SKH
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
  • HOME
  • About Us
  • English Articles
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
    • Articles and Authors
    • Special Articles
    • Careers in Social Work
    • SOCIAL WORK BOOKS >
      • Book Reviews
    • Videos
  • Kannada Articles
    • ಸಮಾಜಕಾರ್ಯ ಪುಸ್ತಕಗಳು
    • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
    • ಆಡಿಯೋ ಮತ್ತು ವಿಡಿಯೋ
  • Navaratnas of Professional Social Work in India
  • Social Workers
  • Donate Used Books
  • Niruta Publications
    • Inviting Authors and Publishers
  • Services
    • Niruta Souharda Credit Co-Operative Limited
  • UGC NET SOCIAL WORK
    • UGC NET & K-SET Training (General Paper)
    • Required UGC NET & K-SET Trainers (General Paper)
    • Previous Question Papers
  • Subscription
    • Reader's Opinion
  • Online Groups
  • Social Work News
  • Ramesha's Blog
    • Ramesha's Profile
  • Search
  • Directory of Social Work Associations
  • Contact Us
SKH

``ಪ್ರಸ್ತುತ ಸಮಾಜಕಾರ್ಯ ಶಿಕ್ಷಣದ ಕ್ಷೇತ್ರಕಾರ್ಯದಲ್ಲಿ ಬದಲಾವಣೆ ಆವಶ್ಯಕವೇ''

7/6/2017

0 Comments

 
ಸಮಾಜಕಾರ್ಯ ಶಿಕ್ಷಣವು ಒಂದು ಪ್ರತ್ಯೇಕ ವೃತ್ತಿಪರ ಶಿಕ್ಷಣವಾಗಿ  ಗುರುತಿಸಿಕೊಂಡಿದ್ದರೂ ಇಂದಿಗೂ ಸರಿಯಾದ ಮಾನ್ಯತೆ ಸಿಗದೇ ಇರುವುದು ವಿಪರ್ಯಾಸವೇ ಸರಿ. ಇದಕ್ಕೆ ಮೂಲಕಾರಣ  ಸಮಾಜಕಾರ್ಯ ಶಿಕ್ಷಣದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಧಾನಗಳಿದ್ದಾಗಿಯೂ ಅವುಗಳ ಕ್ಷೇತ್ರಕಾರ್ಯದಲ್ಲಿನ ಆಚರಣೆಯಲ್ಲಿ ವಿಫಲತೆಗೊಂಡಿರುವುದು ಹಾಗೂ ಆಚರಣೆಯಲ್ಲಿ ದೇಶೀಕರಣಕ್ಕೆ ಬದಲಾಗಿ ಪಾಶ್ಚಾತ್ಯ ಪರಿಕಲ್ಪನೆಯನ್ನು ಆಧಾರವಾಗಿರಿಸಿಕೊಂಡಿರುವುದೇ ಆಗಿದೆ. ಆದ್ದರಿಂದ ನನ್ನ ವಾದ ಖಂಡಿತವಾಗಿಯೂ ಪ್ರಸ್ತುತ ಸಮಾಜಕಾರ್ಯ  ಕ್ಷೇತ್ರಕಾರ್ಯದಲ್ಲಿ ಬದಲಾವಣೆ ಅನಿವಾರ್ಯ ಹಾಗೂ ಆವಶ್ಯವೆನಿಸುತ್ತದೆ.
ಸಮಾಜಕಾರ್ಯದಲ್ಲಿನ ತರಬೇತಿಯು ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳನ್ನು ಉದ್ಯೋಗಸ್ಥರನ್ನಾಗಿಸುವುದರೊಂದಿಗೆ ಅವರಲ್ಲಿ ವೃತ್ತಿಪರ  ಆಚರಣೆಯ ಸವಾಲುಗಳು ಹಾಗೂ ಸಂದರ್ಶನಗಳನ್ನು ವಿಶ್ವಾಸದೊಂದಿಗೆ ಎದುರಿಸುವಂತೆ ಮಾಡುತ್ತದೆ. ವ್ಯಕ್ತಿಗಳು, ಗುಂಪುಗಳು ಹಾಗೂ ಸಮುದಾಯಗಳು ತಮ್ಮ  ಸತ್ತ್ವಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಲು ಮತ್ತು ತಮ್ಮ ಬಲಹೀನತೆಯನ್ನು ಸಂಪನ್ಮೂಲಗಳ ಸದ್ಬಳಕೆಯಿಂದ ಹೋಗಲಾಡಿಸಿಕೊಂಡು, ಜೀವನವನ್ನು ಹೆಚ್ಚು ಸಮರ್ಪಕವಾಗಿ ಹಾಗೂ ಕ್ರಿಯಾತ್ಮಕವಾಗಿಸಿಕೊಳ್ಳಲು ಅವುಗಳೊಂದಿಗೆ ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳ್ಳುವುದೇ ಸಮಾಜಕಾರ್ಯದ ಗುರಿಗಳಾಗಿವೆ.

