SKH
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
SKH

ಡೀಡ್-ಸ್ವಯಂ ಸೇವಾಸಂಸ್ಥೆ

10/23/2017

0 Comments

 
Picture
ಸ್ಥಾಪನೆಯ ಉದ್ದೇಶ- ಡೀಡ್ (Development through Education) ಶಿಕ್ಷಣ ಮುಖೇನ ಪ್ರಗತಿ ಸ್ವಯಂಸೇವಾ ಸಂಸ್ಥೆಯು 1980 ಸೆಪ್ಟಂಬರ್ 1 ರಂದು ಹುಣಸೂರಿನಲ್ಲಿ ಆದಿವಾಸಿ - ಬುಡಕಟ್ಟು ಜನರ ಕ್ಷೇಮಾಭಿವೃದ್ಧಿಗೆ ಜನ್ಮ ತಾಳಿತು. ಡಾ| ಜರ್ರಿಪೈಸ್ ಹಾಗೂ ಎಸ್ ಶ್ರೀಕಾಂತ್ ಇವರ ಮುಂದಾಳತ್ವದಲ್ಲಿ ಸ್ಥಳೀಯ ಆಸಕ್ತರೊಡಗೂಡಿ ಪ್ರಾರಂಭಿಸಲಾದ ಡೀಡ್ ಅತ್ಯಂತ ಕಟ್ಟಕಡೆಯವರಾದ, ಕಡೆಗಣಿಸಲ್ಪಟ್ಟ ಆದಿವಾಸಿ ಬುಡಕಟ್ಟುಗಳಾದ ಜೇನು ಕುರುಬರು, ಸೋಲಿಗರು ಮುಂತಾದ ಅರಣ್ಯವಾಸಿಗಳ ಬಲವರ್ಧನೆಗೆ, ಅಸ್ತಿತ್ವ, ರಕ್ಷಣೆಗೆ ಕ್ಷೇಮಾಭಿವೃದ್ಧಿಗೆ ಕಾರ್ಯ ಮಾಡಲು ಪ್ರಾರಂಭಿಸಿತು. ಶಿಕ್ಷಣದ ಮೂಲಕ ಕಡೆಗಣಿಸಲ್ಪಟ್ಟವರ ಅಭಿವೃದ್ಧಿ ಸಾಧ್ಯ ಎಂಬ ನಂಬಿಕೆ ಈ ಕಾರ್ಯದ ಉಗಮಕ್ಕೆ ಪ್ರೇರಣೆಯಾಯಿತು. 
ಪ್ರಾರಂಭದಲ್ಲಿ ಕಾಡು-ಉದ್ಯಾನವನಗಳ ಹಿನ್ನೆಲೆಯಲ್ಲಿ ಕಾಡಿನಿಂದ ಹೊರಹಾಕಿಸಿಕೊಂಡು ಜೀವನ ನಿರ್ವಹಣೆಗೆ ಕೂಲಿ, ಜೀತದಲ್ಲಿ ಇದ್ದ ಗಿರಿಜನರನ್ನು (ಆದಿವಾಸಿ) ಜೀತದಿಂದ ಬಿಡಿಸುವ, ರಾತ್ರಿ ಶಾಲೆಗಳನ್ನು ತೆರೆದು ವಯಸ್ಕರ ಶಿಕ್ಷಣ ನೀಡುವ, ಸರ್ಕಾರಿ ನಾಗರಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮ ತಲುಪುವಂತೆ ಮಾಡಲು ಸಮುದಾಯ ಸಂಘಟನೆ ಹೀಗೆ ಕಾರ್ಯ ಪ್ರಾರಂಭಿಸಿ - ಬುಡಕಟ್ಟು ಕೃಷಿಕರ ಸಂಘ ವನವಾಸಿ ಗಿರಿಜನ ಮಹಿಳಾ ಸಂಘ ಸ್ಥಾಪಿಸಿ, ರಾಜ್ಯಮಟ್ಟದಲ್ಲಿ ಗಿರಿಜನ ಕ್ರಿಯಾಕೂಟ ಸ್ಥಾಪಿಸಿ ಆದಿವಾಸಿಗಳ ಶಿಕ್ಷಣ, ಆರೋಗ್ಯ ಮಾನವ ಹಕ್ಕು, ರಕ್ಷಣೆ, ಕೃಷಿ, ಭೂಮಿ ಹಾಗೂ ಅರಣ್ಯ ಹಕ್ಕುಗಳ ಹೋರಾಟಕ್ಕೆ ಆಧ್ಯತೆ ನೀಡಲಾಯಿತು.  
 
