SKH
  • HOME
    • About Us
  • English Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Online Groups
  • Search
  • Contact Us
  • HOME
    • About Us
  • English Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Online Groups
  • Search
  • Contact Us
SKH

ಎಂ.ವಿ. ಮೂರ್ತಿ : ಸಮಾಜಕಾರ್ಯದ ದ್ರೋಣಾಚಾರ್ಯ

7/16/2017

0 Comments

 
ಪ್ರೊ.ಎಂ.ವಿ.ಮೂರ್ತಿಯವರು ನೀಳ ಕಾಯದ, ದಿಟ್ಟ ನಿಲುವಿನ ಧೀಮಂತ ವ್ಯಕ್ತಿ. ಮಾತು ಮತ್ತು ನಡತೆ ಎರಡರಲ್ಲೂ ಏಕತೆಯನ್ನು ಹೊಂದಿದಂತಹ ಬಹು ಅಪರೂಪ ಎನಿಸುವಂತಹ ವ್ಯಕ್ತಿತ್ವ. ನಮ್ಮ ನಾಡು, ಸಂಪ್ರದಾಯಗಳಲ್ಲಿ ಅಪಾರ ನಂಬಿಕೆ, ಕಾಳಜಿ ಹೊಂದಿದ್ದಂತಹ ಪ್ರೊ.ಎಂ.ವಿ.ಮೂರ್ತಿರವರು ಹುಟ್ಟಿದ್ದು ಮೇ 10, 1910, ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ. ತಂದೆ ಮಠಮ್ ನಾರಾಯಣಾಚಾರ್, ವೃತ್ತಿಯಿಂದ ಲಾಯರ್, ತಾಯಿ ಸುಂದರಾಬಾಯಿ. ನಾರಾಯಣಾಚಾರ್ ಮತ್ತು ಸುಂದರಾಬಾಯಿಯವರ 6 ಮಕ್ಕಳಲ್ಲಿ ಎರಡನೆಯವರು ನಮ್ಮ ಎಂ.ವಿ.ಮೂರ್ತಿ. ಬಾಲ್ಯದಿಂದಲೇ ಬಹು ಚಟುವಟಿಕೆಯ ಹುಡುಗನಾಗಿದ್ದ ಎಂ.ವಿ.ಮೂರ್ತಿಯವರು ಬೆಳೆದಂತೆ ತಂದೆ ತಾಯಿಗಳ ಪ್ರಭಾವದಿಂದ ಸಂಪ್ರದಾಯ, ಭಾಷೆಯ ಬಗ್ಗೆ ಅತೀವ ಆಸಕ್ತಿ ಮತ್ತು ಪ್ರೇಮವನ್ನು ಬೆಳೆಸಿಕೊಳ್ಳುತ್ತಾ ಬಂದರು.
ಅದು ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದ್ದ ಕಾಲ. ಗಾಂಧಿಯವರ ಸಿದ್ಧಾಂತಗಳು ಎಂ.ವಿ.ಮೂರ್ತಿಯವರ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿದವು. ತಮ್ಮ ಕೊನೆಯ ದಿನದವರೆವಿಗೂ ಆ ಸಿದ್ಧಾಂತಗಳ ಪಾಲನೆಯಲ್ಲಿ ಲೋಪದೋಷಗಳು ನುಸುಳಲು ಅವಕಾಶ ಕೊಡಲಿಲ್ಲ. ಆ ಸಿದ್ಧಾಂತಗಳು ತಮ್ಮ ಮಕ್ಕಳಲ್ಲೂ ಬೆಳೆಯಲು ಪ್ರಯತ್ನಿಸಿದರು.