ಸಮಾಜಕಾರ್ಯವು ಒಂದು ವೃತ್ತಿಪರವಾಗಿ ತರಬೇತಿ ನೀಡಲು 1878 ರಲ್ಲಿ ಅಮೇರಿಕಾದ ಸಿ.ಒ.ಎಸ್. ಪ್ರಶಿಕ್ಷಣ ತರಬೇತಿಯ (Apprentice training) ರೂಪದಲ್ಲಿ  ಸಮಾಜಕಾರ್ಯ ಶಿಕ್ಷಣವನ್ನು ಪ್ರಾರಂಭಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೊಸದಾಗಿ ನೇಮಕಗೊಂಡಂತಹ ಕಾರ್ಮಿಕರಿಗೆ ತರಬೇತಿ ಒದಗಿಸುವುದರೊಂದಿಗೆ ಸಮಾಜಕಾರ್ಯ ಶಿಕ್ಷಣವನ್ನು,  ಸಿ.ಒ.ಎಸ್. ಪ್ರಾರಂಭಿಸಿತು. ಈ ತರಬೇತಿಯ ಸ್ವರೂಪ ಕೇವಲ ಪ್ರಯೋಗಕ್ಕೆ ಒತ್ತು ನೀಡಲಾಗಿತ್ತೆ ಹೊರತು ಸೈದ್ಧಾಂತಿಕ ಅಂಶಗಳಿಗಲ್ಲ. ಇದು ಕೇವಲ ಹೊಸತಾಗಿ ನೇಮಕಗೊಂಡಂಥ ಸಮಾಜಕಾರ್ಯಕರ್ತರಿಗೆ ಐದು ವಾರಗಳ ತರಬೇತಿಯ ಕಾರ್ಯಕ್ರಮವಾಗಿತ್ತು. ಈ ರೀತಿಯ ತರಬೇತಿ ವಿಧಾನ ಹೊಸದಾಗಿ ನೇಮಕಗೊಂಡಂಥವರು ಹಿರಿಯ ಕಾರ್ಮಿಕರ ಕಾರ್ಯನಿರ್ವಹಣೆಯನ್ನು ಅವಲೋಕಿಸುವ  ಮೂಲಕ ಪ್ರಾಯೋಗಿಕವಾಗಿ ಕಲಿಯುವ ಸರಳ ವಿಧಾನವಾಗಿತ್ತು. ಕಾಲಕ್ರಮೇಣ ಈ ವ್ಯವಸ್ಥೆಯನ್ನು ಹಲವಾರು ಶಾಸ್ತ್ರಜ್ಞರು ಪರಿಸ್ಥಿತಿಗೆ ಅನುಗುಣವಾಗಿ ಬದಲಾಯಿಸಿದರು.