ಆದಿವಾಸಿಗಳ ಪ್ರಮುಖ ಹೋರಾಟಗಳು
ಪ್ರಮುಖ ಹೋರಾಟಗಳಲ್ಲಿ ನಾಗರಹೊಳೆಯಿಂದ ತಾಜ್ ಹೊಟೇಲ್ ಹೊರಗಟ್ಟಿದ್ದು, ಎತ್ತಂಗಡಿ ವಿರುದ್ಧ ಹೋರಾಟ, ವಿಶ್ವಬ್ಯಾಂಕ್ ನ ಪರಿಸರ ಅಭಿವೃದ್ಧಿ ಯೋಜನೆಯ ನ್ಯೂನತೆಗಳ ವಿರುದ್ಧ ಹೋರಾಟ, ಭೂಮಿ ಹೋರಾಟ, ಆದಿವಾಸಿ ಪಂಚಾಯ್ತಿ ಕಾಯ್ದೆಗಾಗಿ ಆಗ್ರಹಿಸಿ ಆದಿವಾಸಿ ಸ್ವಯಂ ಆಡಳಿತ ಹೋರಾಟ, ಅರಣ್ಯ ಹಕ್ಕುಗಳಿಗಾಗಿ ಹೋರಾಟ ಜಮ್ಮಾ ಕಾಡಿಗೆ ನುಗ್ಗಿ ಕಾನೂನು ಭಂಗ ಚಳುವಳಿ ಹಮ್ಮಿಕೊಳ್ಳಲಾಗಿ ಈಗ ಪರಿಸ್ಥಿತಿ ತಿಳಿಯಾಗಿದೆ. ಆದಿವಾಸಿ ಸ್ವಯಂ ಆಡಳಿತ/ಪಂಚಾಯ್ತಿ ಕಾಯ್ದೆ 1996. ಆದಿವಾಸಿ ಅರಣ್ಯ ಹಕ್ಕುಗಳ ಮಾನ್ಯತಾ ಕಾಯ್ದೆ 2008 ಜಾರಿಯಾಗಿದೆ. ಆದಿವಾಸಿಗಳ ಪಿತ್ರಾರ್ಜಿತ ಅರಣ್ಯ ಭೂಮಿ ಹಕ್ಕು ಸಂಪ್ರದಾಯಿಕ ಕಾಡಿನ ಸಾಮೂಹಿಕ ಹಕ್ಕು ಪಡೆಯಲು ಹೋರಾಟದ ಕಾರ್ಯ ಮುಂದುವರೆಸಬೇಕಿದೆ. 
 
