SKH
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
SKH

ಮಾಧ್ಯಮ :- ಪ್ರಜಾಸತ್ತೆ

5/22/2020

0 Comments

 
Picture
ಪ್ರೊ. ಆರ್.ಶಿವಪ್ಪ
ಕುಲಸಚಿವರು,  ಮೈಸೂರು ವಿಶ್ವವಿದ್ಯಾಲಯ, ಮೈಸೂರು

ಗಾಂಧೀಜಿ ಎಂಬುದು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ತತ್ವ, ಅವರು ಈ ಯುಗದ ಸತ್ಯ. ಗಾಂಧೀಜಿ ಎಂಬುದು ಬರೀ ಹೆಸರಲ್ಲ, ಬಹು ದೊಡ್ಡ ಮೌಲ್ಯ. ಅವರ ಜೀವನ ಕ್ರಮ ಭಾರತೀಯ ಜೀವನ ಪದ್ದತಿಯ ಯಶಸ್ವೀ ಪ್ರಯೋಗ ಶಾಲೆ. ಈ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರಸಾರವಾಗುತ್ತಿರುವ ಸಿದ್ದಾಂತಗಳಲ್ಲಿ ಗಾಂಧಿ ಕುರಿತಾದ ಸಾಹಿತ್ಯ, ಬರವಣಿಗೆ, ಪುಸ್ತಕಗಳೂ ಕೂಡ ಬಹು ಪ್ರಾಮುಖ್ಯತೆಯನ್ನು ಪಡೆದಿವೆ, ಪತ್ರಿಕೋದ್ಯಮಿ, ಸಮಾಜ ವಿಜ್ಞಾನಿ, ಸರ್ವೋದಯ ನೇತಾರ, ಶಿಕ್ಷಣತಜ್ಞ, ಸಾಹಿತ್ಯರತ್ನ, ತತ್ವಜ್ಞಾನಿ, ಹಾಸ್ಯ ಗಂಭೀರ, ಸ್ವದೇಶಿನಿಷ್ಠ, ವಕೀಲ ಎಂದೆಲ್ಲಾ ಹೆಸರಾದ ಗಾಂಧೀಜಿ ಮಾನವೀಯತೆಯ ಮಂಗಳ ರೂಪ, ನಾಳಿಯ ಯುಗ ವಿಜ್ಞಾನ ಮತ್ತು ವೇದಾಂತದ್ದು ಆದರೆ ಆಯುಗದ ಮೊದಲ ದಾರ್ಶನಿಕ ಗಾಂಧೀಜಿ ಎಂಬುದು ವಾಸ್ತವ. ಗಾಂಧೀಜಿಯವರ ವಿಚಾರಗಳು ಯಾವುದೇ ಇರಲಿ ಅವುಗಳು ದ್ವೇಷ, ಅಸೂಯೆ, ಹಿಂಸೆಯಿಂದ ಮುಕ್ತಗೊಳಿಸಿ ಮನುಷ್ಯನನ್ನಾಗಿ ಮಾಡುತ್ತವೆ. ಹೀಗಾಗಿ ಜಗತ್ತಿನ ಯಾವುದೇ ವಿಚಾರಗಳು ಗಾಂಧಿ ತತ್ವಗಳನ್ನು ಹೊರತುಪಡಿಸಿ ಮೌಲಿಕವಾಗಲಾರವು. 
ಮಾಧ್ಯಮದ ಪತ್ರಿಕಾರಂಗದಲ್ಲಿ ಇವತ್ತು ಮತ್ತು ನಾಳೆ ಎಂಬ ಪ್ರಶ್ನೆಗಳು ಬಹಳ ಪ್ರಧಾನವಾಗುತ್ತವೆ. ಸ್ವಸ್ಥ ಸಮಾಜ ಹಾಗೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪತ್ರಿಕಾರಂಗದ ಪಾತ್ರ ಬಹಳ ಮಹತ್ವದ್ದಾಗಿದೆ. ಸಾಮಾಜಿಕ, ರಾಜಕೀಯ, ಆರ್ಥಿಕ ರಂಗಗಳಲ್ಲಿ ಹಲವಾರು ಸ್ಥಿತ್ಯಂತರಗಳನ್ನು ಕಾಣುತ್ತಿದ್ದೇವೆ. ಜಾಗತೀಕರಣದ ಕಾಲಘಟ್ಟದಲ್ಲಿ ಸಾಮಾಜಿಕ ಬದುಕು ಅತಂತ್ರ ಸ್ಥಿತಿಯನ್ನು ತಲುಪಿದೆ. ಇಂತಹ ಲೌಕಿಕ ಬಹುತೇಕ ಹಂತಗಳಲ್ಲಿ, ಮಜಲುಗಳಲ್ಲಿ ಆರೋಗ್ಯಯುತವಾದ ಪತ್ರಿಕಾರಂಗದ ಪಾತ್ರ ಮುಖ್ಯವೆನಿಸುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳು ಸಮರ್ಥವಾಗಿ ಕಾರ್ಯನಿರ್ವಹಿಸುವಂತಾಗಲು ಮಾಧ್ಯಮಗಳ ಪಾತ್ರ ಹಿರಿದಾದುದಾಗಿದೆ. ರಾಜಕೀಯ ಪ್ರಕ್ಷುಬ್ದತೆಯ ಪರಿಸ್ಥಿತಿಯಲ್ಲಿ ಪತ್ರಿಕಾ ಮಾಧ್ಯಮ ಅವುಗಳ ನಿವಾರಣೆಯಲ್ಲಿ ಪರಿಹಾರ ಮಾರ್ಗಗಳನ್ನು ಸೂಚಿಸಬೇಕಾಗಿದೆ.  

