SKH
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
SKH

ಭಾರತದ ಸಮಾಜಕಾರ್ಯ ಕ್ಷೇತ್ರದ ನವರತ್ನಗಳು

6/26/2017

0 Comments

 
Picture
ದಿ ಬ್ಯಾನ್ಯನ್ ನ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ಟ್ರಸ್ಟ
ಜಾಗತೀಕರಣದೊಂದಿಗೆ, ಮಾನಸಿಕ ಆರೋಗ್ಯವೂ ಒಂದು ಪ್ರಮುಖ ಕಳಕಳೀಯ ಕ್ಷೇತ್ರವಾಗಿದೆ ಮತ್ತು ಭಾರತದ ಜನಸಂಖ್ಯೆಯ ಶೇಕಡ 10 ರಿಂದ 12ರಷ್ಟು ಜನರಿಗೆ ಇದರ ನೆರವಿನ ಅವಶ್ಯಕತೆಯಿದೆ. ಇದಕ್ಕಾಗಿ, ನಮ್ಮಲ್ಲಿ ಮಾನಸಿಕ ಅಸ್ವಸ್ಥತೆಗೆ ಕೇವಲ ವೈದ್ಯಕೀಯ ವಿಧಾನದ ಹೆಚ್ಚೆಚ್ಚು ಮನೋವೈದ್ಯರಿದ್ದಾರೆ. ಆದರೆ ಮಾನಸಿಕ ಆರೋಗ್ಯವು ವೈದ್ಯಕೀಯ ವಿಷಯಕ್ಕಿಂತಲೂ ಹೆಚ್ಚಿನದು. ಇದು ಸಾಮಾಜಿಕ ಕಲ್ಪನೆಯೂ ಹೌದು. ವಿವಿಧ ಸಾಮಾಜಿಕ-ಆರ್ಥಿಕ, ರಾಜಕೀಯ, ಕೌಟುಂಬಿಕ ಮತ್ತು ಮಾನಸಿಕ ಪ್ರಕ್ರಿಯೆಗಳು ಮಾನಸಿಕ ಅಸ್ವಸ್ಥೆತೆಗೆ ಕಾರಣವಾಗಿರುತ್ತದೆ. ನಿರ್ಗತಿಕ ಮಹಿಳೆಯರ ಅವಶ್ಯಕತೆಗೆ ಸ್ಪಂದಿಸುವುದಕ್ಕಾಗಿ ದಿ ಬ್ಯಾನ್ಯನ್ 1993 ರಲ್ಲಿ ಚೆನ್ನೈನಲ್ಲಿ ಪ್ರಾರಂಭವಾಯಿತು. ಇದು ಲಾಭದ ಉದ್ದೇಶ ಹೊಂದಿರದ ನೊಂದಾಯಿತ ಸಂಸ್ಥೆಯಾಗಿದೆ, ಇದು ಮಾನಸಿಕ ಅಸ್ವಸ್ಥರಿಗೆ, ಸಮುದಾಯಗಳಲ್ಲಿ ನಿರಾಶ್ರಿತರಾಗಿ ಮತ್ತು ಬಡತನದಿಂದ ಜೀವಿಸುತ್ತಿರುವವರಿಗೆ ಸಮಗ್ರ ಮಾನಸಿಕ ಆರೋಗ್ಯ ಪರಿಹಾರಗಳನ್ನು ಒದಗಿಸುತ್ತದೆ. 
ಬ್ಯಾನ್ಯನ್ನ ಸಂಸ್ಥೆಯು ನಿರಾಶ್ರಿತ, ಮಾನಸಿಕ ಅಸ್ವಸ್ಥತೆ, ಬಡತನ ಮತ್ತು ಇವುಗಳಿಂದ ತೊಂದರೆಗೊಳಗಾದವರ ಮೇಲಿನ ಸುಮಾರು ಎರಡು ದಶಕಗಳಿಗೂ ಹೆಚ್ಚಿನ ಕಾಲದ ಆಳವಾದ ತನಿಖೆಯಿಂದ ಹೊಂದಿಕೊಳ್ಳುವಂತಹ ಮಾನಸಿಕ ಸ್ವಾಸ್ಥ್ಯ ವ್ಯವಸ್ಥೆಗಳ ಚೌಕಟ್ಟನ್ನು ಅಭಿವೃದ್ಧಿಪಡಿಸಿತು ಮತ್ತು ಇದರೊಂದಿಗೆ ಚೇತರಿಕೆಯ ಮಾರ್ಗದಲ್ಲಿ ವ್ಯಕ್ತಿಗಳ ಅಗತ್ಯತೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಿತು. ಇಂದು ಬ್ಯಾನ್ಯನ್ ಸಂಸ್ಥೆಯು ಸುಮಾರು 8 ನಗರ ಮತ್ತು ಗ್ರಾಮೀಣ ಪ್ರದೇಶಗಳಾದ್ಯಂತ 7000 ಕ್ಕೂ ಹೆಚ್ಚಿನ ಜನರನ್ನು ತಲುಪಿದೆ. ಮಾನಸಿಕ ಆರೋಗ್ಯ ವಲಯದಲ್ಲಿನ ಸಮಸ್ಯೆಗಳ ಸಂಕೀರ್ಣತೆ ಮತ್ತು ಹುದುಗುವಿಕೆಗಳನ್ನು ಬ್ಯಾನ್ಯನ್ನ ಆದ್ಯ ಪ್ರವರ್ತಕರು ಗುರುತಿಸಿ ತಮ್ಮ ನವೀನ ಮಾರ್ಗಗಳ ಮೂಲಕ ವೈಯಕ್ತಿಕ, ಸಮುದಾಯ ಮತ್ತು ಆಡಳಿತ ಮಟ್ಟದಲ್ಲಿ ಕಾಂಚೀಪುರಂ ಜಿಲ್ಲೆಯ, ತಿರುಪೊರೂರ್ ಘಟಕದ 50 ಗ್ರಾಮಗಳು ಮತ್ತು ಚೆನ್ನೈ ಜಲ್ಲೆಯ 9 ವಾರ್ಡ್‍ಗಳಾದ್ಯಂತ ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ. ಇದರಿಂದ ಒಟ್ಟು 4,50,000 ಕ್ಕೂ ಹೆಚ್ಚಿನ ಜನರ ಉಪಯೋಗವನ್ನು ಪಡೆದುಕೊಂಡಿದ್ದಾರೆ. ಬ್ಯಾನ್ಯನ್ನ ವಿವಿಧ ಮಾನಸಿಕ ಆರೋಗ್ಯ ನಿಗಾ ಸೇವೆಗಳು ಮತ್ತು ಪರಿಹಾರ ಕಾರ್ಯಗಳು ಈ 4 ಪ್ರಮುಖ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ:
  1. ನಿರಾಶ್ರಿತ ವ್ಯಕ್ತಿಗಳಿಗೆ ಮಾನಸಿಕ ಆರೋಗ್ಯದ ಚಿಕಿತ್ಸೆಯೊಂದಿಗೆ ತುರ್ತು ಮತ್ತು ಔಷಧೀಯ ಸೇವೆ.
  2. ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಜೀವನೋಪಾಯದ ಆಯ್ಕೆಗಳು
  3. ಆರೋಗ್ಯ ಮತ್ತು ಮಾನಸಿಕ ಆರೋಗ್ಯ ವ್ಯವಸ್ಥೆಗಳು
  4. NALAM: ಕೌಶಲ್ಯ ಅಭಿವೃದ್ಧಿ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಆರೋಗ್ಯಕರ ಸ್ಥಿತಿ.
ಬ್ಯಾನ್ಯನ್ ಮಾದರಿಯ ಮಾನಸಿಕ ಆರೋಗ್ಯ ಸೇವೆಯು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನ್ಯೂರೋಸೈನ್ಸ್ ಸಂಸ್ಥೆಯಿಂದ (NIMHANS, ಬೆಂಗಳೂರು)  ಮತ್ತು ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಪರಿಶೀಲಿಸಲ್ಪಟ್ಟಿದೆ. ಎರಡೂ ಸಂಸ್ಥೆಯು ಬ್ಯಾನ್ಯನ್ ಮಾದರಿಯನ್ನು ಅಂಗೀಕರಿಸಿದೆ ಹಾಗೂ ಮಾನಸಿಕ ಆರೋಗ್ಯದ ಪರಿಣಾಮಗಳ ಸುಧಾರಣೆ, ಮಾನಸಿಕ ಆರೋಗ್ಯದ ಕ್ಷೇಮ ಮತ್ತು ಚೇತರಿಕೆಯ ಉತ್ತೇಜನದಲ್ಲಿ ಪ್ರಧಾನ ಪಾತ್ರ ವಹಿಸುವ ಬ್ಯಾನ್ಯನ್ನ ಹಕ್ಕುಗಳ ಆಧಾರಿತ, ಸಹಯೋಗಿ ಮತ್ತು ಸಮಗ್ರ ವಿಧಾನಗಳನ್ನು ಅಂಗೀಕರಿಸಿದೆ. ಬ್ಯಾನ್ಯನ್ ಸಂಸ್ಥೆಯು ತತ್ವಶಾಸ್ತ್ರದಲ್ಲಿ ಮತ್ತು ಆಳವಾದ ಒಪ್ಪಂದದ ಮೌಲ್ಯದಲ್ಲಿ ದೃಢವಾಗಿ ಬೇರೂರಿದೆ. ಪರಿಣಾಮವನ್ನು ಚುರುಕುಗೊಳಿಸುವ ಸಲುವಾಗಿ ಸರ್ಕಾರ, ಪೌರ ಸಮಾಜ ಸಂಸ್ಥೆ, ಸಮುದಾಯ ಆಧಾರಿತ ಸಂಸ್ಥೆಗಳು, ವ್ಯಕ್ತಿಗಳು ಮತ್ತು ಸಮಷ್ಟಿಗಳೊಂದಿಗಿನ ಪಾಲುದಾರಿಕೆಯನ್ನು ಪ್ರೋತ್ಸಾಹಿಸುವುದು ಬ್ಯಾನ್ಯನ್ ಸಂಸ್ಥೆಯ ಅಭಿವೃದ್ಧಿ ತಂತ್ರವಾಗಿದೆ. ಇದು ಸೂಕ್ತ ಮತ್ತು ಒಳ್ಳೆಯ ಸೇವೆಗಳನ್ನು ಹೆಚ್ಚಿಸಲು ಉತ್ತೇಜಿಸುತ್ತದೆ. ಯಶಸ್ವಿ ಉಪಕ್ರಮಗಳನ್ನು ಆಧರಿಸಿದ, ಅಳವಡಿಸಿಕೊಳ್ಳಬಹುದಾದ ಚೌಕಟ್ಟುಗಳ ಮೂಲಕದ ಈ ವಿಸ್ತರಣೆಯನ್ನು 2007ರಲ್ಲಿ ಸ್ಥಾಪಿತವಾದ ದಿ ಬ್ಯಾನ್ಯನ್ ಅಕಾಡೆಮಿ ಆಫ್ ಲೀಡರ್ಶಿಪ್ ಇನ್ ಮೆಂಟಲ್ ಹೆಲ್ತ್ (BALM) ಎಂಬ ಅಂಗಸಂಸ್ಥೆಯು ಅನುವುಗೊಳಿಸಿತ್ತು.