ನೀರಜಾ ದೇವಿಯವರನ್ನು 1933 ರಲ್ಲಿ ಕೈ ಹಿಡಿದ ಇವರು ಪ್ರೀತಿ, ವಿಶ್ವಾಸ ಮತ್ತು ಸಾಮಾಜಿಕ ಸಂಬಂಧಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದವರು. ಪತ್ನಿ ನೀರಜಾರೆಂದರೆ ಎಲ್ಲಿಲ್ಲದ ಗೌರವ ಮತ್ತು ಪ್ರೀತಿ. ಮದುವೆಯಾದ ದಿನದಿಂದ ತಮ್ಮ ಕೊನೆಯ ದಿನದವರೆವಿಗೂ ಪತ್ನಿಯ ಜೊತೆಯಲ್ಲಿಯೇ ಕುಳಿತು ಒಂದೇ ತಟ್ಟೆಯಲ್ಲಿ ಊಟ ಮಾಡುವುದು ಅವರು ಕೌಟುಂಬಿಕ ಸಂಬಂಧಕ್ಕೆ ಕೊಡುತ್ತಿದ್ದ ಪ್ರಾಮುಖ್ಯತೆಗೆ ಅತ್ತ್ಯುತ್ತಮ ನಿದರ್ಶನ. ಅವರ ಮಕ್ಕಳಾದ ಅಂಬರೀಶ ರಾಜ ಮತ್ತು ನಹುಶಾ ರಾಜರವರಲ್ಲೂ ಈ ರೀತಿಯ ಪದ್ಧತಿಯನ್ನು ಬೆಳೆಸಿದ್ದರು. ಮನೆ ಮಂದಿ ಬೆಳಗ್ಗೆಯಿಂದ ಸಂಜೆಯವರೆಗೂ ಹೊರಗೆ ತಮ್ಮ ಯಾವುದೇ ಕೆಲಸಗಳಲ್ಲಿ ನಿರತರಾಗಿದ್ದರೂ ಸಂಜೆಯ ಊಟ ಮಾತ್ರ ಮನೆಯಲ್ಲಿ ಕುಟುಂಬದ ಸದಸ್ಯರೆಲ್ಲರೊಂದಿಗೆಯೇ. ಇದು ಎಂ.ವಿ.ಮೂರ್ತಿಯವರು ಕುಟುಂಬದ ಸದಸ್ಯರ ಮೇಲೆ ಹೇರಿದಂತಹ ಕರಾರಾಗಿತ್ತು. ಇದು ತಾನು ಮನೆಯ ಯಜಮಾನನೆಂಬ ಅಹಂ ತೋರಿಸಲು ಅಲ್ಲದೇ, ಕೌಟುಂಬಿಕ ಸಂಬಂಧವನ್ನು ಸುಭದ್ರಗೊಳಿಸುವ ಉದ್ದೇಶವಾಗಿತ್ತು.
 
ಪುಸ್ತಕ ಪ್ರೀತಿ:
ಎಂ.ವಿ.ಮೂರ್ತಿಯವರಿಗೆ ಪುಸ್ತಕಗಳೆಂದರೆ ಎಲ್ಲಿಲ್ಲದ ಪ್ರೀತಿ. ಓದಲು ಕುಳಿತರೆ ತನ್ನ ಸುತ್ತಮುತ್ತ ಏನು ನೆಡೆಯುತ್ತಿದೆಯೆಂಬ ಅರಿವಿಲ್ಲದವರಂತೆ ಅದರಲ್ಲಿ ವಿಲೀನಗೊಂಡಿರುತ್ತಿದ್ದರು. ಇವರ ಓದು ಹವ್ಯಾಸ ಎಷ್ಟರ ಮಟ್ಟಿಗಿತ್ತೆಂದರೆ ಬೇರೆಯವರು ಓದಿ ಅಥವಾ ಓದದೆ ಹಳೆಯ ಪೇಪರ್ನವರಿಗೆ ಮಾರಾಟ ಮಾಡಿದ್ದಂತಹ ಪುಸ್ತಕಗಳನ್ನು ಆ ವ್ಯಾಪಾರಿಯಿಂದ ಮತ್ತೆ ಪಡೆದುತಂದು ಓದುತ್ತಿದ್ದರು. ಅವರ ಕೊಠಡಿಯ ತುಂಬೆಲ್ಲಾ ಬರೀ ಪುಸ್ತಕಗಳ ರಾಶಿಯೇ.

ಅದು ಬಡತನದ ಸಮಯ. ತಮಗೆ ಬರುತ್ತಿದ್ದಂತಹ ಸಂಬಳ ಮನೆ ಮಕ್ಕಳು ಮತ್ತು ಅವರ ಓದಿಗೆ ಸಾಕಾಗುತ್ತಿರಲಿಲ್ಲ. ಅಂತಹ ಸಮಯದಲ್ಲಿಯೂ ಅವರ ಓದಿನ ಬಗೆಗಿನ ಆಸಕ್ತಿ ಕುಂದಿರಲಿಲ್ಲ. ಇವರು ಬರಿಯ ಓದುಗರಾಗಿ ಉಳಿಯಲಿಲ್ಲ ಬದಲಿಗೆ ಸಮಾಜಕಾರ್ಯಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಬರೆದರು. ಆ ಕೃತಿಗಳು ಇಂದಿಗೂ ಸಮಾಜಕಾರ್ಯ ವಿದ್ಯಾರ್ಥಿಗಳಿಗೊಂದು ಅತ್ತ್ಯುತ್ತಮ ಕೈದೀವಟಿಗೆಯಾಗಿವೆ.
 