ಮಾಧ್ಯಮವನ್ನು ಹೊಸ ಆಯಾಮಗಳಲ್ಲಿ, ವಿಭಿನ್ನತೆಗಳಲ್ಲಿ ನಾವು ಈ ದಿನಗಳಲ್ಲಿ ಕಾಣಬಹುದಾಗಿದೆ. ಏನೇ ಆದರೂ ಮಾಧ್ಯಮಗಳು ಸಮಾಜಮುಖಿಯಾದ ಸಂದೇಶಗಳನ್ನು ಪ್ರಜೆಗಳಿಗೆ ನೀಡುವ ಮೂಲಕ ಪ್ರಜಾಸತ್ತೆಯನ್ನು ಉಳಿಸುವಂತಹ, ಬೆಳೆಸುವಂತಹ, ಗಟ್ಟಿಗೊಳಿಸುವಂತಹ ಕಾರ್ಯವನ್ನು ಮಾಡುತ್ತಿವೆ.

ಪ್ರಜಾಸತ್ತಾತ್ಮಕ ಸಮಾಜ ರಚನೆಗೆ ಬೇಕಾದುದು ರಾಜನೀತಿಯಲ್ಲಿ ಲೋಕನೀತಿ, ಶಸ್ತ್ರಶಕ್ತಿಯ ಅವಲಂಬನೆಯಲ್ಲಿ ಜನಶಕ್ತಿಯ ನೈತಿಕ ಪ್ರಭಾವದಲ್ಲಿಯ ಕೇಂದ್ರಿತ ರಾಜ್ಯಾಧಿಕಾರವಲ್ಲ, ಜನರಿಂದ ಜನರಿರಾಗಿ ಆಯ್ಕೆಗೊಂಡಂತಹ ಪ್ರಜಾಪ್ರಭುತ್ವವೇ ನಿಜವಾದ ಪ್ರಜಾಸತ್ತೆ (Democracy) ಪ್ರಜಾಸತ್ತೆಯ ವ್ಯವಸ್ಥೆಗಟ್ಟಿಗೊಳ್ಳದ ಹೊರತು ದೇಶದ ಭದ್ರ ಬುನಾದಿ ಸಾಧ್ಯವಿಲ್ಲ ಎಂದು ಗಾಂಧೀಜಿ ಹೇಳಿದ್ದರು. ಅವರ ಆದರ್ಶ ಪ್ರಜಾಪ್ರಭುತ್ವ ಪರಿಕಲ್ಪನೆ ಇಂದಿಗೂ ಸಾಧ್ಯವಾಗದಿರುವುದು ದುರ್ದೈವದ ಸಂಗತಿ. ಈ ಸಂದರ್ಭದಲ್ಲಿ ಗಾಂಧಿ ಮರುಹುಟ್ಟನ್ನು ನಾವು ಎದುರು ನೋಡಬೇಕಿದೆ.
​
ಪ್ರಜಾಸತ್ತೆಯಲ್ಲಿ ಮೌಲ್ಯಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ ಗಾಂಧಿ ವಿಚಾರ ಪರಿಷತ್ತು, ಮೈಸೂರು ಮತ್ತು ಮೈಸೂರು ವಿಶ್ವವಿದ್ಯಾನಿಲಯ, ಗಾಂಧಿ ಅಧ್ಯಯನ ಕೇಂದ್ರ, ಗಾಂಧಿಭವನ ಮಾಧ್ಯಮ: ಪ್ರಜಾಸತ್ತೆ ಕುರಿತ ಗಾಂಧಿ ಪ್ರಣೀತ ವಿಚಾರ ಸಂಕೀಣವನ್ನು ಏರ್ಪಡಿಸುವುದರ ಮೂಲಕ ಜಾಗೃತಗೊಳಿಸಿದೆ. ಮಾಧ್ಯಮಗಳು ಕೇವಲ ಸತ್ಯ, ಆದರ್ಶಗಳನ್ನು ಬಿತ್ತರಿಸುವುದು ಮುಖ್ಯವಲ್ಲ. ಪ್ರತಿಯೊಬ್ಬರೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿಚಾರಗಳನ್ನು ಹೇಳುವುದರ ಬದಲು ಪಾಲಿಸುವುದರ ಜೊತೆಗೆ ಇತರರು ಅನುಸರಿಸುವಂತೆ ಪ್ರೇರೇಪಿಸಬೇಕು. ಒಟ್ಟಿನಲ್ಲಿ ಮಾಧ್ಯಮ ಮತ್ತು ಪತ್ರಿಕಾರಂಗಗಳ ಬಗ್ಗೆ ಜನರಲ್ಲಿ ಪ್ರೀತಿ ವಿಶ್ವಾಸ ಮೂಡಿಸುವಂತಹ ಸ್ಥಿತಿ ನಿರ್ಮಾಣವಾಗಬೇಕಿದೆ. ಮಾಧ್ಯಮ : ಪ್ರಜಾಸತ್ತೆ ಯಶಸ್ವಿಗೊಳ್ಳಬೇಕಾದರೆ ಜನರ ಸಹಭಾಗಿತ್ವವೂ ಕೂಡ ಪ್ರಧಾನವಾಗುತ್ತದೆ.

ಪ್ರೊ. ಆರ್.ಶಿವಪ್ಪ
ಕುಲಸಚಿವರು,  ಮೈಸೂರು ವಿಶ್ವವಿದ್ಯಾಲಯ, ಮೈಸೂರು

Picture
For More Details
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)