ದಿ ಮೆಂಟಲ್ ಹೆಲ್ತ್ ಅಂಡ್ ಸೋಶಿಯಲ್ ಆಕ್ಷನ್ ಲ್ಯಾಬೊರೇಟರಿಯು (MHSAL) ಮಾನಸಿಕ ಆರೋಗ್ಯ ವಲಯದಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಹೊಸ ಮಾರ್ಗಗಳನ್ನು ಅರ್ಥಮಾಡಿಕೊಳ್ಳುವ, ಅನುಸರಿಸುವ ಮತ್ತು ಪರೀಕ್ಷಿಸುವ ಗುರಿಯನ್ನು ಹೊಂದಿದೆ. BALM ನ ಸಂಶೋಧನೆ ಮತ್ತು ಬ್ಯಾನ್ಯನ್ನ ಸೇವೆಯು ಒಂದಕ್ಕೊಂದು ಬೆಸೆದುಕೊಂಡಿದೆ. ಇವು ಅಂತರ ಶಿಕ್ಷಣ ಶಾಖೀಯ ವಿಧಾನವನ್ನು ಅನುಸರಿಸುತ್ತದೆ ಮತ್ತು ಮಾನಸಿಕ ಆರೋಗ್ಯ ವಲಯದಲ್ಲಿನ ನಿರ್ಣಾಯಕ ಸವಾಲುಗಳನ್ನು ನಿಭಾಯಿಸುವ ಸಾಮರ್ಥ್ಯವಿರುವ ನವೀನ ಸೇವಾ ವಿಧಾನಗಳನ್ನು ಕಂಡುಹಿಡಿಯುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಬ್ಯಾನ್ಯನ್ ಮತ್ತು BALM,  ಕಾನೂನು ಸಲಹೆಯಲ್ಲಿ ಮತ್ತು ಜೀವನೋಪಾಯದ ಆಯ್ಕೆಗಳ ಶಿಫಾರಸ್ಸುಗಳಲ್ಲಿ ಬಲವಾಗಿ ತೊಡಗಿಕೊಂಡಿವೆ  ಹಾಗೂ ಪ್ರಾಯೋಗಿಕ ಮತ್ತು ಮೂಲಭೂತ ಪುರಾವೆಗಳ ಆಧಾರದ ಮೇಲೆ ವಿಕಲಾಂಗ ವ್ಯಕ್ತಿಗಳೆಂದು ಪರಿಗಣಿಸಲ್ಪಟ್ಟವರಿಗೆ ಪರ್ಯಾಯ ವಾಸಸ್ಥಳ ಮತ್ತು ಸಾಮಾಜಿಕ ಆರೋಗ್ಯದ ಅಗತ್ಯತೆಗಳನ್ನು ಒದಗಿಸುವಲ್ಲಿ ತೊಡಗಿಕೊಂಡಿವೆ. ಈ ಪ್ರಾಯೋಗಿಕ ಮತ್ತು ಮೂಲಭೂತ ಪುರಾವೆಗಳ ಆಧಾರದ ಮೇಲೆ ವಿಕಲಾಂಗ ವ್ಯಕ್ತಿಗಳೆಂದು ಪರಿಗಣಿಸಲ್ಪಡುವುದನ್ನು ಈಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಳವಡಿಸಿಕೊಂಡಿದೆ. ಅಭಿವೃದ್ಧಿಯ ದೃಷ್ಟಿಕೋನದಿಂದ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ BALM  ಸಂಸ್ಥೆಯು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS) ಮತ್ತು ವ್ರಿಜ್ ಯುನಿವರ್ಸಿಟಿಯಟ್ (VU), ಆಮ್‍ಸ್ಟರ್‍ಡ್ಯಾಮ್‍ಗಳ ಸಹಯೋಗದೊಂದಿಗೆ ಮಾನಸಿಕ ಆರೋಗ್ಯ ವಿಷಯದ ಸಮಾಜಕಾರ್ಯದ ಸ್ನಾತ್ತಕೋತ್ತರ ಪದವಿ, M.A (ಅಪ್ಲೈಡ್ ಸೈಕೋಲಜಿ) ಮತ್ತು ನಿರ್ವಹಣೆ ನೀತಿ ವಿಶ್ಲೇಷಣೆ ಹಾಗೂ ಆರೋಗ್ಯ ಮತ್ತು ಮಾನಸಿಕ ಆರೋಗ್ಯದ ಉದ್ಯಮಶೀಲತೆ ವಿಷಯದ M.A ಕೋರ್ಸನ್ನು ಪ್ರಾರಂಭಿಸಿತು.
 