ಪ್ರಸ್ತುತ ಸಮಾಜಕಾರ್ಯ ಶಿಕ್ಷಣದಲ್ಲಿ  ಕ್ಷೇತ್ರಕಾರ್ಯ ತರಬೇತಿ ಮತ್ತು ಶಿಕ್ಷಣ ಎರಡನ್ನೂ ಕಾಣಬಹುದಾಗಿದೆ. ಸಮಾಜಕಾರ್ಯ ಶಾಲೆಗಳಲ್ಲಿ ಸಮಾಜಕಾರ್ಯ ವೃತ್ತಿಯ ಬಗ್ಗೆ ಸೈದ್ಧಾಂತಿಕ ಹಿನ್ನೆಲೆಯನ್ನು ಒದಗಿಸುತ್ತಿದ್ದಾಗಿಯೂ, ಪ್ರಶಿಕ್ಷಣಾರ್ಥಿಗಳಲ್ಲಿ ಇಂದಿಗೂ  ಕ್ಷೇತ್ರಕಾರ್ಯದ ತರಬೇತಿ ಬಗೆಗೆ ಗೊಂದಲವಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ಹಲವಾರು ರೀತಿಯ ಕಾರಣಗಳಿರಬಹುದು. ಒಟ್ಟಿನಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಸಿಗುವಂತಹ ಪ್ರಾಯೋಗಿಕ ಅನುಭವವು ಖಂಡಿತವಾಗಿಯೂ ಅವರಲ್ಲಿ ಸೇವಾರ್ಥಿಗಳ ಸಮಸ್ಯೆಗಳಿಗೆ ಶಾಲೆಗಳಿಂದ ಕಲಿತಂತಹ ವೈಜ್ಞಾನಿಕ ಜ್ಞಾನ, ಕೌಶಲ್ಯಗಳು ಹಾಗೂ ತಂತ್ರಾಂಶಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಹಾಯ ಮಾಡುವಂತಹ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ.

ನಮ್ಮೆಲ್ಲರಿಗೂ ತಿಳಿದಿರುವಂತೆ  ಕ್ಷೇತ್ರಕಾರ್ಯವು ಕ್ರಿಯಾತ್ಮಕತೆ ಹಾಗೂ ಹೊಸ-ಹೊಸ ಆಲೋಚನೆಗಳನ್ನು ಮೂಡಿಸುವಂತಹ ಒಂದು ಚಲನಾತ್ಮಕ ಪ್ರಕ್ರಿಯೆ.  ಕ್ಷೇತ್ರಕಾರ್ಯವನ್ನು  ಸರಳವಾಗಿ  ವಿವರಿಸುವುದಾದರೆ  ಜ್ಞಾನದ ಸದ್ಬಳಕೆಯಿಂದ ಮಾನವರ ಸಮಸ್ಯೆಗಳನ್ನು ನಿರ್ವಹಿಸುವ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಮೂಲಕ ಅನುಭವವನ್ನು ಗಳಿಸುವುದಾಗಿದೆ.

ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳು ವೃತ್ತಿಯ ಬಗೆಗೆ ಕಲಿತಂತಹ ಸೈದ್ಧಾಂತಿಕ ವಿಚಾರಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಸ್ವಯಂ ಸೇವಾ ಸಂಸ್ಥೆಗಳು/ಕಲ್ಯಾಣ ಸಂಸ್ಥೆಗಳು ಕಾಯರ್ಾಗಾರವಾದರೆ,  ಕ್ಷೇತ್ರಕಾರ್ಯ ತರಬೇತಿಯು ಒಂದು ಬಗೆಯ ಪ್ರಾಯೋಗಿಕ ಅನುಭವವಿದ್ದಂತೆ.  ಭಾರತದ ಸಮಾಜಕಾರ್ಯ ಶಿಕ್ಷಣದಲ್ಲಿ ವೃತ್ತಿಪರ ತರಬೇತಿಯು  ಮೊಟ್ಟ ಮೊದಲು 1936 ರಲ್ಲಿ ``ಸರ್ ದೊರಾಬ್ಜೀ ಟಾಟಾ ಗ್ರಾಜ್ಯೂಯೇಟ್ ಸ್ಕೂಲ್ ಆಫ್ ಸೋಷಿಯಲ್  ವರ್ಕ್‍'' ಶಾಲೆಯು ಮುಂಬಯಿನಲ್ಲಿ ಪ್ರಾರಂಭವಾಯಿತು.