ಸಂಸ್ಕೃತ ಭಾಷೆಯ ಮೇಲಿನ ಆಸಕ್ತಿ:
ಸಂಸ್ಕೃತ ಭಾಷೆಯ ಬಗ್ಗೆ ಎಂ.ವಿ.ಮೂರ್ತಿಯವರಿಗೆ ಬಹಳವಾದ ಆಸಕ್ತಿ ಮತ್ತು ಅದರ ಅಭಿವೃದ್ಧಿಗಾಗಿ ಅವರು ಅತ್ಯುತ್ತಮ ಕಾರ್ಯಗಳನ್ನು ಕೈಗೊಂಡಿದ್ದರು. ಆ ಭಾಷೆಯ ಮೇಲಿನ ತುಡಿತ ಮತ್ತದರ ಮೇಲಿನ ಹಿಡಿತ ಎಷ್ಟಿತ್ತೆಂದರೆ 7ನೆಯ ತರಗತಿಯವರೆಗೆ ಫ್ರೆಂಚ್ ಭಾಷೆಯನ್ನು ಮೊದಲ ಭಾಷಾಧ್ಯಯನವಾಗಿ ಓದಿದ್ದ ಮಕ್ಕಳನ್ನು 8ನೆಯ ತರಗತಿಯಲ್ಲಿ ಸಂಸ್ಕೃತವನ್ನು ಅವರ ಮೊದಲ ಭಾಷಾಭ್ಯಾಸವನ್ನಾಗಿ ಮಾಡಿದರು. ಈ ರೀತಿಯ ಅಚಾನಕ್ ಬದಲಾವಣೆಯಿಂದಾಗಿ ಮಕ್ಕಳು ತಬ್ಬಿಬ್ಬಾದರು. ಅವರನ್ನು ಸಂತೈಸಿ, ಧೈರ್ಯ ತುಂಬಿ, ಪ್ರತಿ ದಿನ ಸಾಯಂಕಾಲ ಒಂದು ಘಂಟೆಯ ಕಾಲ ಸಂಸ್ಕೃತ ಪಾಠವನ್ನು ಹೇಳಿಕೊಡಲು ಆರಂಭಿಸಿದರು. ಇದು ಎಷ್ಟರ ಮಟ್ಟಿಗೆ ಮಕ್ಕಳ ಮೇಲೆ ಪ್ರಭಾವ ಬೀರಿತ್ತೆಂದರೆ ಒಂದೇ ವರ್ಷದಲ್ಲಿ ಮಕ್ಕಳಿಗೆ ಸಂಸ್ಕೃತ ನೀರು ಕುಡಿದಷ್ಟೇ ಸುಲಲಿತವಾಗಿ ಹೋಗಿತ್ತು.

ನಂತರ ಭಾಷೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ಮತ್ತು ಅದರ ಬೆಳವಣಿಗೆಗೆ ಸಹಕಾರಿಯಾಗಲೆಂದು Sanskrit Clubನ್ನು ಸ್ಥಾಪಿಸಿ, ಸಂಸ್ಕೃತ ಭಾಷೆ ಬಲ್ಲವರು ಮತ್ತು ಅದರಲ್ಲಿ ಹೆಚ್ಚಿನ ಕಾರ್ಯನಿರ್ವಹಿಸಿದ್ದವರನ್ನು ಆ ಕ್ಲಬ್ ಗೆ ಆಹ್ವಾನಿಸಿ ಚರ್ಚೆ ನಡೆಸಲಾಗಿತ್ತು. ಕ್ಲಬ್ಬಿನ ಇನ್ನೊಂದು ವಿಶೇಷತೆಯೆಂದರೆ ಚರ್ಚೆಗಳು ಸಂಸ್ಕೃತ ಭಾಷೆಯಲ್ಲೇ ಇರುತ್ತಿದ್ದವು. ಅಂದರೆ ಕ್ಲಬ್ನ ಒಳಗೆ ಕಾಲಿಟ್ಟರೆಂದರೆ ಅವರ ಸಂವಹನ ಕ್ರಿಯೆ ನಡೆಯುತ್ತಿದ್ದದು ಸಂಸ್ಕೃತದಲ್ಲಿ ಮಾತ್ರ.
 