ಯೋಜನೆಯ ವಿಷಯಾಧಾರಿತ ಕ್ಷೇತ್ರಗಳು
ವೈದ್ಯಕೀಯ ಚಿಕಿತ್ಸೆ

ಮನೋವೈದ್ಯ, ಮನಶ್ಯಾಸ್ತ್ರಜ್ಞ, ಸಾಮಾಜಿಕ ಕಾರ್ಯಕರ್ತ, ಸಮಾಲೋಚಕ, ಔದ್ಯೋಗಿಕ ಚಿಕಿತ್ಸಕ, ಜನರಲ್ ಫಿಜಿ಼ಷಿಯನ್, ಮತ್ತು ವೃತ್ತಿಪರ ತರಬೇತುದಾರರನ್ನು ಒಳಗೊಂಡ ಬಹುಕಾರ್ಯವಿಧಾನಗಳ ತಜ್ಞರ ತಂಡವು ವೈದ್ಯಕೀಯ ಚಿಕಿತ್ಸಾ ಸೇವೆಗಳನ್ನು ಒದಗಿಸುತ್ತದೆ. ಈ ಸೇವೆಗಳು ತುರ್ತು ಚಿಕಿತ್ಸೆ, ವೈದ್ಯಕೀಯ ಮತ್ತು ಮನೋವೈದ್ಯಕೀಯ ಸೇವೆಗಳಾದ ಔಷಧೀಯ ಚಿಕಿತ್ಸೆ, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವುದು ಮತ್ತು ತಜ್ಞರಿಂದ ಆರೈಕೆ, ಮಾನಸಿಕ ಮೌಲ್ಯಮಾಪನಗಳು, ಕ್ರಿಯಾತ್ಮಕ ಮತ್ತು ಸಾರಸಂಗ್ರಹಿ ಸಮಾಲೋಚನೆ ವಿಧಾನಗಳು, ಮತ್ತು ಸಮಾಜ ಕಾರ್ಯ ಪದ್ಧತಿ, ಏಕೀಕರಣ, ಪುನರ್ವಸತಿ ಮತ್ತು ಆರೈಕೆಯನ್ನು ಒಳಗೊಂಡಿರುತ್ತದೆ.
 
ಸಾಮಾಜಿಕ ಚಿಕಿತ್ಸೆ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಬಡತನದಲ್ಲಿರುವ ವಿಕಲಾಂಗ ವ್ಯಕ್ತಿಗಳು ಬಡವರಲ್ಲಿಯೇ ಕಡುಬಡುವರು ಮತ್ತು ಅತ್ಯಂತ ಅಂಚಿನಲ್ಲಿರುವ ಸಮುದಾಯಕ್ಕೆ ಸೇರುತ್ತಾರೆ. ಹಲವಾರು ಸಾಮಾಜಿಕ ಸಂಗತಿಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಸಾಮಾಜಿಕ ಸಂಗತಿಗಳಾದ ನಿರಾಶ್ರಿತತೆ, ಬಡತನ ಮತ್ತು ಅಸಮರ್ಪಕ ಸಾಮಾಜಿಕ ಬೆಂಬಲ ವ್ಯವಸ್ಥೆಗಳು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಕೆಲಸದಲ್ಲಿ ಭಾಗವಹಿಸುವಿಕೆ, ಕೌಟುಂಬಿಕ ಸಂಬಂಧದಲ್ಲಿನ ಗುಣಮಟ್ಟ ಮತ್ತು ಸಮುದಾಯ ಸಂಸರ್ಗಗಳು, ಲಿಂಗ, ವಯಸ್ಸು, ಜಾತಿ, ಆಧಾರದ ಮೇಲೆ ತಾರತಮ್ಯ ಮತ್ತು ಬಡತನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಆದುದರಿಂದ ಏಕಕಾಲದಲ್ಲಿ ವ್ಯಕ್ತಿ, ಕುಟುಂಬ ಮತ್ತು ಸಮುದಾಯ ಮಟ್ಟದಲ್ಲಿ ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಬಹು ಆಯಾಮದ ಮತ್ತು ಬಹು ದೀರ್ಘಕಾಲದ ವಿಧಾನಗಳನ್ನು ಬೆಳೆಸುವ ಅವಶ್ಯಕತೆಯಿದೆ. ಬ್ಯಾನ್ಯನ್ ಸಂಸ್ಥೆಯು ಸಮಾಜದ  ಆರೋಗ್ಯ ಸ್ಥಿತಿಯನ್ನು ಉತ್ತಮಗೊಳಿಸುಲು ಅನೇಕ ಸಾಮಾಜಿಕ ಚಿಕಿತ್ಸಾ ಕಾರ್ಯಕ್ರಮಗಳನ್ನು ಪ್ರಾರಂಭಿಸಿತು. ವಸತಿ ಸೌಕರ್ಯಗಳನ್ನು ಒದಗಿಸುವುದು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರ ಮಕ್ಕಳಿಗೆ ಬೆಂಬಲವನ್ನು ನೀಡುವುದು, ಅವರಿಗಾಗಿ ಡೇ ಕೇರ್ ಸೆಂಟರ್, ಕೌಶಲ್ಯ ಅಭಿವೃದ್ಧಿ, ಜೀವನೋಪಾಯ ಮತ್ತು ಉದ್ಯಮಶೀಲತೆ ಕಾರ್ಯಕ್ರಮಗಳು. ಈ ಯೋಜನೆಗಳು ಸ್ವಾವಲಂಬನೆ ಮತ್ತು ಸ್ವಾತಂತ್ರ್ಯ ನಿಮರ್ಾಣವನ್ನು ಕೇಂದ್ರೀಕರಿಸುತ್ತದೆ ಮತ್ತು ಇದರ ಮೂಲಕ ಬಡತನವನ್ನು ಹೋಗಲಾಡಿಸಿ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಲು ಉದ್ದೇಶಿಸಲಾಗಿದೆ ಮತ್ತು ಇದರಿಂದ ಆರೋಗ್ಯಕರ ಮತ್ತು ಸದೃಢ ಸಮುದಾಯಗಳ ನಿರ್ಮಾಣವು ಸಾಧ್ಯವಾಗುತ್ತದೆ.
 
ಸ್ಟೇಕ್‍ಹೋಲ್ಡರ್ ಎಂಗೇಜ್‍ಮೆಂಟ್ ಅಂಡ್ ಅಡ್ವೋಕೆಸಿ
ಸಮಾಜ ಮತ್ತು ಆರೋಗ್ಯ ವ್ಯವಸ್ಥೆಗಳ ನಡುವಿನ ಒಪ್ಪಂದ: ನಿರಂತರ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುವುದರಿಂದ ಇದು ಅಸ್ತಿತ್ವದಲ್ಲಿರುವ ಸರ್ಕಾರದ ಸೇವೆಗಳನ್ನು ವೃದ್ಧಿಸುತ್ತದೆ. ಸಮಾಲೋಚನೆ ಕಾರ್ಯಕ್ರಮಗಳನ್ನು ನೀಡುವುದಕ್ಕಾಗಿ, ಮಾನಸಿಕ ಆರೋಗ್ಯದ ಚಿಕಿತ್ಸಾ ನೆಲೆಗಳನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಬ್ಯಾನ್ಯನ್ ಸಂಸ್ಥೆಯು ರಾಜ್ಯ ವಿಕಲಾಂಗ ಕಲ್ಯಾಣ ಇಲಾಖೆ, ರಾಜ್ಯ ಆರೋಗ್ಯ ಇಲಾಖೆ, ದಿ ಕಾರ್ಪೊರೇಷನ್ ಆಫ್ ಚೆನ್ನೈ, ರಾಜ್ಯ ಕೇಂದ್ರ ಕಾರಾಗೃಹಗಳ ಇಲಾಖೆ ಮತ್ತು ತಮಿಳುನಾಡು ಪೊಲೀಸ್ ಇಲಾಖೆ (ಮಾನಸಿಕ ಆರೋಗ್ಯ ಸಹಾಯವಾಣಿ)ಗಳಂತಹ ಅನೇಕ ಸರ್ಕಾರಿ ಇಲಾಖೆಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ.