ಡಿವೇ (Dewey)ರವರ ಪ್ರಕಾರ ಕಾರ್ಯನಿರ್ವಹಿಸುವ ಮೂಲಕ ಕಲಿಯುವಿಕೆಯು  ಕ್ಷೇತ್ರಕಾರ್ಯದ ಪರಿಕಲ್ಪನೆಯ ಮೇಲೆ ಪ್ರಾಥಮಿಕ ಪ್ರಭಾವವನ್ನು ಬೀರುತ್ತದೆ. ಸರಳಾರ್ಥದಲ್ಲಿ ಹೇಳುವುದಾದರೆ, ಆಚರಣೆಯ ಹೊರತಾದ ಸಿದ್ಧಾಂತ ಖಾಲಿ, ಸಿದ್ಧಾಂತದ ಹೊರತಾದ ಆಚರಣೆ ಅರ್ಥಹೀನ. ಸಮಾಜದಲ್ಲಿನ ಸಮಸ್ಯೆಗಳ ನಿವಾರಣೆಗೆ ಸಮಾಜಕಾರ್ಯ ಎಷ್ಟು ಮುಖ್ಯವೋ, ಸಮಾಜಕಾರ್ಯಕ್ಕೆ  ಕ್ಷೇತ್ರಕಾರ್ಯ ಅಷ್ಟೇ ಅನಿವಾರ್ಯ.
 
ಪ್ರಮುಖವಾಗಿ  ಕ್ಷೇತ್ರಕಾರ್ಯದಲ್ಲಿ 5 ಘಟಕಾಂಶಗಳನ್ನು ಗುರುತಿಸಬಹುದು ಅವುಗಳೆಂದರೆ:
1. ಪ್ರಶಿಕ್ಷಣ ಸಂಸ್ಥೆ
2. ಸಮಾಜ ಕಲ್ಯಾಣ ಸಂಸ್ಥೆ
3. ಸಮಾಜಕಾರ್ಯ ಪ್ರಶಿಕ್ಷಣಾರ್ಥಿ
4. ಶಿಕ್ಷಕ ಮೇಲ್ವಿಚಾರಕರು
5. ಸಂಸ್ಥೆ ಮೇಲ್ವಿಚಾರಕರು

ಈ ಮೇಲಿನ ಘಟಕಾಂಶಗಳನ್ನು ಆಧಾರವಾಗಿರಿಸಿಕೊಂಡೇ ಕ್ಷೇತ್ರಕಾರ್ಯದಲ್ಲಿ ಬದಲಾವಣೆ ಪ್ರಸ್ತುತ ಎಂಬುದನ್ನು ಸಮರ್ಥಿಸಬಹುದಾಗಿದೆ.

ಪ್ರಸ್ತುತ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳ  ಕ್ಷೇತ್ರಕಾರ್ಯದ ತರಬೇತಿಯ ಅನುಭವಗಳ ಅಭಿಪ್ರಾಯ ಸಂಗ್ರಹಣೆಯನ್ನು ಆಧಾರವಾಗಿರಿಸಿಕೊಂಡು ಈ ಕೆಳಕಂಡ ಬದಲಾವಣೆಗಳನ್ನು ಸೂಚಿಸಬಹುದಾಗಿದೆ.
 
1. ನಿರ್ದಿಷ್ಟವಾಗಿ ಸಮಾಜಕಾರ್ಯ ಶಿಕ್ಷಣ ಸಂಸ್ಥೆಗಳಲ್ಲಿ ಕ್ಷೇತ್ರಾಧ್ಯಯನಕ್ಕೆ ಸಂಬಂಧಿಸಿದಂತೆ ಆಗಬೇಕಾದ ಬದಲಾವಣೆಗಳೆಂದರೆ;

  • ಪ್ರಾಯೋಗಿಕ ಅನುಭವದ ಕೊರತೆಯ ಶಿಕ್ಷಕರ ಬದಲಿಗೆ ಪ್ರಾಯೋಗಿಕ ಅನುಭವವಿರುವಂತಹ ಹಾಗೂ ವೃತ್ತಿ ಸಂಬಂಧಿತ ಉನ್ನತ ಶಿಕ್ಷಣ ಪಡೆದವರಿಗೆ ಆದ್ಯತೆ ನೀಡಿ ಅಂತಹವರನ್ನು ನೇಮಿಸಿಕೊಳ್ಳುವುದು.
  • ಕ್ಷೇತ್ರಕಾರ್ಯ ತರಬೇತಿಗೆ ಸಂಬಂಧಿಸಿದಂತಹ ಸೂಕ್ತವಾದ ಪಠ್ಯಕ್ರಮ ಹಾಗೂ ಪ್ರಶಿಕ್ಷಣಾರ್ಥಿಗಳಿಗೆ ಅನುಕೂಲವಾಗುವಂತಹ ಮಾರ್ಗ ಸೂಚಿಗಳನ್ನು ಜಾರಿಗೊಳಿಸಿ ಜಾರಿಗೆ ತರಬೇಕು, ಸಾಧ್ಯವಾದರೆ ಅದನ್ನು ಏಕರೂಪಗೊಳಿಸಿ ಜಾರಿಗೆ ತರಬೇಕು.
  • ಶಿಕ್ಷಣ ಸಂಸ್ಥೆಗಳಲ್ಲಿ  ಕ್ಷೇತ್ರಕಾರ್ಯಕ್ಕೆ ಸಂಬಂಧಿಸಿದಂತಹ ಸಾಹಿತ್ಯ ಭಂಡಾರವನ್ನು ಒದಗಿಸಬೇಕು. ಈ ಮೂಲಕವಾಗಿ ಪ್ರಶಿಕ್ಷಣಾರ್ಥಿಗಳಲ್ಲಿ  ಕ್ಷೇತ್ರಕಾರ್ಯ ಪರಿಕಲ್ಪನೆಗಳ ಬಗೆಗೆ ಉದ್ಭವಿಸಬಹುದಾದ ಗೊಂದಲಗಳನ್ನು ಪ್ರಾಯೋಗಿಕ ದೃಷ್ಟಿಕೋನದ ಮೂಲಕ ಸ್ಪಷ್ಟಗೊಳಿಸುವುದು.
  • ಸಮಾಜಕಾರ್ಯ ಶಿಕ್ಷಣವು ಕೇವಲ ಪರೀಕ್ಷಾ ದೃಷ್ಠಿಗೇ ಸೀಮಿತವಾಗದೆ  ವೃತ್ತಿಪರತೆಗೆ ಅನುಕೂಲಕರವಾಗುವ ರೀತಿಯಲ್ಲಿ  ಕ್ಷೇತ್ರಕಾರ್ಯದ  ಬಗೆಗೆ ಆಚರಣೆಯನ್ನು ಕಡ್ಡಾಯಗೊಳಿಸಬೇಕು.
  • ಅವಶ್ಯಕತೆಗೂ ಮೀರಿ ಕೇವಲ ಲಾಭಗಳಿಕೆಯ ದೃಷ್ಟಿಯಿಂದ ನಾಯಿಕೊಡೆಗಳಂತೆ ಉದ್ಭವವಾಗುತ್ತಿರುವಂತಹ ಸಮಾಜಕಾರ್ಯ ಶಾಲೆಗಳಿಗೆ ತಡೆ ನಿರ್ಮಿಸುವ ಮೂಲಕ ಇರುವಂತಹ ಶಾಲೆಗಳಲ್ಲಿನ ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸಿ ವೃತ್ತಿಪರತೆಗೆ ಅನುಗುಣವಾದ ಶಿಕ್ಷಣವನ್ನು ಪ್ರಶಿಕ್ಷಣಾರ್ಥಿಗಳಿಗೆ  ದೊರಕಿಸಬೇಕು.
 
