ವಾಸುದೇವ ಶರ್ಮಾ ಎನ್.ವಿ. 2 ಸೆಪ್ಟೆಂಬರ್ 2018, ಬೆಂಗಳೂರು ತಾಂತ್ರಿಕ ವಿಚಾರಗಳನ್ನು ಕುರಿತು ಯಾವುದೇ ಭಾಷೆಯಲ್ಲಿ ಸರಳವಾಗಿ ಹೇಳುವುದು ಅಷ್ಟು ಸುಲಭವಲ್ಲ. ಅದು ವೈದ್ಯಕೀಯವಿರಬಹುದು, ಇಂಜಿನಿಯರಿಂಗ್, ವಿಜ್ಞಾನ, ಮಾನವಿಕ ಶಾಸ್ತ್ರಗಳು ಅಥವಾ ಪ್ರದರ್ಶನ ಕಲೆಗಳೇ ಆಗಿರಬಹುದು. ಮೂಲತಃ ಅಂತಹ ತಾಂತ್ರಿಕ ವಿಷಯ, ವಿಚಾರಗಳನ್ನು ವಿವರಿಸಲು ಹೊರಟಾಗ, ಅದರಲ್ಲೂ ಸಾಮಾನ್ಯವಾಗಿ ಆಯಾ ಶಾಸ್ತ್ರ, ಅಧ್ಯಯನಗಳನ್ನು ಕುರಿತು ಆಯಾ ನಿರ್ದಿಷ್ಟ ಭಾಷೆಯಲ್ಲಿ, ಪರಿಸರದಲ್ಲಿ ಅಧ್ಯಯನ, ಶಿಕ್ಷಣ ಹೆಚ್ಚು ಆಗದಿದ್ದಾಗ ಎರಡು ರೀತಿಯ ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಮೊದಲನೆಯದು ಪರಿಕಲ್ಪನೆಗಳನ್ನು ವಿವರಿಸಲು ನಮ್ಮ ಸುತ್ತಮುತ್ತಲಿನ ಪರಿಸರದಿಂದ ಉದಾಹರಣೆ, ಅನುಭವಗಳನ್ನು ಹೇಗೆ ಮತ್ತು ಯಾವುದರಿಂದ ಹೆಕ್ಕುವುದು ಮತ್ತು ಎರಡನೆಯದು, ಅವುಗಳನ್ನು ಅಭಿವ್ಯಕ್ತಿಪಡಿಸಲು ಬೇಕಾದ ಭಾಷೆ ಮತ್ತು ಪದ ಸಂಪತ್ತನ್ನು ಎಲ್ಲಿಂದ ತೆಗೆದುಕೊಳ್ಳುವುದು.
0 Comments
ನವೆಂಬರ್ ಎಂದಾಕ್ಷಣ ನಮಗೆ ಮನಸ್ಸಿಗೆ ಬರುವುದು ಮಕ್ಕಳು ಮತ್ತು ಮಕ್ಕಳ ದಿನಾಚರಣೆ. ಮಕ್ಕಳ ದಿನಾಚರಣೆಯಲ್ಲಿ ಮಕ್ಕಳಿಗೆ ಪುಸ್ತಕವೋ, ಪೆನ್ನೋ, ಸಿಹಿತಿಂಡಿಗಳೋ ಎನೋ ಒಂದು ಕೊಟ್ಟು ಜೊತೆಗೆ ಒಂದಷ್ಟು ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಮಕ್ಕಳನ್ನು ಮನೆಗೆ ಕಳುಹಿಸುವುದು ನಮ್ಮಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಇದನ್ನೆ ನಾವು ವರ್ಷಪೂರ್ತಿ ಮಕ್ಕಳಿಗಾಗಿ ನಾವು ಹಾಗೆ ಮಾಡಿದೆವು, ಹೀಗೆ ಮಾಡಿದೆವು ಎಂದುಕೊಳ್ಳುವವರು ಕಡಿಮೆಯೇನಲ್ಲ. ನೀವು ಮಕ್ಕಳ ದಿನಾಚರಣೆಗೆ ಹೋಗುವ ಮುಂಚೆ ಇದನ್ನು ಸ್ವಲ್ಪ ತಿಳಿದುಕೊಳ್ಳಿ...