ವಿಧಾನಗಳ ಹೊಸ ಸೃಷ್ಟಿಗಾಗಿ ಕೈಪಿಡಿಗಳು ಮತ್ತು ನಿಯಮಾವಳಿಗಳ ಹಂಚಿಕೆ: ಬ್ಯಾನ್ಯನ್ ವಿಧಾನದ ಚಿಕಿತ್ಸೆಯನ್ನು ಯಶಸ್ವಿಯಾಗಿ ಭಾರತದ ಎರಡು ವಿವಿಧ ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಅದು ಕರ್ನಾಟಕದಲ್ಲಿ ಕರುಣಾ ಟ್ರಸ್ಟ್ರವರಿಂದ ಮತ್ತು ಅಸ್ಸಾಂನಲ್ಲಿ ಆಶಾದೀಪದವರಿಂದ. ಬ್ಯಾನ್ಯನ್ ಸಂಸ್ಥೆಯು ತನ್ನ ವಿಧಾನಗಳನ್ನು ಮತ್ತು ನಿಯಮಾವಳಿಗಳನ್ನು ದೇಶದಲ್ಲಿ ಹಲವಾರು ಇನ್ನಿತರ ಸರ್ಕಾರೇತರ ಸಂಸ್ಥೆಗಳೊಂದಿಗೆ ಹಂಚಿಕೊಂಡಿದೆ.
 
ವಲಯದಲ್ಲಿನ ಪ್ರಮುಖ ಸವಾಲುಗಳನ್ನು ಪರಿಹರಿಸುತ್ತಿರವ ಬ್ಯಾನ್ಯನ್ ಯೋಜನೆಗಳು
ಅದೈಕಲಾಂ ಟ್ರಾನ್ಸಿಟ್ ಕೇರ್ ಸೆಂಟರ್ (TCC): ಸಮಗ್ರ ಶ್ರೇಣಿಯ ತುರ್ತು ಚಿಕಿತ್ಸಾ ಸೇವೆಗಳ ಮೂಲಕ ನಿರಾಶ್ರಿತತೆ ಮತ್ತು ಮಾನಸಿಕ ಅಸ್ವಸ್ಥತೆಯಿಂದ ನೊಂದಿರುವ ಮಹಿಳೆಯರ ಸಮಸ್ಯೆಗಳನ್ನು ಮತ್ತು ಖಿನ್ನತೆಯನ್ನು ಪರಿಹರಿಸುತ್ತಿದೆ ಮತ್ತು ಬ್ಯಾನ್ಯನ್ನ ಕಮ್ಯೂನಿಟಿ ಲಿವಿಂಗ್ ಪ್ರಾಜೆಕ್ಟ್‍ನೊಂದಿಗೆ (CLP) ತನ್ನ ಸೇವೆಯನ್ನು ಒದಗಿಸುತ್ತಿದೆ.

ರೂರಲ್ ಮೆಂಟಲ್ ಹೆಲ್ತ್ ಪ್ರೋಗ್ರಾಂ (RMHP): ಇದರ ಮೂಲಕ ಕ್ರಿಯಾತ್ಮಕ ಮಾನಸಿಕ ಆರೋಗ್ಯ ವ್ಯವಸ್ಥೆಗಳನ್ನು ರೂಪಿಸಿ ಗ್ರಾಮೀಣ ಭಾಗಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ಆರೋಗ್ಯಕರ ಸ್ಥಿತಿ ಆಧಾರಿತ ಬಹು ಆಯಾಮದ, ಬಹು ಶ್ರೇಣಿಯ ಪ್ಯಾಕೇಜ್ಗಳ ಮೂಲಕ ಗ್ರಾಮೀಣ ಭಾಗದ ಜನರಲ್ಲಿನ ಸಂಕಷ್ಟಗಳನ್ನು ಶಮನಗೊಳಿಸುತ್ತಿದೆ ಮತ್ತು ಮಾನಸಿಕ ಆರೋಗ್ಯ ಮತ್ತು ಕ್ಷೇಮವನ್ನು ಉತ್ತೇಜಿಸುತ್ತಿದೆ.

ಅರ್ಬನ್ ಮೆಂಟಲ್ ಹೆಲ್ತ್ ಪ್ರೋಗ್ರಾಂ (UMHP): ಈ ಯೋಜನೆಯು ವೈವಿಧ್ಯತೆಯಲ್ಲಿ ಸಹಬಾಳ್ವೆಯ ಮೂಲಕ ನಗರ ಪ್ರದೇಶದ ಜನರ ಮಾನಸಿಕ ಆರೋಗ್ಯಕ್ಕೆ ಮಾರಕವಾಗಿರುವ ಬಡತನ ಮತ್ತು ಇನ್ನಿತರ ಸಮಸ್ಯೆಗಳನ್ನು ಮತ್ತು ಅಡೆತಡೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಗುತ್ತಿದೆ.

ಕ್ಲಸ್ಟರ್ಡ್‍ ಗ್ರೂಪ್ ಹೋಮ್ಸ್ (CGH): ಇದು ಚಿಕಿತ್ಸಾ ಅವಶ್ಯಕತೆಗಳಲ್ಲಿನ ಸಂಕೀರ್ಣತೆಯಲ್ಲಿ ಜನರು ಎದುರಿಸುವ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ಇದು ದೀರ್ಘಾವಧಿಯ ದೈಹಿಕ, ಮಾನಸಿಕ ಮತ್ತು ಆರ್ಥಿಕ ಬೆಂಬಲವನ್ನು ನೀಡುತ್ತದೆ ಹಾಗೂ ಇದು ಮಾನಸಿಕ ಅಸ್ವಸ್ಥತೆಯಿಂದಿರುವವರಿಗೆ ವಸತಿಯನ್ನೂ ಸಹ ಒದಗಿಸಿ ಅವರನ್ನು ಕುಟುಂಬಸ್ಥರಂತೆಯೇ ಆರೈಕೆ ಮಾಡುತ್ತದೆ.

ಶೇರ್ಡ್ ಹೌಸಿಂಗ್/ ಆಲ್ಟರ್ನೇಟಿವ್ ಲಿವಿಂಗ್ ಸ್ಪೇಸಸ್: ಇದು ಶ್ರೇಣೀಕೃತ ವೈದ್ಯಕೀಯ ಮತ್ತು ಸಾಮಾಜಿಕ ಆರೋಗ್ಯ ಸೇವೆಗಳೊಂದಿಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹಂಚಿಕೊಂಡು ವಾಸಿಸುವ ವಸತಿ ವ್ಯವಸ್ಥೆಯ (Shared housing accommodations) ಮೂಲಕ ಸಾಂಸ್ಥಿಕ ಆರೋಗ್ಯ ಸೇವೆಗಳಿಂದ ನಿರ್ಗಮಿಸುವ ದಾರಿಯನ್ನು ಒದಗಿಸಿ ಸ್ವತಂತ್ರ ವಾಸ, ಸ್ವಾಯತ್ತತೆಯನ್ನು ಉತ್ತೇಜಿಸುತ್ತದೆ. ಇದು ಗಮನಾರ್ಹ ಫಲಿತಾಂಶವನ್ನು ನೀಡುವ ಒಂದು ವಿನೂತನ ಮಾರ್ಗವಾಗಿದೆ ಆದರೆ ಇದನ್ನು ಭಾರತದಲ್ಲಿ ಇನ್ನೂ ಪ್ರಯತ್ನಿಸಿಲ್ಲ.

ಓಪನ್ ಶೆಲ್ಟರ್ ಫಾರ್ ಹೋಮ್ಲೆಸ್ ಮೆನ್ ವಿತ್ ಸೈಕೋಸೋಶಿಯಲ್ ಡಿಸ್ಎಬಿಲಿಟೀಸ್: ಮುಕ್ತ, ಸ್ಥಳೀಯ, ಸಮುದಾಯ ಸ್ವಾಮ್ಯದ ಮಾನಸಿಕ ಆರೋಗ್ಯ ಚಿಕಿತ್ಸಾ ವಿತರಣಾ ವ್ಯವಸ್ಥೆಯ ಕಲ್ಪನೆಯಂತೆ ಇದು ಕಾರ್ಯನಿರ್ವಹಿಸುತ್ತದೆ. ಇದು ಸಮರ್ಥನೀಯ ಮತ್ತು ವೆಚ್ಚ ಪರಿಣಾಮಕಾರಿ ವಿಧಾನವಾಗಿದೆ.
 
