ಕು ಅದನ್ನು ದೊರಕಿಸಿಕೊಡುವುದು ನಮ್ಮೆಲ್ಲರ ಕರ್ತವ್ಯ

ಹೊಸ ಹೊಸ ರೋಗಗಳು ಹುಟ್ಟುತ್ತಲೇ ಇದ್ದು ವೈದ್ಯಕೀಯ ಸಂಶೋಧನೆಗಳು ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಮುಂದುವರೆಯುತ್ತವೆ. ಅವುಗಳ ಶಮನ, ಉಪಶಮನ, ನಿರ್ಮೂಲನೆಯಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ಸಹಭಾಗಿತ್ವ ಬಹಳ ಮಹತ್ವದ್ದು. ಸಮಾಜಕಾರ್ಯ ವೃತ್ತಿಯೂ ಕಾಲಮಾನಕ್ಕೆ ತಕ್ಕಂತೆ ಬದಲಾಗಬೇಕಾಗುತ್ತದೆ ಇಲ್ಲಿಯವರಿಗೂ ಎಲೆಮರೆಕಾಯಿಯಂತೆ ಇಡನ್ ಆಗಿ ಕೆಲಸ ಮಾಡಿದ ಸಮಾಜ ಕಾರ್ಯವು ಇಂದು ಜನ ಮನ್ನಣೆ ಪಾತ್ರವಾಗಿ, ಕೊರೊನಾ ಮಹಾ ಪಿಡುಗಿನಿಂದ ತತ್ತರಿಸಿದ ಜನರಿಗೆ ಸಾಂತ್ವಾನ ನೀಡಿ ಜನರಿಂದ ಬೆನ್ನು ತಟ್ಟಿಸಿಕೊಳ್ಳುವ ಸತ್ವಪರೀಕ್ಷೆಯ ಈ ಸಮಯ ಭಾರತದಲ್ಲಿನ ಸಮಾಜಕಾರ್ಯಕ್ಕೆ ಭವಿಷ್ಯ ಉಜ್ವಲವಾಗಲು ಜಾತಿ, ಧರ್ಮ, ಮತಯಾವುದೆಂದು ಅರಿಯದೇ ಸಂಕಷ್ಟದಲ್ಲಿರುವವರ ರಕ್ಷಣೆ ನೀಡಲು ಧನಾತ್ಮಕ ಮನೋಭಾವ ಬೆಳೆಸಿಕೊಂಡು ಕೊರೊನಾ ವೈರಾಣುವಿನ ವಿರುದ್ಧ ಹೋರಾಡಲು ಸದೃಢತೆ ಎಲ್ಲರಿಗೂ ಸಿಗಲಿ. ಈ ಸಂಕಷ್ಟದಿಂದ ಎಲ್ಲರೂ ಪಾರಾಗೋಣ. ಎಲ್ಲರೂ ಮನೆಯಲ್ಲಿರಲು ಪ್ರಯತ್ನಿಸಿ. ಸುರಕ್ಷಿತವಾಗಿರಿ. ಬಲವಂತದ ರಜೆಯಲಿ ಸಕಾರಾತ್ಮಕ ಮನೋಭಾವ ನಮ್ಮದಾಗಲಿ.

ಡಾ. ಹಣಮಂತ್ರಾಯ. ಸಿ. ಕರಡ್ಡಿ
ಉಪನ್ಯಾಸಕರು, ಸಮಾಜಕಾರ್ಯ ಅಧ್ಯಯನ ವಿಭಾಗ, ಸ್ನಾತಕೋತ್ತರ ಕೇಂದ್ರ, ರಾಯಚೂರು

2 Comments
Dr. Hanamantraya Karaddi link
4/21/2020 03:40:31 am

Please read and write your opinion

Reply
Irene D.Murnal
4/21/2020 07:36:34 am

Yes that is true..now a days need social worker....im Msw student i will do my work for society

Reply

Your comment will be posted after it is approved.


Leave a Reply.

    Categories

    All
    Conference
    Kannada Articles
    Others
    Registration
    Social Work
    SWFP
    Women

    Social Work Foot Prints

    List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)