SKH
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
SKH

ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯ ಕಾರ್ಯಾಗಾರ

7/6/2017

0 Comments

 
ಸಮಾಜಕಾರ್ಯ ಶಿಕ್ಷಣ, ಪ್ರಮೇಯದ ಪ್ರಸ್ತುತ ಸ್ಥಿತಿ ಹಾಗೂ ಭವಿಷ್ಯದ ರೂಪುರೇಷೆಗಳು
 
ದಿನಾಂಕ:10-02-2011 ರಂದು  ಕುವೆಂಪು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗ ಆಯೋಜಿಸಿದ್ದ ಎರಡು ದಿನದ ಕಾರ್ಯಾಗಾರ.
ಸಮಾಜದಲ್ಲಿನ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಸಮಾಜಕಾರ್ಯ ಸಂಶೋಧನೆ ದಾರಿದೀಪವಾಗಬೇಕು ಮತ್ತು ಸಮಾಜಕಾರ್ಯದಂತಹ ಶಿಕ್ಷಣದಲ್ಲಿ ರಚನಾತ್ಮಕ ಬದಲಾವಣೆಗಳನ್ನು ತಂದು ಗುಣಾತ್ಮಕ ಸಂಶೋಧನೆಗಳು ನಡೆಯಬೇಕು ಎಂದು ಪ್ರೊಫೆಸರ್ ಎಸ್.ಎ.ಭಾರಿ, ಉಪಕುಲಪತಿಗಳು, ಕುವೆಂಪು ವಿಶ್ವವಿದ್ಯಾಲಯ ಇವರು ಸಮಾಜಕಾರ್ಯ ಶಿಕ್ಷಣ, ಪ್ರಮೇಯದ ಪ್ರಸ್ತುತ ಸ್ಥಿತಿ ಹಾಗೂ ಭವಿಷ್ಯದ ರೂಪುರೇಷೆಗಳು ಕುರಿತು ಎರಡು ದಿನದ ಕಾರ್ಯಾಗಾರದ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಪ್ರೊಫೆಸರ್ ಐ.ಎ.ಶರೀಫ್, ನಿವೃತ್ತ ಪ್ರೊಫೆಸರ್ ನಿಮ್ಹಾನ್ಸ್, ಬೆಂಗಳೂರು, ಇವರು ಸಮಾಜಕಾರ್ಯ ಶಿಕ್ಷಣದಲ್ಲಿನ ಬದಲಾವಣೆ ಮತ್ತು ಪ್ರಚಲಿತ ಸ್ಥಿತಿಗತಿಗಳ ಬಗ್ಗೆ ಗಮನಹರಿಸಬೇಕು ಮತ್ತು ಪ್ರಚಲಿತ ಸಮಸ್ಯೆಗಳನ್ನು ಬಗೆಹರಿಸುವ ವೈಜ್ಞಾನಿಕ ವಿಧಾನವಾಗಿ ಇನ್ನೂ ಸಮಾಜಕಾರ್ಯದ ಅಭಿವೃದ್ಧಿ ಆಗಬೇಕು ಎಂದರು. ಇನ್ನೋರ್ವ ಮುಖ್ಯ ಅತಿಥಿ ಪ್ರೊಫೆಸರ್ ಜಿ.ಎಸ್.ಬಿದರಕೊಪ್ಪ, ನಿವೃತ್ತ ಪ್ರೊಫೆಸರ್, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. ಇವರು ಪ್ರಸ್ತುತ ಜಾಗತೀಕರಣದಲ್ಲಿ ಸಮಾಜಕಾರ್ಯದ ಶಿಕ್ಷಣದಲ್ಲಿ ವೈಜ್ಞಾನಿಕ ಪಠ್ಯಕ್ರಮ, ಬೋಧನಾ ವಿಧಾನ ಮತ್ತು ಕ್ಷೇತ್ರಕಾರ್ಯದಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕು ಮತ್ತು ಸಂಶೋಧನೆಗಳು ನಡೆದು ಹೆಚ್ಚು ಕ್ಷೇತ್ರಗಳಲ್ಲಿ ವಿಸ್ತಾರವಾಗಬೇಕು ಎಂದು ಕರೆ ನೀಡಿದರು. 
ಇದೇ ಸಮಾರಂಭದಲ್ಲಿ ಡಾ.ಬಿ.ಎಸ್.ಗುಂಜಾಲ್, ಪ್ರವಾಚಕರು, ಸಮಾಜಕಾರ್ಯ ವಿಭಾಗ, ಕುವೆಂಪು ವಿಶ್ವವಿದ್ಯಾಲಯ ಇವರು ಬರೆದಿರುವ "ಸಮಾಜಕಾರ್ಯದ ಕ್ಷೇತ್ರಗಳು" (Fields of Social Work) ಎಂಬ ಪುಸ್ತಕವನ್ನು ಪ್ರೊಫೆಸರ್ ಎಸ್.ಎ.ಭಾರಿ, ಉಪಕುಲಪತಿಗಳು, ಕುವೆಂಪು ವಿಶ್ವವಿದ್ಯಾಲಯ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದರು. ನಂತರ ಮಾತನಾಡಿದ ಪ್ರೊಫೆಸರ್ ಸಿದ್ದೇಗೌಡ.ವೈ.ಎಸ್. ಪ್ರಾಧ್ಯಾಪಕರು, ಸಮಾಜಕಾರ್ಯ ವಿಭಾಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ಇವರು ಪುಸ್ತಕವು  ಸಮಾಜಕಾರ್ಯದ ಕ್ಷೇತ್ರಗಳ ಮೇಲೆ ವೈಜ್ಞಾನಿಕ ದೃಷ್ಟಿಕೋನವನ್ನು ಒಳಗೊಂಡ ಪ್ರಮುಖ ಸಮಾಜಕಾರ್ಯದ ಗ್ರಂಥಗಳಲ್ಲಿ ಒಂದಾಗಿದೆ ಎಂದು ಪುಸ್ತಕವನ್ನು ಕುರಿತು ಪ್ರಶಂಸೆಯ ಮಾತುಗಳನ್ನಾಡಿದರು.   