ಡೀಡ್ ಪ್ರಕಟಣೆಗಳು
ಆದಿವಾಸಿಗಳ ಹೋರಾಟ ಹಾಗೂ ಗ್ರಾಮಾಭಿವೃದ್ಧಿಗೆ ಸಂಬಂಧಿಸಿದಂತೆ ಡೀಡ್ ಕೆಲವು ಪುಸ್ತಕಗಳನ್ನು ಪ್ರಕಟಿಸಿದೆ.
1. ಮೀಸಲಾತಿ ಒಂದು ಗಗನ ಕುಸುಮ
2. ಆದಿವಾಸಿ ಸ್ವಯಂ ಆಡಳಿತ
3. ಸಮುದಾಯ ಸಂಘರ್ಷ
4. ಹೆಜ್ಜೇನು
5. ಹಂಬಲ ಪತ್ರಿಕೆ
6. ನೊಂದವರ ಹಂಬಲದ ಹಾಡುಗಳು
​
ಮುಂತಾದವುಗಳನ್ನು ಹೊರತಂದಿದೆ. ಈಗ 30 ವರ್ಷಗಳ ಸುದೀರ್ಘ ಹೋರಾಟದ ಅನುಭವ ಕಥನವಾಗಿ ಅಜ್ಜಯ್ಯನ ಕಾಡಿನ ಹೊಸ ಹೆಜ್ಜೆ 28-9-10 ರಂದು ಬಿಡುಗಡೆಯಾಗಿದೆ. ಸಾಹಿತಿ ಪತ್ರಕರ್ತ ಪೂರೀಗಾಲಿ ಮರಡೇಶ ಮೂರ್ತಿ ಈ ಕೃತಿ ರಚಿಸಿದ್ದಾರೆ. ಅಲ್ಲದೆ ಆದಿವಾಸಿಗಳ ಬದುಕು - ಬವಣೆ ಬರೆಯಲು ಹಾಗೂ ಪುಸ್ತಕ ಮಾರಾಟ ಮಾಡಲು ಡೀಡ್ ನೆರವಾಗಿದೆ. ಡೀಡ್ ಅಭಿವೃದ್ಧಿ ಕಾರ್ಯಗಳನ್ನು ಕುರಿತು ಕೇಂದ್ರ ಸರ್ಕಾರಕ್ಕೆ ಸಂಶೋಧನಾ ವರದಿಯ ಆಧಾರದ ಮೇಲೆ ಡಾ.ಸಿ.ಪಾರ್ವತಮ್ಮ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಮೈಸೂರು ವಿಶ್ವವಿದ್ಯಾಲಯ, ಇವರು ಆದಿವಾಸಿ ಅಭಿವೃದ್ಧಿ ಪುಸ್ತಕ ಬರೆದಿರುವರು. 
 
ಆದಿವಾಸಿಗಳ ಅರಣ್ಯ ಹಕ್ಕು ಪುನಾವಸತಿಗಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ
ಕಾಕನಕೋಟೆ ಹಾಗೂ ನಾಗರಹೊಳೆ ಅರಣ್ಯವಾಸಿಗಳ ಹಾಗೂ ಅಲ್ಲಿಂದ ಹೊರಹಾಕಲ್ಪಟ್ಟ ಸುಮಾರು 5000 ಕುಟುಂಬಗಳ ಪರವಾಗಿ ಬುಡಕಟ್ಟು ಕೃಷಿಕರ ಸಂಘದ ಜೊತೆಗೂಡಿ ಕರ್ನಾಟಕ ಹೈಕೋರ್ಟ್‍ನಲ್ಲಿ ಡೀಡ್ ಸಂಸ್ಥೆಯು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿ (1999-2000) ನ್ಯಾಯ ಕೇಳಿದ್ದರಿಂದ ಸುಮಾರು 3.500 ಕುಟುಂಬಗಳಿಗೆ ಅರಣ್ಯ ಹಕ್ಕು ಮತ್ತು ಪುನಾವಸತಿ ಹಕ್ಕು ಪಡೆಯಲು ಭೂಮಿಕೆ ಸಿದ್ಧಪಡಿಸಲಾಗಿದೆ. ಅತಂತ್ರ ಸ್ಥಿತಿಯಲ್ಲಿರುವ ಆದಿವಾಸಿಗಳ ಆಹಾರ ಸುರಕ್ಷತೆ, ಜೀವನ ನಿರ್ವಹಣೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಟಿಡಿಎಚ್ ದಾನಿ ಸಂಸ್ಥೆಯು ಬೆಂಬಲವಾಯಿತು.
 