2. ನಿರ್ದಿಷ್ಟವಾಗಿ  ಕ್ಷೇತ್ರಕಾರ್ಯಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ/ಸ್ವಯಂ ಸೇವಾ ಸಂಸ್ಥೆಗಳಲ್ಲಿ ಆಗಬೇಕಾದಬದಲಾವಣೆಗಳೆಂದರೆ.

  • ಸಂಸ್ಥೆಗಳಿಗೆ ಬರುವ ಪ್ರಶಿಕ್ಷಣಾರ್ಥಿಗಳಿಗೆ  ಕ್ಷೇತ್ರಕಾರ್ಯದ ಆಚರಣೆಯನ್ನು ಕಡ್ಡಾಯಗೊಳಿಸಬೇಕು.
  • ಸಂಸ್ಥೆಗಳಲ್ಲಿ ಕ್ಷೇತ್ರಕಾರ್ಯ ತರಬೇತಿ ನೀಡುವಂತಹ ಮೇಲ್ವಿಚಾರಕರಿಗೆ ಸಮಾಜಕಾರ್ಯ ಶಿಕ್ಷಣದ ಸ್ವರೂಪದ ಬಗೆಗೆ ಸರಿಯಾಗಿ ತರಬೇತಿಯನ್ನು ನೀಡಬೇಕು. ಸಾಧ್ಯವಾದಷ್ಟು ಸಮಾಜಕಾರ್ಯದ ಬಗೆಗೆ ತರಬೇತಿ ಪಡೆದಿರುವಂತಹ ಮೇಲ್ವಿಚಾರಕರನ್ನು ನೇಮಿಸುವುದು.
  • ವೃತ್ತಿಪರ ಸಮಾಜಕಾರ್ಯಕರ್ತರ ಕೊರತೆ ಇರುವಂತಹ ಸಂಸ್ಥೆಗಳಲ್ಲಿ ಕ್ಷೇತ್ರಕಾರ್ಯ ನಿರ್ವಹಿಸುವುದರಿಂದ ನಿರೀಕ್ಷಿತ ಗುಣಮಟ್ಟದ ಮೇಲ್ವಿಚಾರಣೆಯನ್ನು ಕಾಣಲು ಸಾಧ್ಯವಿಲ್ಲ, ಇದು ಪ್ರಶಿಕ್ಷಣಾರ್ಥಿಗಳ ಮೇಲೆ ಕೆಟ್ಟ ಪ್ರಭಾವ ಬೀರುವಂತಾಗಬಾರದು.
  • ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸಂಸ್ಥೆಯ ವೃತ್ತಿಪರರು ಪ್ರಶಿಕ್ಷಣಾರ್ಥಿಗಳ ಸಮಯಕ್ಕೆ ಆದ್ಯತೆಯನ್ನು ನೀಡಬೇಕು.
 
3. ನಿರ್ದಿಷ್ಟವಾಗಿ ಕ್ಷೇತ್ರಕಾರ್ಯಕ್ಕೆ ಸಂಬಂಧಿಸಿದಂತೆ ಪ್ರಶಿಕ್ಷಣಾರ್ಥಿಗಳಲ್ಲಿ ಆಗಬೇಕಾದ ಬದಲಾವಣೆಗಳೆಂದರೆ;

  • ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳು ಆಸಕ್ತಿ ವಹಿಸಿ ಕ್ಷೇತ್ರಕಾರ್ಯದಲ್ಲಿ ಭಾಗವಹಿಸಬೇಕು.
  • ಕ್ಷೇತ್ರಕಾರ್ಯಕ್ಕೆ ಸಂಬಂಧಿಸಿದಂತೆ ಪ್ರಶಿಕ್ಷಣಾರ್ಥಿಗಳ ದೃಷ್ಟಿಕೋನದಲ್ಲಿ ಬದಲಾವಣೆ ಮೂಡಬೇಕು ಅಂದರೆ ಇದನ್ನು ಕೇವಲ ಪರೀಕ್ಷಾ ದೃಷ್ಟಿಯಿಂದ ಆಚರಣೆ ಮಾಡುವ ಬದಲಿಗೆ ತಮ್ಮ ವೃತ್ತಿಪರತೆಯ ಜ್ಞಾನ, ಕೌಶಲ್ಯ ಹಾಗೂ ತಂತ್ರಾಂಶಗಳನ್ನು ಹೆಚ್ಚಿಸಿಕೊಳ್ಳಲು ಆಚರಿಸಬೇಕು.
  • ಕ್ಷೇತ್ರಕಾರ್ಯ ಪ್ರಾರಂಭಿಸುವ ಮುನ್ನ ಪ್ರಶಿಕ್ಷಣಾರ್ಥಿಗಳು ಇದರ ಪರಿಕಲ್ಪನೆ, ಉದ್ದೇಶಗಳು, ಮಹತ್ವವನ್ನು ಅರಿತು ಆಚರಿಸಬೇಕು.
  • ಕ್ಷೇತ್ರಕಾರ್ಯದಲ್ಲಿ ಪ್ರಶಿಕ್ಷಣಾರ್ಥಿಗಳು ಸಮಯ ಪಾಲನೆಗೆ ಹೆಚ್ಚಿನ ಮಹತ್ವವನ್ನು ಕೊಡಬೇಕು.
  • ಕ್ಷೇತ್ರಕಾರ್ಯದ ಆಚರಣೆಯ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳು ಬಹಿರ್ಮುಖಿಗಳಾಗುವ ಮೂಲಕ ಹೆಚ್ಚು ಹೆಚ್ಚು ವಿಷಯಗಳನ್ನು ಮೇಲ್ವಿಚಾರಕರಿಂದ ಸಂಗ್ರಹಿಸಬೇಕು.
  • ಪ್ರಶಿಕ್ಷಣಾರ್ಥಿಗಳು ಶಾಲೆಗಳಲ್ಲಿ ಕಲಿತಂತಹ ಸೈದ್ಧಾಂತಿಕ ವಿಚಾರಗಳನ್ನು ಯಾವುದೇ ಆತಂಕ, ಅಳುಕು ಇಲ್ಲದೇ ಕ್ಷೇತ್ರಕಾರ್ಯದ ವೇಳೆ ಪ್ರಾಯೋಗಿಕವಾಗಿ ಆಚರಣೆಗೆ ತರುವ ಮೂಲಕ ಕ್ರಿಯಾತ್ಮಕ ವೃತ್ತಿಪರರಾಗಲು ಪ್ರಯತ್ನಿಸಬೇಕು.
 
4.  ಕ್ಷೇತ್ರಕಾರ್ಯಕ್ಕೆ ಸಂಬಂಧಿಸಿದಂತೆ ಮೇಲ್ಚಿಚಾರಕರಲ್ಲಿ ಆಗಬೇಕಾದ ಬದಲಾವಣೆಗಳು;