ಪೀಠಿಕೆ :
ಲೋಕಾ: ಸಮಸ್ತಾ: ಸುಖಿನೋ ಭವಂತು ಎಂಬ ವೇದೋಕ್ತಿ ನಮ್ಮ ಋಷಿ ಮುನಿಗಳ ಚಿಂತನೆ ಚರಾಚರ ಪ್ರಕೃತಿಯ ಭವ್ಯ ಕಲ್ಪನೆಗೆ ಅದ್ಬುತ ಸಾಕ್ಷಿ, ಅವರು ಪ್ರಕೃತಿಯೊಡನೆ ಸಾಮರಸ್ಯದಿಂದ ಬದುಕಿ, ಸತ್ಯಾನ್ವೇಷಣದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು. ಪ್ರಕೃತಿಯೆಂದರೆ ಅಸಂಖ್ಯಾತ ವೈವಿಧ್ಯತೆಯ ದೃಷ್ಠಿ; ಗೋಚರ, ಅಗೋಚರ, ಸಸ್ಯ ಮತ್ತು ಪ್ರಾಣಿ ಜೀವರಾಶಿಗಳಿಂದ ಕೂಡಿದ ಕಾಡು, ನದಿ, ಭಾವಿ, ಸರೋವರ, ಸಾಗರಗಳಲ್ಲಿ ಕಾಣುವ ಜೀವಕೋಟಿಯ ಸಂಜೀವಿನಿ, ನೀರು ಹಾಗೂ ಇವುಗಳನ್ನು ಆವರಿಸಿದ ಜೀವನದ ಉಸಿರು ಗಾಳಿ, ಶಕ್ತಿ ಮೂಲ ಸೂರ್ಯನನ್ನೊಳಗೊಂಡ ಭೂಮಿ, ಇಂತಹ ಭೂಮಂಡಲ ಇಂದು ಬರಿದಾಗುತ್ತಿದೆ. ಗ್ರಾಮೀಣ ಭಾಗಗಳು ನಗರಗಳಾಗುತ್ತಿವೆ. ನಗರಗಳು ಬದಲಾವಣೆಯ ಶರವೇದದಲ್ಲಿ ತಮ್ಮ ಮೂಲ ನೆಲೆಯನ್ನು ಕಳೆದುಕೊಳ್ಳುತ್ತಿದೆ, ಅಂತಹ ನಗರಗಳಲ್ಲಿ ಬೆಂಗಳೂರು ಸಹ ಒಂದು. ಭಾರತೀಯ ಸಮುದಾಯ ಸಂಘಟನೆಯ ಉಗಮವನ್ನು ವೇದಪೂರ್ವ ಕಾಲದ ಆರ್ಯರ ಜೀವನಪದ್ಧತಿಯಲ್ಲಿಯೇ ಗುರುತಿಸಬಹುದಾಗಿದೆ. ವೇದಪೂರ್ವದಲ್ಲಿ, ಇಡೀ ಭಾರತದೇಶ (ಅಖಂಡ ಭಾರತ)ದಲ್ಲಿ ಸಾವಿರಾರು ಜನಾಂಗಗಳು, ಬುಡಕಟ್ಟುಗಳು, ಸಮುದಾಯಗಳು, ಪಂಗಡಗಳು, ಕುಲಗಳು ಎಂದು ಕರೆಯಲ್ಪಡುವ ಗುಂಪುಗಳು ಅಸ್ಥಿತ್ವದಲ್ಲಿದ್ದವು ಎಂಬ ಅಂಶವನ್ನು ಚರಿತ್ರೆ ದಾಖಲಿಸಿದೆ. ಜನರು ಇಂತಹ ಚಿಕ್ಕ ಚಿಕ್ಕ ಪ್ರಾಚೀನ ಸಮುದಾಯಗಳಲ್ಲಿ ಸಹಜೀವನ ಮಾಡುತ್ತಿದ್ದರು.1 ವೇದಪೂರ್ವ ಕಾಲದ ಸಮುದಾಯಗಳ ಸಹಜೀವನ ಮತ್ತು ಸಂಘಟನೆಯ ಅಂಶಗಳನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಬೇಕೆಂದರೆ, ಅವರ ಯಜ್ಞ, ಸತ್ರ, ಕ್ರತು, ದಾನ ಮುಂತಾದ ಶಬ್ದಗಳ, ಪರಿಕಲ್ಪನೆಗಳ, ಪದ್ಧತಿಗಳ ಹಾಗೂ ಮೌಲ್ಯಗಳ ಬಗ್ಗೆ ತಿಳಿದುಕೊಳ್ಳಬೇಕು.