ಕೆಲವು ಸಾಧನೆಗಳ ಅಂಕಿಅಂಶಗಳು
  • ಬ್ಯಾನ್ಯನ್ ಗೃಹಗಳು 200 ಬೆಡ್‍ಗಳ ವ್ಯವಸ್ಥೆಯುಳ್ಳ ಟ್ರಾನ್ಸಿಟ್ ಕೇರ್ ಸೆಂಟರ್ ಅನ್ನು (TCC) ಒಳಗೊಂಡಿದೆ. ಮಾನಸಿಕ ಆರೋಗ್ಯದ ಸಮಸ್ಯೆಯಿರುವ ನಿರಾಶ್ರಿತ ಜನರಿಗಾಗಿ ಇರುವ ಕೇಂದ್ರಗಳಲ್ಲಿ ಇದು ಇಡೀ ಭಾರತದಲ್ಲೇ ಬಹಳ ದೊಡ್ಡದು.
  • ಟ್ರಾನ್ಸಿಟ್ ಕೇರ್ ಸೆಂಟರ್ನಲ್ಲಿ (TCC) 1691 ಜನರು ಪುನರ್ವಸತಿ ಸೇವೆಗಳ ಮತ್ತು ಆರೋಗ್ಯ ಚಿಕಿತ್ಸಾ ಸೇವೆಗಳ ಉಪಯೋಗವನ್ನು ಪಡೆದುಕೊಂಡಿದ್ದಾರೆ.
  • ಟ್ರಾನ್ಸಿಟ್ ಕೇರ್ ಸೆಂಟರ್ನಲ್ಲಿ (TCC) 165 ಮಹಿಳೆಯರು ಯಾವುದೇ ಸಮಯದಲ್ಲಾದರೂ ವೈದ್ಯಕೀಯ ಮತ್ತು ಮನೋವೈದ್ಯಕೀಯ ಸೇವೆಗಳು, ಔದ್ಯೋಗಿಕ ಚಿಕಿತ್ಸೆ ಮತ್ತು ವೃತ್ತಿಪರ ತರಬೇತಿಯನ್ನು ಪಡೆಯಬಹುದಾಗಿದೆ.
  • ಕೋವಲಮ್ ಮತ್ತು ಸೆಂಬಕ್ಕಮ್ ಊರಿನಾದ್ಯಂತ 1250 ಜನರು ರೂರಲ್ ಮೆಂಟಲ್ ಹೆಲ್ತ್ ಪ್ರೋಗ್ರಾಮ್ (RMHP)ನ ವೈದ್ಯಕೀಯ ಮತ್ತು ಸಾಮಾಜಿಕ ಆರೋಗ್ಯ ಯೋಜನೆಗಳ ಉಪಯೋಗವನ್ನು ಪಡೆದುಕೊಂಡಿದ್ದಾರೆ.
  • 1500 ಜನರು ಅರ್ಬನ್ ಮೆಂಟಲ್ ಹೆಲ್ತ್ ಪ್ರೋಗ್ರಾಮ್ನ (UMHP) ನಗರ ಹೊರರೋಗಿ ಆಸ್ಪತ್ರೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
  • 2000 ಜನರು ರೂರಲ್ ಮೆಂಟಲ್ ಹೆಲ್ತ್ ಪ್ರೋಗ್ರಾಮ್ನ (RMHP) ಸಾರ್ವಜನಿಕ ಆರೋಗ್ಯ ಹೊರರೋಗಿ ಆಸ್ಪತ್ರೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
  • 850 ಜನರು ಚಿಕಿತ್ಸೆಯ ನಂತರದ ಸೇವೆಗಳಾದ ತಿಂಗಳಿಗೊಮ್ಮೆ ಆರೋಗ್ಯ ಪರೀಕ್ಷೆ, ಗೃಹ ಭೇಟಿ, ಗ್ರಾಮೀಣ ಮತ್ತು ನಗರ ಕೇಂದ್ರದಲ್ಲಿ ದೂರವಾಣಿಯ ಮೂಲಕ ಆರೋಗ್ಯ ವಿಚಾರಣೆಗಳಿಂದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
  • 150 ಕುಟುಂಬಗಳು ರೂರಲ್ ಮೆಂಟಲ್ ಹೆಲ್ತ್ ಪ್ರೋಗ್ರಾಮ್ನಲ್ಲಿ (RMHP) ಫೆಡರೇಟೆಡ್ ಕ್ಲೈಂಟ್-ಕೇರ್ಗೀವರ್ ಸಪೋರ್ಟ್‍ ಗ್ರೂಪ್ಸ್‍ಗಳನ್ನು ಸ್ಥಾಪಿಸಿಕೊಂಡಿದ್ದಾರೆ.
  • ಕೋವಲಮ್, ಸೆಂಬಕ್ಕಮ್ ಮತ್ತು ಓರಗಡಮ್ ಊರಿನಾದ್ಯಂತ 120 ಜನರು ಔದ್ಯೋಗಿಕ ತರಬೇತಿ ಘಟಕದಿಂದ ತರಬೇತಿಯನ್ನು ಪಡೆದುಕೊಂಡಿದ್ದಾರೆ.
  • 180 ಜನರು ಸರ್ಕಾರದಿಂದ ಅನುಮೋದಿಸಲ್ಪಟ್ಟ ಅಂಗಿವಿಕಲತೆಯ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಬ್ಯಾನ್ಯನ್ ಅನುವು ಮಾಡಿಕೊಟ್ಟಿದೆ.
  • 250 ಜನರು ಅಂಗವಿಕಲತೆಯ ಭತ್ಯೆಯಂತಹ (DA) ಆರ್ಥಿಕ ನೆರವನ್ನು ಪಡೆದುಕೊಂಡಿದ್ದಾರೆ.
  • 60 ಜನರು ಬ್ಯಾನ್ಯನ್ನಿಂದ ಬೆಂಬಲಿಸಲ್ಪಟ್ಟ ದೀರ್ಘಾವಧಿಯ ಆರೋಗ್ಯ ಕೇಂದ್ರಗಳಲ್ಲಿ ಸ್ವಸಹಾಯ ಗುಂಪುಗಳ (SHGs), ಅಸಿಸ್ಟೆಡ್ ಲಿವಿಂಗ್ ಮತ್ತು ಕ್ಲಸ್ಟರ್ಡ್‍ ಗ್ರೂಪ್ ಹೋಮ್ಸ್‍ನ ರೂಪದಲ್ಲಿ ವಾಸವಾಗಿದ್ದಾರೆ.
  • ಬ್ಯಾನ್ಯನ್ ಸಂಸ್ಥೆಯು ದೀರ್ಘಾವಧಿಯ ಆರೋಗ್ಯದ ಚಿಕಿತ್ಸೆಯ ಅವಶ್ಯಕತೆಯಿರುವ ಜನರಿಗೆ ಅಸಿಸ್ಟೆಡ್ ಲಿವಿಂಗ್ನ ಆಯ್ಕೆಗಳನ್ನು ನೀಡಿದೆ. ಇದು ವಿವಿಧ ಆರ್ಥಿಕ ಮಟ್ಟದ ಜನರಿಗೆ ಶ್ರೇಣಿಕೃತ ಬೆಂಬಲವನ್ನು ನೀಡುತ್ತದೆ. ಪ್ರಸ್ತುತ 75 ಜನರು ಶೇರ್ಡ್ ಹೌಸಿಂಗ್ ವ್ಯವಸ್ಥೆಯ ಆಧಾರದ ಮೇಲೆ ವಾಸಿಸುತ್ತಿದ್ದಾರೆ.
  • 19 ಜನರು ಸಂಪೂರ್ಣವಾಗಿ ಸ್ವಾವಲಂಬಿಯಾಗಿದ್ದಾರೆ ಮತ್ತು ತಮ್ಮ ಮನೆಯಲ್ಲಿಯೇ ನೆಲೆಸಿದ್ದಾರೆ. ಇವರು ಬ್ಯಾನ್ಯನ್ನ ರೂರಲ್ ಮೆಂಟಲ್ ಹೆಲ್ತ್ ಪ್ರೋಗ್ರಾಮ್ನಲ್ಲಿ (RMHP) ಕೇವಲ ವೈದ್ಯಕೀಯ ಚಿಕಿತ್ಸಾ ಸೇವೆಗಳನ್ನು ಮಾತ್ರ ಪಡೆದುಕೊಳ್ಳುತ್ತಿದ್ದಾರೆ.
  • 50 ಜನರು ರೂರಲ್ ಮೆಂಟಲ್ ಹೆಲ್ತ್ ಪ್ರೋಗ್ರಾಮ್ನಲ್ಲಿ (RMHP) ಮಹಾತ್ಮ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಗ್ಯಾರಂಟಿ ಸ್ಕೀಮ್ನ (MGNREGS) ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
  • 15 ಜನರು ಯಾವುದೇ ಸಮಯದಲ್ಲಾದರೂ ಅರ್ಬನ್ ಮೆಂಟಲ್ ಹೆಲ್ತ್ ಪ್ರೋಗ್ರಾಮ್ನಲ್ಲಿ (UMHP) ಡೇ ಕೇರ್ ಸೇವೆಗಳನ್ನು ಪಡೆಯಬಹುದಾಗಿದೆ.
  • 70 ಜನರು ರೂರಲ್ ಮೆಂಟಲ್ ಹೆಲ್ತ್ ಪ್ರೋಗ್ರಾಮ್ನಲ್ಲಿ (RMHP) ಸಾಮಾಜಿಕ ಕಾಳಜಿ ಸೇವೆಗಳನ್ನು (ಪಡಿತರ ಚೀಟಿಯನ್ನು ಪಡೆಯುವುದು, ಬ್ಯಾಂಕ್ ಖಾತೆಯನ್ನು ಹೊಂದುವುದು, ವಸತಿ ಸಹಾಯ) ಪಡೆದುಕೊಂಡಿದ್ದಾರೆ.
 