ಆದಿವಾಸಿಗಳೊಂದಿಗೆ ಶಿಕ್ಷಣಕಾರ್ಯ
ಶಿಕ್ಷಣ ಇಲಾಖೆ, ಆಕ್ಷನ್ ಏಡ್, ಅಜೀಮ್ ಪ್ರೇಮ್ ಜಿ ಪೌಂಡೇಶನ್, ಟಿಡಿಎಚ್, ಇವರ ಸಹಕಾರದೊಂದಿಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಲು ವಿಶೇಷ ಶಾಲೆಗಳನ್ನು ತೆರೆದು ಆದಿವಾಸಿ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿಯನ್ನು ಮೂಡಿಸಲಾಯಿತು. ಅಲ್ಲದೆ ಶಿಕ್ಷಣ, ಸಮುದಾಯ ಒಡೆತನ, ಶಿಕ್ಷಣ ಸಮುದಾಯದ ಬಲವರ್ಧನೆಯಿಂದ ಗುಣಯುತ ಶಿಕ್ಷಣಕ್ಕೆ ಪ್ರೇರಣೆ ನೀಡಿ ಆದಿವಾಸಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಸುಮಾರು 2000 ಮಕ್ಕಳು ಈ ಪ್ರಯೋಜನ ಪಡೆದಿದ್ದಾರೆ. ಸುಮಾರು 50 ಮಕ್ಕಳು ಕಾಲೇಜು ಶಿಕ್ಷಣದಲ್ಲಿ ತೊಡಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮಾಜ ಕಲ್ಯಾಣ ಮಂಡಳಿಗಳ ಸಹಾಯದಿಂದ 10 ಶಿಶುಪಾಲನಾ ಕೇಂದ್ರಗಳನ್ನು ಆದಿವಾಸಿ ಮಕ್ಕಳಿಗೆ 18 ವರ್ಷಗಳಿಂದ ನಡೆಸಲಾಗಿದೆ. ಇದರಿಂದ  ಸುಮಾರು 900 ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣ ಸೌಲಭ್ಯ ಪಡೆದು ಪ್ರಾಥಮಿಕ ಶಾಲೆಯಲ್ಲಿ ಚೆನ್ನಾಗಿ ಓದುತ್ತಿದ್ದಾರೆ. ಜಿಲ್ಲಾ ಆಡಳಿತದ ನೆರವಿನಿಂದ ಬಾಲಕಾರ್ಮಿಕ ಮಕ್ಕಳ ಪುನಾವಸತಿಗಾಗಿ ಡೀಡ್ ಸಂಸ್ಥೆಯು ಶಾಲೆ ತೆರೆದು 5 ವರ್ಷಗಳಲ್ಲಿ ಸುಮಾರು 200 ಬಾಲಕಾರ್ಮಿಕ ಮಕ್ಕಳನ್ನು ಪುನಾವಸತಿ ಶಾಲೆಯಲ್ಲಿ ಸಿದ್ದಗೊಳಿಸಿ ಸರ್ಕಾರಿ ಶಾಲೆಗಳಿಗೆ ಸೇರಿಸಲಾಗಿದೆ. ಶಿಕ್ಷಣ ಇಲಾಖೆಯಿಂದ 28 ಹಾಡಿಗಳಲ್ಲಿ ಸರ್ಕಾರಿ ಶಾಲೆಗಳನ್ನು ತೆರೆದು ಆದಿವಾಸಿಗಳ ಶಿಕ್ಷಣಕ್ಕೆ ನೆರವಾಗಲು ಸಹಕರಿಸಲಾಗಿದೆ. 
Picture
ಭೂಮಿ ಹಕ್ಕು ಹಾಗೂ ಸರ್ಕಾರಿ ಸೌಲಭ್ಯ
ರೆವಿನ್ಯೂ ಇಲಾಖೆಯ ಒಡಗೂಡಿ ಮಾಡಿದ ಕಾರ್ಯದಿಂದಾಗಿ ಸುಮಾರು 800 ಹಿರಿಯ ಆದಿವಾಸಿಗಳಿಗೆ ಮಾಸಿಕ ವೇತನ ಸಿಗುತ್ತಿದೆ. ಆಹಾರ ಸರಬರಾಜು ಮಾಡುವ ನ್ಯಾಯಬೆಲೆ ಅಂಗಡಿಗಳನ್ನು ಅದಿವಾಸಿಗಳೇ ನಡೆಸಲು ಪ್ರೇರೇಪಿಸಿ ಸುಮಾರು 1700 ಕುಟುಂಬಗಳು ಅಂತ್ಯೋದಯ ಕಾರ್ಡನ್ನು ಹೊಂದಿ ರಿಯಾಯಿತಿ ದರದಲ್ಲಿ ಪಡಿತರ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ಸುಮಾರು 600 ಕುಟುಂಬಗಳಿಗೆ 1350 ಎಕರೆ ಭೂಮಿಗೆ ಹಕ್ಕು ಪತ್ರ ದೊರಕಿದೆ. ಸಮಾಜಕಲ್ಯಾಣ ಇಲಾಖೆಯಿಂದ 1000ಕ್ಕೂ ಹೆಚ್ಚು ಮನೆಗಳು 38 ಹಾಡಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ವಿದ್ಯುತ್, ಇತ್ಯಾದಿ ಅನುಕೂಲಗಳು ನೇರವಾಗಿ ಹಾಡಿಗಳಲ್ಲಿ ಹೊಂದಲಾಗಿದೆ.
 