ಪೀಠಿಕೆ:
ಭಾರತೀಯ ಬುಡಕಟ್ಟು ಸಮುದಾಯಗಳು ಇಂದು ಕವಲುದಾರಿಯಲ್ಲಿವೆ. ಬುಡಕಟ್ಟು ಜನರು ತಮ್ಮ ಸಮಾಜದ ಅರಿವು ಮತ್ತು ಸಾಂಸ್ಕೃತಿಕ ಸಮನ್ವಯದ ನಡುವೆ ಉಭಯ ಸಂಕಟಕ್ಕೊಳಗಾಗಿದ್ದಾರೆ. ತಮ್ಮ ಸಂಸ್ಕೃತಿಯ ಮೇಲೆ ಪರಕೀಯ ಸಂಸ್ಕೃತಿಯ ಒತ್ತಡಗಳಿಂದ ರಕ್ಷಿಸಿಕೊಳ್ಳುವ ಸಮಸ್ಯೆ ಒಂದು ಕಡೆಯಾದರೆ, ಇವರು ತಮ್ಮನ್ನು ತಾವು ಭಾರತೀಯ ಸಮಾಜದ ಮುಖ್ಯವಾಹಿನಿಯಲ್ಲಿ ಒಗ್ಗೂಡುವಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಮತ್ತೊಂದು ಕಡೆಯಾಗಿದೆ. ಬುಡಕಟ್ಟು ಜನರಿಗೆ ರಾಷ್ಟ್ರೀಯ ಮುಖ್ಯವಾಹಿನಿ ಎಂದರೇನು? ಹಿಂದೂ ಮುಖ್ಯವಾಹಿನಿ ಎಂದರೇನು? ಎಂಬ ಬಗ್ಗೆಯೇ ಗೊಂದಲವಿದೆ. ಭಾರತದ ಸಂವಿಧಾನದ ಪ್ರಕಾರ ಧರ್ಮನಿರಪೇಕ್ಷತೆಯು ಮುಖ್ಯವಾಹಿನಿಯಾದರೆ ಬುಡಕಟ್ಟು ಜನರ ಪೌರಜೀವನ ಏನಾಗಬಹುದು? ಬುಡಕಟ್ಟು ಜನರ ಪರಂಪರೆ ಪದ್ಧತಿಗಳು, ನಂಬಿಕೆಗಳು ಅವರದೇ ಆದ ವಿಧಿವಿಧಾನಗಳಿಂದ ಕೂಡಿದ ಜೀವನ ಶೈಲಿಯನ್ನೇ ತ್ಯಜಿಸಿ, ಈ ದೇಶದ ವಿಭಿನ್ನ ಸಂಸ್ಕೃತಿಗಳೊಡನೆ ಏಕೀಕರಣಗೊಂಡರೆ ಇವರು ತಮ್ಮ ಅನನ್ಯತೆಯನ್ನು ತಮ್ಮತನವನ್ನು ಕಳೆದುಕೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಬುಡಕಟ್ಟು ಜನರಲ್ಲಿ ಹಲವಾರು ಸಂದಿಗ್ಧತೆಗಳು ಜಿಜ್ಞಾಸೆಗಳು ಉಂಟಾಗಿ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ ಬದಲಾಗುತ್ತಿರುವ ಆರ್ಥಿಕ ಮತ್ತು ಸಾಮಾಜಿಕ-ರಾಜಕೀಯ ವ್ಯವಸ್ಥೆಯಲ್ಲಿ ಸಾಮಾನ್ಯ ಉತ್ಪಾದನಾ ಸಂಘಟನೆ ಮತ್ತಿತರ ಪ್ರಕ್ರಿಯೆಗಳೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಸಾಂವಿಧಾನಿಕವಾಗಿ ಬದಲಾದ ಜಾತ್ಯಾತೀತ ಪ್ರಜಾಪ್ರಭುತ್ವ ವ್ಯವಸ್ಥೆಯ ಚೌಕಟ್ಟಿನಲ್ಲಿಯೂ ಭಾಗವಹಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಬುಡಕಟ್ಟುಗಳ ಸಮಾಜೋ-ಸಾಂಸ್ಕೃತಿಕ ಜೀವನದ ಮೇಲೆ ಅನ್ಯ ಸಂಸ್ಕೃತಿಗಳ ಪ್ರಭಾವ ಮತ್ತು ಪರಿಣಾಮಗಳು ಜಾಗತೀಕರಣ ಪ್ರಕ್ರಿಯೆ ಮೂಲಕ ಹೇಗೆ ಕಾರ್ಯೋನ್ಮುಖವಾಗುತ್ತಿವೆ ಮತ್ತು ಕರ್ನಾಟಕದ ಬುಡಕಟ್ಟು ಸಮುದಾಯಗಳು ಪ್ರಸ್ತುತತೆಯಲ್ಲಿ ಎತ್ತ ಸಾಗುತ್ತಿವೆ? ಇವುಗಳ ಭವಿಷ್ಯದ ದಿಕ್ಕುಗಳಾವುವು? ಎಂಬುದನ್ನು ಕುರಿತಾದ ಸೂಕ್ಷ್ಮ ಮತ್ತು ಸಮಗ್ರ ಅಧ್ಯಯನಗಳ ಅವಶ್ಯಕತೆ ಇರುವುದರಿಂದ ಪ್ರಸ್ತುತ ಅಧ್ಯಯನದಲ್ಲಿ ಇಂತಹ ಒಂದು ಪ್ರಯತ್ನ ಮಾಡಲಾಗಿದೆ. ಹಸಿವು ಜಗತ್ತಿನ ಸಕಲ ಜೀವರಾಶಿಗಳು ಜೀವನ ಪರ್ಯಂತ ನಿರಂತರವಾಗಿ ಅನುಭವಿಸುವ ಒಂದು ಮನೋದೈಹಿಕ ಸಂಸ್ಥಿತಿ. ಹಸಿವು ಆಹಾರ ಬೇಕೆನ್ನುವುದರ ಸೂಚನೆ. ಆಹಾರ ಜೀವನದ ಬಹುಮುಖ್ಯ ಅವಶ್ಯಕತೆ. ಆಹಾರ ಶಕ್ತಿಯ ಮೂಲ. ಜೀವವಿರುವ ಪ್ರಾಣಿಗಳೆಲ್ಲವೂ ಸದಾ ಕಾಲ ಕ್ರಿಯಾನಿರತವಾಗಿರುತ್ತವೆ. ಎಚ್ಚರವಿರಲಿ, ಇಲ್ಲದಿರಲಿ, ಏನಾದರೂ ಮಾಡುತ್ತಲೇ ಇರುತ್ತವೆ. ನೀವು ವಿಶ್ರಾಂತ ಸ್ಥಿತಿಯಲ್ಲಿರುವಾಗಲೂ ಕಾರ್ಯನಿರತರಾಗಿರುತ್ತೀರಿ. ನಿಮ್ಮ ದೇಹದಲ್ಲಿ ಹಲವಾರು ಕ್ರಿಯೆಗಳು ನಡೆಯುತ್ತಿರುತ್ತವೆ. ನೀವು ಉಸಿರಾಡುತ್ತಿರುವಿರಿ; ರಕ್ತ ಪರಿಚಲನೆ ನಡೆಯುತ್ತಿರುತ್ತದೆ; ಆಹಾರ ಜೀರ್ಣವಾಗುತ್ತಿರುತ್ತದೆ. ನೀವು ಮಾನಸಿಕವಾಗಿ ಏನೋ ಆಲೋಚಿಸುತ್ತಿರಬಹುದು. ನಿದ್ರೆ ಮಾಡುವಾಗ ಕನಸು ಕಾಣುತ್ತಿರಬಹುದು. ಇವೆಲ್ಲದರಲ್ಲೂ ಶಕ್ತಿ ವ್ಯಯವಾಗುತ್ತಿರುತ್ತದೆ.