ಮಾನಸಿಕ ಆರೋಗ್ಯದ ನೈಟಿಂಗೇಲ್
ಬ್ಯಾನ್ಯನ್ ಸಂಸ್ಥೆಯನ್ನು ವಂದನಾ ಗೋಪಿಕುಮಾರ್ ಮತ್ತು ವೈಷ್ಣವಿ ಜಯಕುಮಾರ್ ರವರು 1993ರಲ್ಲಿ ಚೆನ್ನೈನಲ್ಲಿ ಸ್ಥಾಪಿಸಿದರು. ಇದು ಬಲವಾದ ನಿಲುವುನೊಂದಿಗೆ ಮತ್ತು ಅಪ್ರತಿರೋಧ್ಯ ಆಶಯದೊಂದಿಗೆ ಮಾನಸಿಕ ಅಸ್ವಸ್ಥರ ಸ್ಥಿತಿಯನ್ನು ಬದಲಿಸುವುದಕ್ಕಾಗಿ, ನಿರ್ದಿಷ್ಟವಾಗಿ ಮಹಿಳೆಯರಿಗಾಗಿ ಪ್ರಾರಂಭವಾಯಿತು. ಬ್ಯಾನ್ಯನ್ ಭಾರತದಲ್ಲಿ ಮಾನಸಿಕ ಆರೋಗ್ಯದ ಅಸಾಧಾರಣ ಚಳುವಳಿಯಾಗಿದೆ. ದೇಶದಲ್ಲಿ ಕೆಲವು ಮಾನಸಿಕ ಆಸ್ಪತ್ರೆಗಳನ್ನು ಹೊರತು ಪಡಿಸಿ ಬಹುತೇಕ ಮಾನಸಿಕ ಆಸ್ಪತ್ರೆಗಳು ಚಿತ್ರಹಿಂಸೆ ನೀಡುವ ಕೇಂದ್ರವಾಗಿವೆ. ಅನೇಕ ಮಾನಸಿಕ ಅಸ್ವಸ್ಥ ಮಹಿಳೆಯರು ನಿರ್ದಯವಾಗಿ ದೈಹಿಕವಾಗಿ ಮತ್ತು ಲೈಂಗಿಕವಾಗಿ ದುರುಪಯೋಗಕ್ಕೊಳಗಾಗಿ. ಎಲ್ಲರಿಂದಲೂ ನಿರ್ಲಕ್ಷ್ಯಕ್ಕೊಳಗಾಗಿ, ಕಸದ ತೊಟ್ಟಿಗಳಲ್ಲಿ ಬೀದಿ ನಾಯಿಗೊಡನೆ ಆಹಾರವನ್ನು ತಿನ್ನುವ, ಯಾವುದೇ ಸೂರಿಲ್ಲದ, ಚೆನ್ನೈನ ಬೀದಿ ಬೀದಿಗಳಲ್ಲಿ ಅಲೆಯುವ ಚಿತ್ರಣವು ಕೆಲವು ವರ್ಷಗಳ ಹಿಂದೆ ಸಾಮಾನ್ಯವಾಗಿತ್ತು. ಆದರೆ ಬ್ಯಾನ್ಯನ್ ಸಂಸ್ಥೆಯು ಈ ಚಿತ್ರಣವನ್ನು ಬದಲಾಯಿಸಿದೆ. ಒಮ್ಮೆ ಕಾಲೇಜು ವಿದ್ಯಾರ್ಥಿನಿಯರಾದ ವಂದನಾ ಮತ್ತು ವೈಷ್ಣವಿ ರಸ್ತೆಯಲ್ಲಿ ಒಂದು ಅರೆಬೆತ್ತಲೆ, ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿದ್ದ, ನಿರಾಶ್ರಿತ ಮಹಿಳೆಯನ್ನು ಕಂಡು ಮರುಗಿದ್ದಾರೆ, ಕೂಡಲೇ ಅವರು ಆಕೆಯ ನೆರವಿಗೆ ಧಾವಿಸಿದ್ದಾರೆ. ಆಕೆಗೆ ಊಟ, ವಸತಿ, ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗಿದ್ದಾರೆ ಆದರೆ ಚೆನ್ನೈನಲ್ಲಿ ಇಂತಹ ಯಾವುದೇ ಪುನರ್ವಸತಿ ಕೇಂದ್ರವು ಇಲ್ಲದಿರುವುದರಿಂದ ಆಶ್ಚರ್ಯಪಟ್ಟಿದ್ದಾರೆ. ಈ ಘಟನೆಯಿಂದ ಇವರಿಗೆ ಇಂತಹ ಕೇಂದ್ರವನ್ನು ಸ್ಥಾಪಿಸುವ ದೊಡ್ಡ ಅವಶ್ಯಕತೆಯಿದೆ ಎಂದು ಮನಗಂಡಿದ್ದಾರೆ. ಅದರ ಪ್ರಯತ್ನದಿಂದಲೇ ದಿ ಬ್ಯಾನ್ಯನ್ ಉಗಮವಾಯಿತು.

