ಡಾ. ಎಚ್.ಎಂ. ಮರುಳಸಿದ್ಧಯ್ಯ, ಪು. 184, ಬೆಲೆ : 100, ಐಬಿಎಚ್ ಪ್ರಕಾಶನ ಜನರ ಜೀವನವು ಬರಬರುತ್ತಾ ಕ್ಲಿಷ್ಟವಾಗುತ್ತಾ ಗೊಂದಲಮಯವಾಗುತ್ತಿದೆ; ಅದು ಹೆಚ್ಚು ಹೆಚ್ಚು ಅವೈಯಕ್ತಿಕತೆಯ, ಪರಕೀಯ ಭಾವನೆಯ ಆಗರವಾಗುತ್ತಲಿದೆ. ಇದರಿಂದಾಗಿ ಸಮಸ್ಯೆಗಳು ಸಂಖ್ಯೆಯಲ್ಲೂ, ಗಾತ್ರದಲ್ಲೂ, ತೀಕ್ಷ್ಣತೆಯಲ್ಲೂ ಹೆಚ್ಚುತ್ತಲಿವೆ. ಇವುಗಳನ್ನು ನಿರ್ಬಂಧಿಸುವ, ಪರಿಹರಿಸುವ, ಮಾನವನ ಜೀವನವನ್ನು ಮಧುರವಾಗಿಸುವ ಪ್ರಯತ್ನವು ನಾನಾ ರಂಗಗಳಲ್ಲಿ ವಿವಿಧ ಮುಖವಾಗಿ ನಡೆಯುತ್ತಲಿದೆ. ಸಮಾಜಕಾರ್ಯವೂ ಅಂಥ ಒಂದು ಸಾರ್ಥಕ ಪ್ರಯತ್ನವಾಗಿದೆ. ಸಮಾಜಕಾರ್ಯವು, ಪರಸ್ಪರ ಸಹಾಯವನ್ನು ನೀಡುವ ಅರ್ಥದಲ್ಲಿ, ಮಾನವ ಸಮಾಜದ ಉಗಮದಿಂದಲೂ, ಮಾನವನ ಜೀವನದಲ್ಲಿ ಹಾಸುಹೊಕ್ಕಾಗಿರುವುದು ಸಾಧಿತವಾಗಿದೆ. ಆದರೆ, ಇದನ್ನು ಒಂದು ವೃತ್ತಿಯಾಗಿ ಪರಿಗಣಿಸತೊಡಗಿದ್ದುದು ಹತ್ತೊಂಬತ್ತನೆಯ ಶತಮಾನದಿಂದ, ಭಾರತದಲ್ಲಿ ಈ ಶತಮಾನದ ಮೂರನೆಯ ದಶಕದಿಂದ.
ವೈಜ್ಞಾನಿಕ ಜ್ಞಾನದ ಆವರಣದಲ್ಲಿ, ನಿಶ್ಚಿತ ತತ್ತ್ವಾದರ್ಶದ ನೆಲೆಗಟ್ಟಿನ ಮೇಲೆ, ಪರಿಷ್ಕೃತ ವಿಧಾನ ಮತ್ತು ತಂತ್ರಗಳ ಮೂಲಕ, ಕ್ರೋಢೀಕೃತವಾಗಿ ನಡೆಯುವ ಪ್ರಯತ್ನವಾದ ಸಮಾಜಕಾರ್ಯವನ್ನು ಸಂಗತ ಕಾರ್ಯವನ್ನಾಗಿ ಪರಿವರ್ತಿಸಿಕೊಳ್ಳುವುದು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಕಾರ್ಯಕರ್ತರ ಮತ್ತು ಇಂಥವರ ಯತ್ನಕ್ಕೆ ನೆರವಾಗುವುದು ಇತರರ ಪ್ರಥಮ ಕರ್ತವ್ಯವಾಗಿದೆ. ಸಮಾಜಕಾರ್ಯವು ತೀವ್ರಗಾಮಿಯಾಗುವುದರ ಜೊತೆಗೆ ಇದರ ಪರಿಚಯವು ಜನ ಸಾಮಾನ್ಯರೆಲ್ಲರಿಗೂ ಆಗಬೇಕಾದದ್ದು ಅಗತ್ಯ. ಕರ್ನಾಟಕದಲ್ಲಿ ಸಾಮಾಜಿಕ ಅಭ್ಯುದಯದಲ್ಲಿ ತೊಡಗಿರುವ ಎಲ್ಲ ಕಾರ್ಯಕರ್ತರಿಗೂ, ಹುಲ್ಲು ಬೇರುಗಳಾಗಿರುವ ಶ್ರೀಸಾಮಾನ್ಯರಿಗೂ ಸಮಾಜಕಾರ್ಯದ ಸೂಕ್ತ ಪರಿಚಯವಾಗಬೇಕು, ಎಂಬ ಅಪೇಕ್ಷೆಯಿಂದ ಈ ಪುಸ್ತಕವನ್ನು ಪ್ರಕಟಿಸಲಾಗಿದೆ. ಸುಮಾರು ಎರಡು ದಶಕಗಳ ಹಿಂದೆ ಸಮಾಜಕಾರ್ಯವನ್ನು ಕುರಿತು ಒಂದು ಕಿರು ಪುಸ್ತಿಕೆಯನ್ನು ಪ್ರಕಟಿಸಿದ್ದೆ. ಆದರೆ ನನ್ನ ಅನುಭವ, ಅಧ್ಯಾಪನ, ಅಧ್ಯಯನ, ದೇಶ-ವಿದೇಶಗಳ ನಾನಾ ಕಡೆಗಳಲ್ಲಿನ ವೀಕ್ಷಣೆ, ಇತ್ಯಾದಿಗಳಿಂದ ಸಮಾಜಕಾರ್ಯ ಕುರಿತ ಪುಸ್ತಕದ ಹರವು ಮತ್ತು ಆಯಾಮ ಭಿನ್ನವಾಗಿರುವ ಅಗತ್ಯವಿದೆ, ಎಂದು ಕಂಡುಬಂದಿತು. ಇದನ್ನು ಗಮನದಲ್ಲಿರಿಸಿಕೊಂಡು ಈ ಪುಸ್ತಕವನ್ನು ಬರೆದಿರುವೆ. ಇದನ್ನು ಆಸಕ್ತರೆಲ್ಲ ಆದರದಿಂದ ಬರಮಾಡಿಕೊಳ್ಳುತ್ತಾರೆಂದು ಆಶಿಸುತ್ತೇನೆ. ಎಚ್.ಎಂ. ಮರುಳಸಿದ್ಧಯ್ಯ
0 Comments
Leave a Reply. |
Categories![]()
|
Site
|
Vertical Divider
|
Our Other Websites
|
Vertical Divider
|
+91-8073067542
080-23213710 Mail-hrniratanka@mhrspl.com |
Receive email updates on the new books & offers
for the subjects of interest to you. |