ಹಾಗೆಯೇ ಕಾರ್ಯಕ್ರಮದಲ್ಲಿ ಡಾ.ಎಚ್.ಎಂ. ಮರುಳಸಿದ್ಧಯ್ಯ (ನಿವೃತ್ತ ಪ್ರೊಫೆಸರ್ ಸಮಾಜಕಾರ್ಯ ವಿಭಾಗ, ಬೆಂ.ವಿ.ವಿ) ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ (ಡಾ.ಎಚ್.ಎಂ.ಮರುಳಸಿದ್ಧಯ್ಯನವರ ಅನುಪಸ್ಥಿತಿಯಲ್ಲಿ ಡಾ.ಬಿ.ರಮೇಶ್‍ರವರು ದಿಕ್ಸೂಚಿ ಭಾಷಣವನ್ನು ಓದಿದರು) ಸಮಾಜಕಾರ್ಯ ವೃತ್ತಿಯು ಅಳವಡಿಸಿಕೊಳ್ಳಲೇಬೇಕಾಗಿರುವ ಭಾರತೀಯ ಮೌಲ್ಯಗಳನ್ನು ಹಲವು ನಿದರ್ಶನಗಳೊಂದಿಗೆ ವಿವರಿಸಿದ್ದರು. ಸಾಮಾಜಿಕ ಅಭಿವೃದ್ಧಿಯಲ್ಲಿ ಸಮಾಜಕಾರ್ಯವು ತೊಡಗಿಸಿಕೊಳ್ಳಬೇಕಾದ ಅಗತ್ಯತೆ ಹಾಗೂ ಪ್ರಾಮುಖ್ಯತೆಯನ್ನು ವಿವರಿಸಿದ್ದರು. ನಂತರ ಮಾತನಾಡಿದ ಡಾ.ಬಿ.ರಮೇಶ್, ಪ್ರಾಧ್ಯಾಪಕರು, ಸಮಾಜಕಾರ್ಯ ವಿಭಾಗ, ಕುವೆಂಪು ವಿಶ್ವವಿದ್ಯಾಲಯ ಇವರು ಸಮಾಜಕಾರ್ಯ ಹಾಗೂ ಸಾರ್ವಜನಿಕ ನೀತಿ, ಸಮಾಜಕಾರ್ಯ ಸಂಶೋಧನೆ ಇತ್ಯಾದಿ ವಿಷಯಗಳ ಕುರಿತು ಈ ಕಾರ್ಯಾಗಾರದಲ್ಲಿ ಅಧಿವೇಶನಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು. ಸಾಮಾಜಿಕ ಅಭಿವೃದ್ಧಿಯಲ್ಲಿ ಇತ್ತೀಚಿನ ಬೆಳವಣಿಗೆಯಲ್ಲಿ ಹೆಚ್ಚು ಸಮರ್ಪಕವಾದ ಕ್ಷೇತ್ರವಾಗಿ ಸಮಾಜಕಾರ್ಯ ಶಿಕ್ಷಣವು ಒಂದು ಮೈಲುಗಲ್ಲಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊಫೆಸರ್ ಕೃಷ್ಣಮೂರ್ತಿ ಮುಕ್ತಾಯ ಭಾಷಣದಲ್ಲಿ ಅಭಿಪ್ರಾಯ ಪಟ್ಟರು.
 