ಮಾನಸಿಕ ಅಸ್ವಸ್ಥರನ್ನು ಆರೈಕೆ ಮಾಡಲು ಸಾಂಸ್ಥೀಕರಣವು ಸರಿಯಾದ ಮಾರ್ಗವಲ್ಲ ಎಂದು ಬ್ಯಾನ್ಯನ್ ಅಭಿಪ್ರಾಯ ಪಡುತ್ತದೆ. ಇದು ಕೆಲಸದ ನಾಲ್ಕು ನಿರ್ಣಾಯಕ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದೆ: ಮಾನಸಿಕ ಆರೋಗ್ಯದ ಸಮಸ್ಯೆಗಳಿರುವ ವ್ಯಕ್ತಿಗೆ ತುರ್ತು ಮತ್ತು ಚಿಕಿತ್ಸಕ ಸೇವೆಗಳು; ಮಾನಸಿಕ ಆರೋಗ್ಯದ ಸಮಸ್ಯೆಗಳಿರುವ ವ್ಯಕ್ತಿಗೆ ಪರಿಸರ ವ್ಯವಸ್ಥೆಗಳ ಒಳಗೊಂಡ ಚಿಕಿತ್ಸೆ; ಆರೋಗ್ಯ ಮತ್ತು ಮಾನಸಿಕ ಆರೋಗ್ಯದ ವ್ಯವಸ್ಥೆಗಳು; ಮತ್ತು NALAM: ಸಾಮಾಜಿಕ ಸೇರ್ಪಡೆ, ಕೌಶಲ್ಯ ಅಭಿವೃದ್ಧಿ ಮತ್ತು ಉತ್ತಮ ಆರೋಗ್ಯ ಸ್ಥಿತಿ. ಬ್ಯಾನ್ಯನ್ ಸಂಸ್ಥೆಯು ಮಾನಸಿಕ ಅಸ್ವಸ್ಥ ನಿರಾಶ್ರಿತ ವ್ಯಕ್ತಿಗಳ ಸಮಗ್ರ ಅಗತ್ಯತೆಗಳ ಪೂರೈಸುವಲ್ಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ದೀರ್ಘಾವಧಿಯ ಆರೈಕೆಯನ್ನು ಒಳಗೊಂಡಂತೆ ಮಾನಸಿಕ ಆರೋಗ್ಯದ ವಿಧಾನಗಳನ್ನು ಅಭಿವೃದ್ಧಿ ಪಡಿಸಲು ಎರಡು ದಶಕಕ್ಕೂ ಹೆಚ್ಚಿನ ಕಾಲವನ್ನು ತೆಗೆದುಕೊಂಡಿತು. ವೈಯಕ್ತಿಕ ಚೇತರಿಕೆಯನ್ನು ಮತ್ತು ಸ್ವಾವಲಂಬನೆಯ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಬ್ಯಾನ್ಯನ್ ವಿಧಾನವು ಸಾಂಸ್ಥೀಕರಣದ ಆರೈಕೆಯಿಂದ ನಿರ್ಗಮಿಸಿ ಆಯ್ಕೆಯ ಪರಿಸರ ಮತ್ತು ಸಾಮಾಜಿಕ ಚಲನಶೀಲತೆಯೆಡೆಗೆ ಸಾಗುವುದನ್ನು ಉತ್ತೇಜಿಸುತ್ತದೆ. ಅಭಿವೃದ್ಧಿಯನ್ನು ಮತ್ತು ಸಾಮರ್ಥ್ಯಗಳನ್ನು ಉತ್ತೇಜಿಸುತ್ತದೆ. ಹೀಗೆ ಬ್ಯಾನ್ಯನ್ನ ವಿಧಾನವು ಜಾಗತಿಕವಾಗಿ ಮಾನಸಿಕ ಆರೋಗ್ಯ ಚಿಕಿತ್ಸೆಗೆ ಕೊಡುಗೆಯನ್ನು ನೀಡುತ್ತದೆ. ಮನೋವೈದ್ಯಕೀಯ ಔಷಧದ ಪರಿಭ್ರಮಣಿಯ ಆಚೆಯ ಮಾನಸಿಕ ಅಸ್ವಸ್ಥತೆಯ ರಚನಾತ್ಮಕ ಅಡತಡೆಗಳನ್ನು ನಿವಾರಿಸಲು ಬ್ಯಾನ್ಯನ್ ಸಂಸ್ಥೆಯು ದಿ ಬ್ಯಾನ್ಯನ್ ಅಕಾಡೆಮಿ ಆಫ್ ಲೀಡರ್ಶಿಪ್ ಇನ್ ಮೆಂಟಲ್ ಹೆಲ್ತ್ (BALM) ಎಂಬ ಶೈಕ್ಷಣಿಕ ಕೇಂದ್ರವನ್ನು ಸ್ಥಾಪಿಸಿತು. BALM ಪ್ರಮಾಣಿತ ಕಾರ್ಯಕಾರಿ ನಿರ್ವಹಣಾ ನಿಯಮಾವಳಿಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಮಾನಸಿಕ ಅಸ್ವಸ್ಥರ ಚಿಕಿತ್ಸಾ ಗುಣಮಟ್ಟವನ್ನು ಸುಧಾರಿಸಲು ಇತರ ಮಧ್ಯಸ್ಥಗಾರರೊಂದಿಗೆ ಜ್ಞಾನ ಪ್ರಸರಣವನ್ನು ಮಾಡುತ್ತದೆ. ಕೇವಲ ಇವು ಮಾತ್ರವಲ್ಲದೆ ದಕ್ಷ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವುದನ್ನೂ ಸಹ BALM ಕೇಂದ್ರೀಕರಿಸುತ್ತದೆ. ಬ್ಯಾನ್ಯನ್/BALM ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ನಡುವಿನ ಸಹಯೋಗದೊಂದಿಗೆ ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ ಡಿಪ್ಲೋಮಾ ಕಾರ್ಯಕ್ರಮದೊಂದಿಗೆ ಮೂರು ಕೇಂದ್ರಗಳ ಅಥವಾ ಶಾಲೆಗಳ ಮೂಲಕ ಮೂರು ಸ್ನಾತಕೋತ್ತರ ಪದವಿಯ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಯಿತು. ಈ ಮೂರು ಕೇಂದ್ರಗಳು ಆರೋಗ್ಯ ಮತ್ತು ಮಾನಸಿಕ ಆರೋಗ್ಯ ನೀತಿ ಸಂಶೋಧನೆ, ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, ಮತ್ತು ಸಾಮಾಜಿಕ ನಾವಿನ್ಯತೆ, ಮತ್ತು ಮಾನಸಿಕ ಆರೋಗ್ಯ ಮತ್ತು ಉಪೇಕ್ಷಿತವನ್ನು ಕೇಂದ್ರೀಕರಿಸಿದೆ. BALM ನೊಂದಿಗಿನ ಸಹಯೋಗದ ಇನ್ನಿತರ ಸಂಸ್ಥೆಗಳಾವುವೆಂದರೆ ಸವ್ರಿಜ್ ಯೂನಿವರ್ಸಿಟಿಯೆಟ್, ಆಮ್ಸ್ಟರ್ಡ್ಯಾಮ್; ದಿ ಹಾರ್ವರ್ಡ್‍ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮತ್ತು ಬೋಸ್ಟನ್ನ ಮ್ಯಾಸಚೂಸೆಟ್ಸ್‍ನ ಸಾರ್ವಜನಿಕ ಆಸ್ಪತ್ರೆಯಲ್ಲಿನ ಜಾಗತಿಕ ಮನೋರೋಗ ವಿಭಾಗ. ಕೇವಲ ಎರಡು ದಶಕದ ಕಾಲಾವಧಿಯಲ್ಲಿ ಡಾ. ವಂದನಾ ಗೋಪಿಕುಮಾರ್‍ರವರು ಬ್ಯಾನ್ಯನ್ ಸಂಸ್ಥೆಯನ್ನು ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ, ಶಿಕ್ಷಣದಲ್ಲಿ, ಸಂಶೋಧನೆ ಮತ್ತು ನೀತಿಯಲ್ಲಿ ಬಹಳ ಎತ್ತರಕ್ಕೆ ಕೊಂಡೊಯ್ದಿದ್ದಾರೆ.

ಡಾ. ವಂದನಾರವರು ತಮ್ಮ ಕಿರಿಯ ವಯಸ್ಸಿನಲ್ಲಿಯೇ ಮಾಡಿದ ವೃತ್ತಿಪರ ಮತ್ತು ವೈಯಕ್ತಿಕ ಸಾಧನೆಗಳು ಹೆಚ್ಚು ಪರಿಣಾಮಕಾರಿಯಾಗಿದೆ. ಇವರು ಸುಪ್ರೀಂ ಕೋರ್ಟ್‍ನಿಂದ ನೇಮಿಸಲಾದ ವಿಶೇಷ ಆಯುಕ್ತರು (ವಸತಿರಹಿತರ); ಭಾರತ ಸರ್ಕಾರದ ಮೆಂಟಲ್ ಹೆಲ್ತ್ ಪಾಲಿಸಿ ಗ್ರೂಪ್ನ ಸದಸ್ಯರು; ಜಾಗತಿಕ ಮಾನಸಿಕ ಆರೋಗ್ಯ ಚಳುವಳಿಯ ಸಲಹಾ ಮಂಡಳಿಯ ಸದಸ್ಯರು, ಲಂಡನ್ನ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್ನ ಭೋದಕರು. ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ನ ಸಮಾಜಕಾರ್ಯದ ಪ್ರಾಧ್ಯಾಪಕರು. ಡಾ. ವಂದನಾರವರಿಗೆ ಜಿಂದಾಲ್ ಪ್ರಶಸ್ತಿ (2012), WHO ಪ್ರಶಸ್ತಿ (2012), ಇಂಡಿಯಾ ಎನ್‍ಜಿಓ ಪ್ರಶಸ್ತಿ (2008), NIQR-Lucas TVS ಪ್ರಶಸ್ತಿ (2007), ಸಾಟ್ ಪೌಲ್ ಮಿತ್ತಲ್ ಪ್ರಶಸ್ತಿ (2007), ಜಿ.ಡಿ. ಬಿರ್ಲಾ ಅಂತರಾಷ್ಟ್ರೀಯ ಪ್ರಶಸ್ತಿ (2005), ಮತ್ತು ಸ್ತ್ರೀ ಶಕ್ತಿ ಪುರಸ್ಕಾರ್ ಪ್ರಶಸ್ತಿಗಳನ್ನು (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, 2003) ನೀಡಿ ಗೌರವಿಸಲಾಗಿದೆ.