ಆದಿವಾಸಿಗಳಲ್ಲಿ ರಾಜಕೀಯ ಆಸಕ್ತಿ
ಜನಾಂಗದ ಅಭಿವೃದ್ಧಿಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆದಿವಾಸಿಗಳು ಕೂಡ ಸಕ್ರಿಯವಾಗಿ ಪಾಲ್ಗೊಳ್ಳಲು ರಾಜಕೀಯ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಗಿರಿಜನರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ವಿವಿಧ ಪಂಚಾಯ್ತಿಗಳ ಮಟ್ಟದಲ್ಲಿ ಸ್ಪರ್ಧಿಸಿ ಅನುಭವ ಪಡೆದಿದ್ದಾರೆ. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸ್ಥಾನದವರೆಗೂ ಇವರ ಪ್ರಯತ್ನ ನಡೆದಿದೆಯಾದರೂ ಬಹು ಸಂಖ್ಯಾತರ ನಡುವೆ ಸ್ಪರ್ಧಿಸಲು ಸಾಮರ್ಥ್ಯ ಸಾಲದೆ ಇರುವುದರಿಂದ ರಾಜಕೀಯವಾಗಿ ಮೇಲೆ ಬರಲು ಇನ್ನೂ ಸಾಧ್ಯವಾಗಿಲ್ಲ. ಆದರೂ ಗ್ರಾಮಸಭೆಗೆ ಪರಮಾಧಿಕಾರ ಎಂಬ ಸ್ವಯಂ ಆಡಳಿತದ ಪ್ರಕ್ರಿಯೆಯಲ್ಲಿ ಸಾಕಷ್ಟು ಹೋರಾಟ ನಡೆಸಿದ್ದಾರೆ. ಇದರ ಫಲವಾಗಿಯೇ ಅನುಸೂಚಿತ ಪ್ರದೇಶಗಳ ಬುಡಕಟ್ಟು ಪಂಚಾಯ್ತಿ ಕಾಯ್ದೆ ಕೇಂದ್ರ ಸರ್ಕಾರದಿಂದ ಜಾರಿಯಾಗಿದೆ. ರಾಜ್ಯ ಸರ್ಕಾರವು ಆದಿವಾಸಿಗಳಿಗಾಗಿ ಪ್ರತ್ಯೇಕ ಪಂಚಾಯ್ತಿಗಳನ್ನು ಈ ಕಾಯಿದೆಯಡಿ ರಚಿಸಬೇಕಾಗಿದೆ.