``ಸಂಘಟನೆ ಯಾವುದೇ ಮನುಷ್ಯ ಸಮಾಜದ ಒಂದು ಅವಿಭಾಜ್ಯ ಅಂಗ.1 ಸಂಘಟನೆ ಮನುಷ್ಯ ಸಮಾಜದಷ್ಟೇ ಹಳೆಯದು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು (ಸಂಪುಟ-8, ಪುಟ-8211) ಸಂಘಟನೆ ಶಬ್ದಕ್ಕೆ ಹೊಂದಿಸುವಿಕೆ, ಜೋಡಿಸುವಿಕೆ, ಸಂಯೋಜಿಸುವಿಕೆ ಎಂಬ ಅರ್ಥಗಳನ್ನು ಕೊಟ್ಟಿದೆ. ಒಟ್ಟುಗೂಡಿಸುವಿಕೆ, ವ್ಯವಸ್ಥೆಗೊಳಿಸುವಿಕೆ ಮುಂತಾದ ಶಬ್ದಗಳೂ ಇದಕ್ಕೆ ಹತ್ತಿರದ ಅರ್ಥವನ್ನು ಕೊಡುವ ಶಬ್ದಗಳಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಅರ್ಥದಲ್ಲಿ ಯಾವುದೇ ಸಮುದಾಯದಲ್ಲಿ, ಸಂಬಂಧಪಟ್ಟ ವ್ಯಕ್ತಿಗಳು, ಒಂದು ಅಥವಾ ಅದಕ್ಕಿಂತ ಹೆಚ್ಚು ಉದ್ದೇಶಗಳನ್ನಿಟ್ಟುಕೊಂಡು, ಆ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಒಂದುಗೂಡಿ ಅವಶ್ಯ ಕ್ರಮಗಳನ್ನು ಕೈಕೊಳ್ಳುವುದಕ್ಕೆ ಸಂಘಟನೆ ಎಂದು ಕರೆಯಬಹುದಾಗಿದೆ. ಚರಿತ್ರೆಯ ಉದ್ದಕ್ಕೂ ಜಗತ್ತಿನಾದ್ಯಂತ, ಸಾವಿರಾರು ಸಮುದಾಯಗಳು, ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಈ ರೀತಿ ಸಂಘಟನೆಯಾಗಿರುವುದನ್ನು ನೋಡುತ್ತೇವೆ.
ಈ ಮೇಲೆ ಗ್ರಾಮೀಣ ಸಮುದಾಯಗಳ ಸಮಸ್ಯೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದೇವೆ, ಅವುಗಳಲ್ಲಿ ಲಿಂಗ ತಾರತಮ್ಯ, ನಿರಕ್ಷರತೆ, ಆರೋಗ್ಯ, ವಸತಿ, ಜನಸಂಖ್ಯೆ, ಬಾಲಕಾರ್ಮಿಕರು, ಜೀತದಾಳುಗಳು, ಅಸ್ಪೃಶ್ಯತೆ, ಮದ್ಯಪಾನ, ನಿರುದ್ಯೋಗ, ಮೂಢನಂಬಿಕೆ, ನಾಗರೀಕ ಸೌಲಭ್ಯಗಳ ಕೊರತೆ ಮುಂತಾದ ಸಮಸ್ಯೆಗಳು ನಗರ ಸಮುದಾಯಗಳಿಗೂ ಅನ್ವಯಿಸಬಹುದಾಗಿದೆ. ಕೆಲವು ಸಮಸ್ಯೆಗಳು ಕೇವಲ ಗ್ರಾಮೀಣ ಸಮುದಾಯಗಳನ್ನಷ್ಟೇ ಕಾಡಿದರೆ, ಇನ್ನೂ ಕೆಲವು ಹೆಚ್ಚಾಗಿ ನಗರ ಸಮುದಾಯಗಳನ್ನು ಪೀಡಿಸುತ್ತಿವೆ. ಕೃಷಿ, ಕೃಷಿ ಸಂಬಂಧಿ ವೃತ್ತಿಗಳು, ಗೃಹಕೈಗಾರಿಕಾ ಕ್ಷೇತ್ರಗಳಲ್ಲಿನ ಸಮಸ್ಯೆಗಳು ಹೆಚ್ಚಾಗಿ ಗ್ರಾಮೀಣ ಸಮುದಾಯದ ಸಮಸ್ಯೆಗಳು, ಅದರಂತೆಯೇ ಬೃಹತ್ ಕೈಗಾರಿಕೆ, ಮಧ್ಯಮ ಮತ್ತು ಸಮ ಪ್ರಮಾಣದ ಕೈಗಾರಿಕೆ, ನಿರುದ್ಯೋಗ, ಸೂಕ್ತ ತಾಂತ್ರಿಕ ಶಿಕ್ಷಣ, ವಾಹನ ಸೌಕರ್ಯ, ಕೊಳಗೇರಿಗಳು, ಸಂಚಾರ ಮುಂತಾದ ಸಮಸ್ಯೆಗಳು ಅತೀವವಾಗಿ ನಗರ ಸಮುದಾಯಗಳನ್ನು ಹಿಂಸಿಸುತ್ತಿವೆ. ನಗರ ಸಮುದಾಯಗಳ ಸಮಸ್ಯೆಗಳನ್ನು ನಗರ ಸಮುದಾಯಗಳ ವೈಲಕ್ಷಣಗಳ ಹಿನ್ನೆಲೆಯಲ್ಲಿ ಗ್ರಹಿಸಬೇಕಾಗುತ್ತದೆ.