ವೃತ್ತಿ ಜೀವನ:
ಸಮಾಜಕಾರ್ಯ ಶಿಕ್ಷಣ ಕ್ಷೇತ್ರದ ಪ್ರಾರಂಭಿಕಾವಧಿಯ ಶಿಕ್ಷಕರಲ್ಲೊಬ್ಬರೆನಿಸಿಕೊಂಡಿರುವ ಎಂ.ವಿ.ಮೂರ್ತಿರವರು, ಮೊದಲಿಗೆ ತಮ್ಮ ವೃತ್ತಿಜೀವನವನ್ನು ಟಾಟಾ ಇನ್ಸ್ಟಿಟಿಟ್ಯೂಟ್ನಲ್ಲಿ ಪ್ರಾರಂಭಿಸಿದರು. ನಂತರ ಅದೇ ಟಾಟಾ ಇನ್ಸ್ಟಿಟ್ಯೂಟ್ನ ಮುಖ್ಯಸ್ಥರಾಗಿ ಜನವರಿ 1963ರಲ್ಲಿ ಆಯ್ಕೆಯಾದರು. ಈ ಅವಧಿಯಲ್ಲಿ ಇಂಡಸ್ಟ್ರಿಯಲ್ ರಿಲೇಷನ್ಸ್ ವಿಷಯಕ್ಕೆ ಸಂಬಂಧಿಸಿದ ಕೋರ್ಸ್‍ನ ಪುನರ್ವಿಮರ್ಶೆ ಕಾರ್ಯವನ್ನು ನಡೆಸಿದರು.

ನವೆಂಬರ್ 1962ರಲ್ಲಿ ಟೆಕ್ನಿಕಲ್ ಕೋ ಆಪರೇಷನ್ ಮಿಷನ್ಸ್ ಪರ್ಸನಲ್ ಮೇನೇಜ್ಮೆಂಟ್ ಟೀಮ್ ಆಫ್ ಇಂಡಿಯಾದ ನಾಯಕರಾಗಿ ಆಯ್ಕೆಯಾದರು. ಈ ಅಧಿಕಾರವಧಿಯಲ್ಲೆ ಅವರು ತಮ್ಮ ಗುಂಪಿನ ಸದಸ್ಯರೊಂದಿಗೆ ಜಪಾನ್, ಅಮೆರಿಕ, ಇಂಗ್ಲೆಂಡ್ ದೇಶಗಳನ್ನು ಸುತ್ತಿಬಂದಿದ್ದರು.