ಅರಣ್ಯ ಹಕ್ಕು ಪಿತ್ರಾರ್ಜಿತವಾಗಿ ಪಾರಂಪರಿಕವಾಗಿ ಅನುಭವಿಸಿಕೊಂಡು ಬಂದ ಅರಣ್ಯ ಭೂಮಿಯ ಸಾಮೂಹಿಕ ಹಕ್ಕು ಹೊಂದಲು ಅರಣ್ಯ ಹಕ್ಕುಗಳ ಮಾನ್ಯತಾ ಕಾಯ್ದೆಯ ಅನ್ಯಯ 1300 ಅರ್ಜಿಗಳನ್ನು  ವೈಯಕ್ತಿಕ ಅರಣ್ಯ ಭೂಮಿ ಹಕ್ಕಿಗಾಗಿ 56 ಹಾಡಿಗಳಿಂದ ಸಾಮೂಹಿಕ ಅರಣ್ಯ ಹಕ್ಕಿಗಾಗಿ ಗೆಡ್ಡೆ ಗೆಣಸು ಸಂಗ್ರಹ, ಪೂಜಾ ಸ್ಥಳ, ಸ್ಮಶಾನಗಳ ಬಳಕೆ, ಹಾಡಿ ಗಡಿ ಅರಣ್ಯಗಳ ರಕ್ಷಣೆ, ಪಾರಂಪರಿಕ ಕೃಷಿ ಪದ್ದತಿ, ಮುಂತಾದ ಅರ್ಜಿಗಳನ್ನು ಸಲ್ಲಿಸಲಾಗಿದೆ. ಮೇಲ್ಮನವಿಗಳನ್ನು ಜಿಲ್ಲಾ ಅರಣ್ಯ ಹಕ್ಕಿನ ಸಮಿತಿಗೆ ಸಲ್ಲಿಸಲಾಗಿದೆ. ಈ ಸಂಬಂಧ ಆದಿವಾಸಿಗಳಿಗೆ ಇನ್ನು ನ್ಯಾಯ ಸಿಗಬೇಕಿದೆ. ಈ ಹೊಸ ಕಾನೂನಿಂದಾಗಿ ಆದಿವಾಸಿಗಳ ಅಸ್ತಿತ್ವ ಪುನರ್ ಸ್ಥಾಪಿಸಲು ಪಿತ್ರಾರ್ಜಿತ ಹಾಗೂ ಪಾರಂಪರಿಕ ಅರಣ್ಯಗಳ ಹಕ್ಕುಗಳ ಮೇಲೆ ಹಕ್ಕು ಪತ್ರ ಪಡೆಯಲು ಆಶಾದಾಯಕ ಸಂದರ್ಭ ಸೃಷ್ಟಿಯಾಗಿದೆ.
ಮೂವತ್ತು ವರ್ಷಗಳ ಈ ಸುದೀರ್ಘ ಕಾರ್ಯದಲ್ಲಿ ಡೀಡ್ ಒಂದು ಪ್ರೇರಣೆ ಮತ್ತು ನೆಪ ಮಾತ್ರ. ಹಲವರ ಬೆಂಬಲ ನೆರವು ಸಹಕಾರದಿಂದ ಈ ಕಾರ್ಯ ಇಲ್ಲಿಯವರೆಗೆ ಸಾಧ್ಯವಾಗಿದೆ.
 
ಈಗಿನ ಕಾರ್ಯಕ್ರಮಗಳು
  1. ಅರಣ್ಯ ಹಕ್ಕು ಪಡೆಯಲು ಆದಿವಾಸಿಗಳಿಗೆ ನೆರವು ಮತ್ತು ಆದಿವಾಸಿ ಆಸ್ಮಿತೆ ರಕ್ಷಣೆ - ಸಮುದಾಯ ಬಲವರ್ಧನೆ (BMZ – TDH ನೆರವು)
  2. ಆದಿವಾಸಿ ಶಿಶುಪಾಲನೆ - ಪೂರ್ವ ಪ್ರಾಥಮಿಕ ಶಿಕ್ಷಣಕೇಂದ್ರ ಹಾಗೂ ರಾಜ್ಯ ಸಮಾಜ ಕಲ್ಯಾಣ ಮಂಡಳಿ ನೆರವು ಔಪಚಾರಿಕ ಶಿಕ್ಷಣ ನೆರವು
  3. ಬಾಲಕಾರ್ಮಿಕ ಮಕ್ಕಳ ಪುನರ್ ವಸತಿ ವಿಶೇಷ ಶಾಲೆ(ಜಿಲ್ಲಾಡಳಿತದ ನೆರವು)
  4. ಸಮುದಾಯ ಸಂಘಟನೆ - ಹಂಬಲ ಪತ್ರಿಕೆ ಪ್ರಕಟನೆ (ಡೀಡ್)
  5. ಜೈವಿಕ ಇಂಧನ ಮಂಡಳಿ ಜತೆ ಸಹಕರಿಸಿ ರೈತರು ಜೈವಿಕ ಇಂಧನ ಮರ ಬೆಳೆಸಲು ಸಹಕಾರ
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
+91-9980066890
+91-8310241136
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)