ಕೆಲವು ಮನುಷ್ಯರು ಕೆಲವು ಉದ್ದೇಶಕ್ಕಾಗಿ ಜನ್ಮ ತಾಳಿರುತ್ತಾರೆ. ಫ್ಲೋರೆನ್ಸ್ ನೈಟಿಂಗೇಲ್ರವರೂ ಸಹ ಇಂತಹ ಮನುಷ್ಯರಲ್ಲೊಬ್ಬರು. ಸಂಶೋಧನಾ ವಿಧಾನವನ್ನು ಚರ್ಚಿಸುವುದಕ್ಕಾಗಿ ನಾನು ಎಂಎಸ್ಎಸ್‍ಡಬ್ಲ್ಯೂನ ತರಗತಿಯನ್ನು ಹಂಚಿಕೊಂಡವರಲ್ಲಿ ವಂದನಾರವರು ಬಹಳ ಕಿರಿಯರು ಮತ್ತು ಅವರೊಂದಿಗೆ ನಾನು ಎರಡು ದಶಕಕ್ಕೂ ಹೆಚ್ಚಿನ ಕಾಲ ತರಗತಿಯನ್ನು ಹಂಚಿಕೊಂಡಿದ್ದೆ. ವಂದನಾರವರ ಜೀವನದ ಮಹಾನ್ ಧ್ಯೇಯದ ಬಗ್ಗೆ ನನಗೆ ಸುಳಿವೇಯಿರಲಿಲ್ಲ. ಯಾವುದೇ ಸಮಾಜದ ಯಾವುದೇ ಜನಸಂಖ್ಯೆಯ ವಿವಿಧ ದುರ್ಬಲ ವಿಭಾಗಗಳಲ್ಲಿ ಮಾನಸಿಕ ಅಸ್ವಸ್ಥರು ಮತ್ತು ಅದರಲ್ಲಿ ಬಡ ಮಾನಸಿಕ ಅಸ್ವಸ್ಥ ಮಹಿಳೆಯು ಕಿರುಕುಳ ಮತ್ತು ನಿರ್ಲಕ್ಷ್ಯದ ಬಲಿಪಶುಗಳಾಗಿರುತ್ತಾರೆ. ವಂದನಾ ಮತ್ತು ವೈಷ್ಣವಿರವರು ಇಂತಹ ಅದೃಶ್ಯ ವಿಭಾಗದ ಜನರಿಗಾಗಿ ಪ್ರಾರಂಭಿಸಿದ ಚಳುವಳಿಯು ಮಾನವ ಕುಲ ತನ್ನ ಘನತೆ ಮತ್ತು ಮೌಲ್ಯಗಳನ್ನು ಮರುಸ್ಥಾಪಿಸುವ ಚಳುವಳಿಯಾಗಿದೆ. ನನ್ನ ದೃಷ್ಟಿಯಲ್ಲಿ ವಂದನಾರವರು ಮತ್ತೊರ್ವ ಫ್ಲೋರೆನ್ಸ್ ನೈಟಿಂಗೇಲ್.

ಮಾನಸಿಕ ರಕ್ಷಣಾಲಯಗಳಲ್ಲಿ ಬದುಕುತ್ತಿರುವ ಮಹಿಳೆಯರ ಅಮಾನವೀಯ ಸ್ಥಿತಿಗಳು. ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ನಿಮ್ಹಾನ್ಸ್ ನಡೆಸಿದ ಅಧ್ಯಯನದಿಂದ ತಿಳಿದು ಬಂದದ್ದೇನೆಂದರೆ ದೇಶದಲ್ಲಿನ ಸರ್ಕಾರಿ ಮಾನಸಿಕ ಆಸ್ಪತ್ರೆಗಳಲ್ಲಿ ಅನಾರೋಗ್ಯಕರವಾದ ಪರಿಸರ, ಜನಜಂಗುಳಿಯಿಂದ ತುಂಬಿದ ವಾರ್ಡ್‍ಗಳು,  ಮನೋವೈದ್ಯರ ಮತ್ತು ಸಹಾಯಕ ಸಿಬ್ಬಂದಿಗಳ ಕೊರತೆ ಇನ್ನೂ ಮುಂತಾದ ದೋಷಗಳು ಕಂಡುಬಂದವು. ಒಂದು ಆಸ್ಪತ್ರೆಯಲ್ಲಿ ಮಹಿಳೆಯರನ್ನು ಕಾರಾಗೃಹದಲ್ಲಿಟ್ಟಂತೆ ಇಟ್ಟಿದ್ದರು. ಅವರನ್ನು ಹೊರಗಡೆ ಎಲ್ಲೂ ಬಿಡುತ್ತಿರಲಿಲ್ಲ ಮತ್ತು ಅವರು ಶೌಚಕ್ಕೆ ಸಿಬ್ಬಂದಿಯೊಂದಿಗೇ ಹೋಗಬೇಕಾಗಿತ್ತು. ಇನ್ನೊಂದು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಸಿಗೆ ಮತ್ತು ಚಾಪೆಗಳೇ ಇರಲಿಲ್ಲ. ಇನ್ನೊಂದು ಸಂಸ್ಥೆಯಲ್ಲಿ 150 ಮಹಿಳೆಯರಿಗೆ ಕೇವಲ 4 ಸ್ನಾನ ಗೃಹಗಳು ಮತ್ತು ಶೌಚಾಲಯಗಳಿದ್ದವು. ಒಂದು ಆಸ್ಪತ್ರೆಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್‍ಗಳನ್ನು ಕಿಟಕಿಗಳಿಂದಾಚೆ ಎಸೆಯುತ್ತಿದ್ದರು. ಅಲ್ಲಿ ಆರೋಗ್ಯಕರ ವಿಲೇವಾರಿಯಿರಲಿಲ್ಲ. ಕೆಲವು ಕುಟುಂಬಗಳು ತಮ್ಮ ಸರಿಯಾದ ವಿಳಾಸವನ್ನು ನೀಡದೆ ತಪ್ಪು ವಿಳಾಸವನ್ನು ನೀಡಿ ಮಹಿಳಾ ರೋಗಿಗಳನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಿ ಹೋಗಿರುವುದು ಕಂಡು ಬಂದಿತು. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಗಮನಿಸಿದಂತೆ ಮಹಿಳೆಯರನ್ನು ಮಾನಸಿಕ ಸಂಸ್ಥೆಗಳಲ್ಲಿ ಕೋಣೆಯಲ್ಲಿ ಕಸವನ್ನು ತುಂಬಿದಂತೆ ಇರಿಸಿರುತ್ತಾರೆ. ಅವರ ಬಗ್ಗೆ ಗಮನ ಮತ್ತು ಕಾಳಜಿಯಿರುವುದಿಲ್ಲ ಇದು 21ನೇ ಶತಮಾನದ ಭಾರತದ ಕಟು ಸತ್ಯವಾಗಿದೆ.
 
-ಡಾ. ಟಿ.ಕೆ. ನೈಯ್ಯರ್
ಮಾಜಿ ಪ್ರಾಂಶುಪಾಲರು, ಎಂಎಸ್ಎಸ್‍ಡಬ್ಲ್ಯೂ

ರಮೇಶ ಎಂ.ಎಚ್.
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
+91-9980066890
+91-8310241136
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)