  • ಮೇಲ್ವಿಚಾರಕರು ಸದಾ ಕ್ರ್ರಿಯಾತ್ಮಕತೆ ಹಾಗೂ ಕ್ರ್ರಿಯಾಶೀಲರಾಗಿರಬೇಕು.
  • ಕ್ಷೇತ್ರಕಾರ್ಯದಲ್ಲಿ ಮೇಲ್ಚಿಚಾರಕರ ಪಾತ್ರ ವಿಶೇಷವಾಗಿದ್ದು, ಸದಾ ಜಾಗರೂಕತೆಯನ್ನು ವಹಿಸಬೇಕು.
  • ಮೇಲ್ವಿಚಾರಕರು ತಮ್ಮ ಪ್ರಾಯೋಗಿಕ ಅನುಭವದ ಜೊತೆ ಜೊತೆಗೆ ಕಡ್ಡಾಯವಾಗಿ ಸೈದ್ಧಾಂತಿಕ ವಿಚಾರಗಳನ್ನು ತಿಳಿದಿರಬೇಕಾಗಿರುತ್ತದೆ.
  • ಮೇಲ್ವಿಚಾರಕರು ಸಂಬಂಧಿಸಿದ ವ್ಯಕ್ತಿ ಅಥವಾ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕಾಗಿರುತ್ತದೆ.
  • ಪ್ರಶಿಕ್ಷಣಾರ್ಥಿಗಳ ಕ್ಷೇತ್ರಕಾರ್ಯಕ್ಕೆ  ಸಂಬಂಧಿಸಿದ ಕಲಿಕೆಗಳನ್ನು ತಿಳಿಯಲು ಸದಾ ಅವರಿಂದ  ಹಿಮ್ಮಾಹಿತಿಯನ್ನು ಪಡೆಯುವುದು.
  • ಕಾಲ ಕಾಲಕ್ಕೆ ಅನುಗುಣವಾಗಿ ಸಂಸ್ಥೆ ಹಾಗೂ ಶಾಲೆಯ ಮೇಲ್ವಿಚಾರಕರ ವಿಚಾರ ವಿನಿಮಯಕ್ಕೆ ಅನುಗುಣವಾದ ವೇದಿಕೆಗಳನ್ನು ಏರ್ಪಡಿಸುವುದು.
 
ಒಟ್ಟಿನಲ್ಲಿ ಮೂಲತಃ ಪಾಶ್ಚಾತ್ಯರಿಂದ ಎರವಲು ಪಡೆದ ವೃತ್ತಿಪರ ಸಮಾಜ ಕಾರ್ಯ  ಶಿಕ್ಷಣವನ್ನು ನಾವು ಇಂದಿಗೂ ಅವರದೇ ಧಾಟಿಯಲ್ಲಿ ಆಚರಿಸುತ್ತಿದ್ದೇವೆ, ಭಾರತದಲ್ಲಿ ಇದರ ಪರಿಕಲ್ಪನೆಯನ್ನು ಅಳವಡಿಸಿಕೊಂಡು 75 ವರ್ಷಗಳು ಕಳೆದರೂ ಇಂದಿಗೂ ಆಚರಣೆಯಲ್ಲಿ ದೇಶೀಕರಣವನ್ನು ಕಾಣಲು  ಸಾಧ್ಯವಾಗದೇ ಇರುವುದಕ್ಕೆ ನಾವು ಹಲವಾರು ಕಾರಣಗಳನ್ನು ಪಟ್ಟಿಮಾಡಬಹುದು, ಏನೇ ಆದರೂ ಪ್ರಸ್ತುತದಲ್ಲಿ ಕ್ಷೇತ್ರಕಾರ್ಯದ ಪರಿಕಲ್ಪನೆ ಹಾಗೂ ಆಚರಣೆ ಎರಡರಲ್ಲೂ ದೇಶೀಕರಣಕ್ಕೆ ಅನುಗುಣವಾದ ಬದಲಾವಣೆಯನ್ನು ತರುವುದು ಬಹುಮುಖ್ಯವಾಗಿದೆ.
 
ಮೋಹನ್ ವಿ.ಟಿ. 
ಸಪ್ತಗಿರಿ ನಿಲಯ, ಸರಪಣಿ ಆಶ್ರಮದ ಎದುರು, ಶಾರದಾದೇವಿ ನಗರ, ಬೆಳಗುಂಬ ರಸ್ತೆ, ತುಮಕೂರು- 572103
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
+91-9980066890
+91-8310241136
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)