ಪೀಠಿಕೆ
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶಿಷ್ಟ ಸ್ಥಾನವಿದೆ. ನಿನ್ನ ಶಕ್ತಿಯ ಬಲದಿಂದಲೇ ವ್ಯಕ್ತಿಯಾದೆನು ನಾನು ಈ ಲೋಕದಲ್ಲಿ ಎಂಬ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪರ ಹೆಣ್ಣಿನ ಮಹತ್ವವನ್ನು ಸಾರುವ ಪದ್ಯವನ್ನು ಉಲ್ಲೇಖಿಸುತ್ತಾ ಸುಶಿಕ್ಷಿತ ಗೃಹಿಣಿ, ಉದ್ಯೋಗಸ್ಥ ಮಹಿಳೆ ದೇಶದ ಆಸ್ತಿ ಮಾತ್ರವಲ್ಲ ಹೆಮ್ಮೆ ಕೂಡ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಂದೂ ಹೆಣ್ಣನ್ನು ಕೊಂಡಾಡಲಾಗಿದೆ. ಇನ್ನೂ ಮುಂದುವರೆದು ಮಾತೆಯಿಂ ಹಿತವರಿಲ್ಲ ಕೋತಿಯಿಂ ಮರುಳಿಲ್ಲ ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವು ಜಾತನಿಂದಲ್ಲ ಸರ್ವಜ್ಞ ಎಂಬ ಸರ್ವಜ್ಞನ ವಚನದಂತೆ ಹೆಣ್ಣು ಮಗಳಾಗಿ, ಸೋದರಿಯಾಗಿ, ಮಡದಿಯಾಗಿ, ತಾಯಿಯಾಗಿ ಕುಟುಂಬದಲ್ಲಿನ ಅವಿಭಾಜ್ಯ ಅಂಗವಾಗಿದ್ದಾಳೆ. ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಹಿತ್ಯ ಕ್ಷೇತ್ರಗಳಲ್ಲಿ ಮಾತ್ರವಲ್ಲದೇ ಸಾಹಸ, ಕಲೆ, ವಿಜ್ಞಾನ, ಕ್ರೀಡೆ, ಸಂಗೀತ.... ಹೀಗೆ ಸರ್ವ ಕ್ಷೇತ್ರಗಳನ್ನೂ ಮಹಿಳೆ ಪ್ರತಿನಿಧಿಸಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಕೈಗಾರಿಕೋದ್ಯಮದಲ್ಲಿ ಪ್ರಗತಿಯನ್ನು ಸಾಧಿಸಲು ಕೆಲವೊಂದು ಅಂಶಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಯಾವುದೇ ಒಂದು ಸಂಸ್ಥೆ ಮುನ್ನಡೆಯಬೇಕು, ಪ್ರಗತಿಯನ್ನು ಸಾಧಿಸಬೇಕು ಎಂದಾದಲ್ಲಿ ಅದಕ್ಕೆ ಆರು ಅಂಶಗಳು ಅತಿಮುಖ್ಯ ಹಾಗೂ ಅತ್ಯವಶ್ಯಕ. ಅವುಗಳೆಂದರೆ ಮಾನವ ಸಂಪನ್ಮೂಲ, ಆಡಳಿತ ವ್ಯವಸ್ಥೆ, ಬಂಡವಾಳ, ಕಚ್ಚಾ ಪದಾರ್ಥ, ಯಂತ್ರಗಳು ಮತ್ತು ಮಾರುಕಟ್ಟೆ. ಈ ಆರರಲ್ಲಿ ಮಾನವ ಸಂಪನ್ಮೂಲ ಹಾಗೂ ಆಡಳಿತ ವ್ಯವಸ್ಥೆ ಅತಿ ಮುಖ್ಯವಾದ ಅಂಶಗಳು. ಇವರಿಬ್ಬರ ಸಂಬಂಧ ಪತಿ-ಪತ್ನಿಯರ ಬಾಂಧವ್ಯದ ಹಾಗೆ.