ಕಾರ್ಯಾಗಾರದಲ್ಲಿನ ಪ್ರಮುಖ ನಿರ್ಧಾರಗಳು
ಸರ್ಕಾರದ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು ಯಶಸ್ವಿಯಾಗುವಲ್ಲಿ ಸಮಾಜಕಾರ್ಯವು ಪ್ರಮುಖ ಪಾತ್ರವನ್ನು ವಹಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಪರಿಣಿತರನ್ನು ತೊಡಗಿಸಿಕೊಳ್ಳವ ಅಗತ್ಯವಿದೆ. ಇದಕ್ಕಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನೂ ಅಭಿವೃದ್ಧಿ ಪಡಿಸಬೇಕು. ಇದರೊಂದಿಗೆ ಸಮಾಜಕಾರ್ಯ ಶಿಕ್ಷಕರನ್ನು, ತರಬೇತುದಾರರನ್ನು ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗುವಂತಹ ಕೌಶಲ್ಯಗಳನ್ನು ತರಬೇತುಗೊಳಿಸಬೇಕು. ಸರ್ಕಾರೀ ಮತ್ತು ಸರ್ಕಾರೇತರ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಮಾಜಕಾರ್ಯ ಪರಿಣಿತರು ತೊಡಗಿಸಿಕೊಳ್ಳುವ ಮೂಲಕ ಯಶಸ್ವಿಯಾಗಿ ಜನ ಸಮುದಾಯವನ್ನು ತಲುಪಬಹುದು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಕಾರ್ಯಾಗಾರದ ವಿಷಯ ತಜ್ಞರು, ಭಾಗವಹಿಸಿದ ಪ್ರಾಧ್ಯಾಪಕರು `ಕರ್ನಾಟಕ ರಾಜ್ಯ ಸಮಾಜಕಾರ್ಯ ಶಿಕ್ಷಣ ಸಂಸ್ಥೆಗಳ ಸಂಘ'ವನ್ನು ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಂಡರು.              

ಈ ಸಂಘವು ಇದೇ 2011 ಜೂನ್ ಅಥವಾ ಜುಲೈನಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆಸಲಾಗುವ ಭಾರತ ಸಮಾಜಕಾರ್ಯ ಶಿಕ್ಷಣದ 75ನೆಯ ವರ್ಷದ ಆಚರಣೆ ಮಹೋತ್ಸವದ ಸಂದರ್ಭದಲ್ಲಿ ಉದ್ಘಾಟನೆಯಾಗುವುದು. ಮೈಸೂರು ವಿಶ್ವವಿದ್ಯಾಲಯದ  ಪ್ರೊಫೆಸರ್ ಸಿದ್ದೇಗೌಡ ವೈ.ಎಸ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಗಾಂಧೀದಾಸ್ ನೇತೃತ್ವದಲ್ಲಿ ಐದು ಜನ ಇರುವ ಸಲಹಾ ಸಮಿತಿಯೊಂದನ್ನು ರಚಿಸಲಾಯ್ತು. ಸಮಾಜಕಾರ್ಯದಂತಹ ಶಿಕ್ಷಣದಲ್ಲಿ ಗುಣಾತ್ಮಕ ಸಂಶೋಧನೆಗಳು ನಡೆದು ಸಮಾಜದ ಅಭಿವೃದ್ಧಿಯಾಗಲಿ.
 
ಶಶಿಕಾಂತ ರಾವ್
ಲೇಖಕರು, ಉಪನ್ಯಾಸಕರು, ಸರ್ಕಾರಿ ಫಸ್ಟ್‍ ಗ್ರೇಡ್ ಕಾಲೇಜು, ಮಧುಗಿರಿ
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)