ಸುಮಾರು ಎರಡು ದಶಕಗಳ ಕಾಲ ಟಾಟಾ ಇನ್ಸ್ಟಿಟ್ಯೂಟ್ನಲ್ಲಿ ಸೇವೆ ಸಲ್ಲಿಸಿದ ಮೂರ್ತಿಯವರನ್ನು 1963ರಲ್ಲಿ ಆಂದ್ರ ವಿಶ್ವ ವಿದ್ಯಾನಿಲಯವು ಕೈಬೀಸಿ ಕರೆದಾಗ ಅಲ್ಲಿಯು ಸಹ ಪ್ರೊಫೆಸರ್ ಮತ್ತು ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ಹಲವು ವರ್ಷಗಳ ಇವರ ನಿಷ್ಕಲ್ಮಷ ಸೇವೆಯ ನಂತರ ಎಂ.ವಿ.ಮೂರ್ತಿಯವರು ಆಂಧ್ರ ವಿಶ್ವವಿದ್ಯಾನಿಲಯದ ಕಲೆ, ವಿಜ್ಞಾನ, ವಾಣಿಜ್ಯ ಮತ್ತು ಕಾನೂನು ವಿಭಾಗದ ಪ್ರಾಂಶುಪಾಲರಾಗಿ ನೇಮಕಗೊಂಡರು. ತಮ್ಮ ಕಾರ್ಯತತ್ಪರತೆ ಜೀವನ ಸಿದ್ಧಾಂತಗಳಿಂದ ಎಲ್ಲಾ ಸಹೋದ್ಯೋಗಿಗಳ ಆಪ್ತರಾಗಿದ್ದಂತಹ ಪ್ರೊ.ಮೂರ್ತಿಯವರು 1970ರಲ್ಲಿ ತಮ್ಮ ವೃತ್ತಿ ಜೀವನದಿಂದ ನಿವೃತ್ತಿ ಹೊಂದಿದರು. ಆದರೆ ನಿವೃತ್ತಿ ಬರಿಯ ಸಾಂಕೇತಿಕವಷ್ಟೆ. ಇದರ ನಂತರವೂ ಮೂರ್ತಿಯವರು ಹಲವಾರು ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಆಂಧ್ರ ವಿಶ್ವವಿದ್ಯಾನಿಲಯದಿಂದ ನಿವೃತ್ತಿ ಹೊಂದಿದ್ದ ಮೂರ್ತಿಯವರನ್ನು ಕಾಶೀ ವಿದ್ಯಾಪೀಠದ ಉಪನ್ಯಾಸಕ ಹುದ್ದೆಗೆ ನೇಮಕಗೊಂಡು, ಅಲ್ಲಿ ಡೀನ್ ಆದರು, 1972ರಲ್ಲಿ ಸ್ವತಃ ರಾಜೀನಾಮೆ ನೀಡಿ ಹೊರಬಂದರು.

ಪ್ರೊ. ಮೂರ್ತಿಯವರು ಉಪನ್ಯಾಸಕ ವೃತ್ತಿಯ ದೀರ್ಘಾವಧಿಯಲ್ಲಿ ಹಲವಾರು ಸಂಸ್ಥೆಗಳು ಮತ್ತು ಪ್ರೊಫೆಷನಲ್ ಬಾಡಿಗಳ ಜೊತೆ ನಿಕಟ ಸಂಬಂಧವನ್ನು ಹೊಂದಿದ್ದರು. ಹಲವಾರು ಬಾರಿ ಬಾಂಬೆ ಪ್ರೊಡಕ್ಟಿವಿಟಿ ಕೌನ್ಸಿಲ್ಗೆ ಆಯ್ಕೆಯಾಗಿದ್ದರು, ಅಸೋಸಿಯೇಷನ್ ಆಫ್ ಸ್ಕೂಲ್ಸ್ ಸೋಶಿಯಲ್ ವರ್ಕ್‍ನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು, ಇಂಡಸ್ಟ್ರಿಯಲ್ ವೆಲ್ಫೇರ್ ಅಸೋಸಿಯೇಷನ್ ಛೇರಮನ್ ಅಗಿ ಆಯ್ಕೆಗೊಂಡಿದ್ದರು ಮತ್ತು ತಮ್ಮ ಜೀವಿತಾವಧಿಯಲ್ಲಿ ಅನೇಕ ಪುಸ್ತಕಗಳನ್ನು ಬರೆಯುವುದರ ಮೂಲಕ ಸಮಾಜಕಾರ್ಯ ಸಾಹಿತ್ಯ ಕ್ಷೇತ್ರಕ್ಕೆ ಹಲವಾರು ಕೊಡುಗೆಗಳನ್ನು ನೀಡಿದರು.
 