10. ಆರೋಗ್ಯ : ಗ್ರಾಮೀಣ ಸಮುದಾಯಗಳಲ್ಲಿರುವ ಪ್ರಚಲಿತ ಪ್ರಮುಖ ಸಮಸ್ಯೆಗಳಲ್ಲಿ ಒಂದು ಅನಾರೋಗ್ಯ. ಮನುಷ್ಯರ ಜೀವನದಲ್ಲಿ ಆರೋಗ್ಯ ಒಂದು ಮಹತ್ವದ ಅಂಶ. ಒಂದು ಸಮುದಾಯ ಪ್ರಗತಿಯನ್ನು ಕಾಣಬೇಕಾದರೆ, ಶಾಂತಿ ಸಮಾಧಾನದಿಂದ ಇರಬೇಕಾದರೆ ಅಂತಹ ಸಮುದಾಯದ ಸದಸ್ಯರು ಆರೋಗ್ಯಪೂರ್ಣವಾಗಿರಬೇಕು. `ಆರೋಗ್ಯ ಶಬ್ದಕ್ಕೆ ಆಯುರ್ವೇದ, ಹೋಮಿಯೋಪತಿ, ಅಲೋಪತಿ, ಯನಾನಿ ಮುಂತಾದ ವೈದ್ಯಪದ್ಧತಿಗಳು ಬೇರೆ ಬೇರೆ ಅರ್ಥಗಳನ್ನು ಕೊಡುತ್ತವೆ. ಆರೋಗ್ಯ ಎಂದರೆ ರೋಗವಿಲ್ಲದಿರುವಿಕೆ ಎಂದು ಸರಳವಾಗಿ ಹೇಳಬಹುದಾದರೂ ಆಯುರ್ವೇದ ವಿಜ್ಞಾನದಲ್ಲಿ ಇದಕ್ಕೆ ಸಮಾನವಾಗಿ `ಸ್ವಾಸ್ಥ್ಯ ಶಬ್ದವನ್ನು ಉಪಯೋಗಿಸುತ್ತಾರೆ. ``ಸ್ವಾಸ್ಥ್ಯವನ್ನು ದೋಷ, ಧಾತು, ಮಲಗಳು ತಮ್ಮ ಪ್ರಾಕೃತಿಕ ಸ್ಥಿತಿಗತಿಗಳಲ್ಲಿ ಹಾಗೂ ಆತ್ಮ, ಮನಸ್ಸು, ಇಂದ್ರಿಯಗಳು ಪ್ರಸನ್ನಸ್ಥಿತಿಯಲ್ಲಿ ಇದ್ದು ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿರುವ ಸ್ಥಿತಿ ಎಂದು ವ್ಯಾಖ್ಯಾನಿಸಿದ್ದಾರೆ.4 ವಿಶ್ವ ಆರೋಗ್ಯ ಸಂಸ್ಥೆ, ``ಆರೋಗ್ಯವೆಂದರೆ ಮಾನವನು ರೋಗರಹಿತನಾಗಿರುವುದಲ್ಲ, ಸಂಪೂರ್ಣ ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವುದಾಗಿದೆ5 ಎಂದು ವ್ಯಾಖ್ಯಾನಿಸುತ್ತದೆ. ಆರೋಗ್ಯ ಎಂಬ ಪರಿಕಲ್ಪನೆ ನೈರ್ಮಲ್ಯವನ್ನೂ ಒಳಗೊಂಡಿದೆ. ಹಾಗಾಗಿ ಸಮುದಾಯದ ಪ್ರತಿಯೊಬ್ಬ ಸದಸ್ಯನೂ ತಾನು ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದು ತನ್ನ ಕುಟುಂಬದ ಹಾಗೂ ತನ್ನ ಸಮುದಾಯದ ಒಳಿತಿಗೆ ಶ್ರಮಿಸುವಂತಾಗಬೇಕು.
|
Site
|
Vertical Divider
|
Our Other Websites
|
Vertical Divider
|
+91-8073067542
080-23213710 Mail-hrniratanka@mhrspl.com |
Receive email updates on the new books & offers
for the subjects of interest to you. |