ಉಪನ್ಯಾಸಕನಾಗಿ:
ಎಂ.ವಿ. ಮೂರ್ತಿಯವರು ಕುಟುಂಬ ನಿರ್ವಹಣೆಯಲ್ಲಿ, ಕೌಟುಂಬಿಕ ಸಂಬಂಧಗಳ ನಿರ್ವಹಣೆಯಲ್ಲಿ ಮಾತ್ರ ಮಾದರಿಯೆನಿಸಿಕೊಂಡವರಲ್ಲ, ಅದಕ್ಕಿಂತ ಹೆಚ್ಚಾಗಿ ತಮ್ಮ ಪ್ರಾಧ್ಯಾಪಕ ವೃತ್ತಿಯಲ್ಲಿ ಇತರೆ ಸಹೋದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಂತಹವರು. ತರಗತಿಯಲ್ಲಿ ವಿದ್ಯಾರ್ಥಿಗಳೆದುರು ಪಾಠ ಮಾಡಲು ನಿಂತರೆಂತರೆ ಒಬ್ಬ ವಿದ್ಯಾರ್ಥಿಯೂ ಪ್ರೊಫೆಸರ್ರವರ ಮಾತುಗಳನ್ನು ಬಿಟ್ಟು ಬೇರೆಡೆಗೆ ಗಮನಹರಿಸುತ್ತಿರಲಿಲ್ಲ. ಪ್ರೊಫೆಸರ್ರವರ ತರಗತಿ ಇತ್ತೆಂದರೆ ಯಾವ ವಿದ್ಯಾರ್ಥಿಯೂ ಅದನ್ನು ತಪ್ಪಿಸಿಕೊಳ್ಳುವ ಮನಸ್ಸು ಮಾಡುತ್ತಿರಲಿಲ್ಲ. ಇವರ ತರಗತಿಯು ಎಷ್ಟು ಲವಲವಿಕೆಯಿಂದ ಕೂಡಿರುತ್ತಿತ್ತೆಂದರೆ ಪಕ್ಕದ ತರಗತಿಯ ಶಿಕ್ಷಕರು ಪ್ರೊಫೆಸರ್ ಪಾಠ ಮಾಡುವ ರೀತಿ ನಮ್ಮ ತರಗತಿಗೆ ತೊಂದರೆ ಮಾಡುತ್ತಿದೆ, ಅವರ ವಿದ್ಯಾರ್ಥಿಗಳು ಯಾವಾಗಲೂ ನಗುತ್ತಿರುತ್ತಾರೆ, ಅದು ನಮ್ಮ ತರಗತಿಗೆ ಕೇಳಿಸುವಷ್ಟು ಜೋರಾಗಿರುತ್ತದೆ, ಇದರಿಂದ ನಮ್ಮ ವಿದ್ಯಾರ್ಥಿಗಳು ವಿಚಲಿತರಾಗುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಿಗೆ ದೂರು ನೀಡುತ್ತಿದ್ದರು. ವಿದ್ಯಾರ್ಥಿಗಳ ಆ ವರ್ತನೆಗೆ ಕಾರಣ ಎಂ.ವಿ.ಮೂರ್ತಿಯವರ ಹಾಸ್ಯ ಪ್ರವೃತ್ತಿ. ಇದು ಪ್ರೊಫೆಸರ್ರವರು ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಹಿಡಿದಿಟ್ಟುಕೊಳ್ಳಲು ಮತ್ತು ವಿಷಯವನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಲು ಉಪಯೋಗಿಸುತ್ತಿದ್ದಂತಹ ಅದ್ಭುತ ತಂತ್ರವಾಗಿತ್ತು. ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್ರವರ ಸಂಬಂಧ ಎಷ್ಟರಮಟ್ಟಿಗೆ ಧೃಡತೆಯನ್ನು ಹೊಂದಿತ್ತೆಂದರೆ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಶೆಯನ್ನು ಮುಗಿಸಿದ ನಂತರವೂ ಪ್ರೊಫೆಸರ್ ರನ್ನು ಭೇಟಿಯಾಗಲು ಮನೆಗೆ ಬರುತ್ತಿದ್ದರು. ಇಂತಹ ಒಬ್ಬ ಉತ್ತಮ ಮೌಲ್ಯಗಳನ್ನು ಹೊಂದಿದ್ದಂತಹ ಗುರುಗಳ ಮಾರ್ಗದರ್ಶನದಲ್ಲಿ ತಯಾರಾದ ವಿದ್ಯಾರ್ಥಿಗಳು ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಅತ್ಯಂತ ಪ್ರಶಂಸನೀಯವಾದುದು.
 
ಕೃತಿಗಳು:
  • Social Action-Asia Publication
  • Human Resource Management in India
  • Field Work in Social Work
  • Contemporary Social Work in India
  • Human Resource Management
  • Psycho-sociological Approches to Social Work
  • Social Work Philosophy Methods and Fields
 
ತೆಲುಗು ಪ್ರೊ. ಮೂರ್ತಿಯವರ ಮನೆ ಮಾತಾದರೂ ಇವರ ಪುಸ್ತಕ ಪ್ರೀತಿ, ಹೊರ ಜಗತ್ತಿನೊಂದಿಗಿನ ಇವರ ಒಡನಾಟ ಇವರಿಗೆ ಬೇರೆ ಭಾಷೆಯಲ್ಲಿಯೂ ನೈಪುಣ್ಯತೆಯನ್ನು ನೀಡಿತ್ತು. ಕನ್ನಡ ಇಂಗ್ಲಿಷ್, ಹಿಂದಿ ಮತ್ತು ಸಂಸ್ಕೃತ ಭಾಷೆಗಳ ಮೇಲೆ ಹಿಡಿತವನ್ನು ಸಾಧಿಸಿದ್ದರು. ಇದರ ಪಲಿತಾಂಶವಾಗಿ ಸಂಸ್ಕೃತ ವಾರ ಪತ್ರಿಕೆಯಾಗಿದ್ದ ಭವಿತವ್ಯಂನ ಅಂಕಣಕಾರರಾಗಿದ್ದರು.

ತಮ್ಮ ವೃತ್ತಿ ಜೀವನದಿಂದ ನಿವೃತ್ತಿ ಹೊಂದಿ ಬೆಂಗಳೂರಿಗೆ ಬಂದು ನೆಲಸಿದ ಮೂರ್ತಿಯವರು ಅಂತಹ ಇಳಿಯ ವಯಸ್ಸಿನಲ್ಲೂ ಸುಮ್ಮನೆ ಕುಳಿತು ಸಮಯವನ್ನು ವ್ಯರ್ಥಮಾಡಿದವರಲ್ಲ. ಆ ಸಮಯದಲ್ಲಿ ತಮ್ಮ ಇಷ್ಟದ ಕ್ಷೇತ್ರಗಳ ಬಗ್ಗೆ ಹೆಚ್ಚೆಚ್ಚು ಅಧ್ಯಯನ ನಡೆಸಿದರು, ಸಮಾಜ ಶಾಸ್ತ್ರ, ಸಮಾಜಕಾರ್ಯ, ಇಂಗ್ಲೀಷ್  ಮತ್ತು ಸಂಸ್ಕೃತದ ವಿಷಯಗಳ ಬಗ್ಗೆ ಹೆಚ್ಚೆಚ್ಚು ಪುಸ್ತಕಗಳನ್ನು ಓದಿ ಆಳವಾದ ಜ್ಞಾನವನ್ನು ಪಡೆದರು. ಎಷ್ಟು ದಿನಗಳವರೆಗೂ ಅವರ ದೇಹ ಮನಸ್ಸು ಎರಡು ಒಂದಕ್ಕೊಂದು ಸ್ಪಂದಿಸಲು ಅವಕಾಶವಿತ್ತೋ ಅಲ್ಲಿಯವರೆಗೂ ಅವರ ಜ್ಞಾನ ದಾಹ ಇಂಗಿರಲಿಲ್ಲ. ಇವರ ಅವಿರತ ಶ್ರಮ ಕಾರ್ಯ ತತ್ಪರತೆ, ಹಿಡಿದ ಕೆಲಸವನ್ನು ಕೈಬಿಡದೆ ನಡೆಸುವ ದೃಢತೆ, ಎಲ್ಲರೊಳಗೊಂದಾಗಿ ಬಾಳುವ ಮನೋಭಾವ, ಎಷ್ಟೇ ಎತ್ತರಕ್ಕೆ ಏರಿದರು. ಚಿಕ್ಕವನಾಗೇ ಇರು ಎನ್ನುವ ಅವರ ಜೀವನ ಸಿದ್ಧಾಂತ ನಮ್ಮ ಪ್ರಸಕ್ತ ಸಮಾಜಕಾರ್ಯ ವೃತ್ತಿ ನಿರತರಿಗೊಂದು ಮಾದರಿ. ಆದ್ದರಿಂದ ಇವರನ್ನು ಸಮಾಜಕಾರ್ಯಕ್ಷೇತ್ರದ ಅಭ್ಯುದಯಕ್ಕೆ ಕಾರಣೀಭೂತರಾದ ಅತಿರಥರಲ್ಲಿ ಒಬ್ಬರೆಂದರೆ ತಪ್ಪಾಗಲಾರದೆಂದೆನಿಸುತ್ತದೆ.
 
ಶ್ರೀಮತಿ ಅನಿತ ಅಶೋಕ್
​
ನಿರಾತಂಕ
0 Comments



Leave a Reply.

    Social Work Foot Prints

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)