ಟಿ.ಆರ್. ಶಾಮಭಟ್ಟ, ಪು. 608, ಬೆಲೆ : 450, ಐಬಿಎಚ್ ಪ್ರಕಾಶನ ದಿ|| ಪ್ರೊ| ಎಂ.ಎನ್. ಶ್ರೀನಿವಾಸ್ ಅವರು ಭಾರತೀಯ ಸಮಾಜವಿಜ್ಞಾನದಲ್ಲಿ ಒಬ್ಬ ವರಿಷ್ಠ ವ್ಯಕ್ತಿ. ನಮ್ಮ ಸಮಾಜ ಮತ್ತು ಸಂಸ್ಕೃತಿಗಳನ್ನು ತಿಳಿದುಕೊಳ್ಳುವ ದಿಸೆಯಲ್ಲಿ ಅವರು ‘ಕ್ಷೇತ್ರಾಧಾರಿತ ದೃಷ್ಟಿಕೋನ’ ಎಂಬ ಅಧ್ಯಯನ ಮಾರ್ಗವನ್ನು ಬಳಸಿ ಜನಪ್ರಿಯಗೊಳಿಸಿದರು. ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯದಲ್ಲಿದ್ದಾಗ ದಂಗೆಕೋರರು ಹಚ್ಚಿದ ಬೆಂಕಿಗೆ ತುತ್ತಾಗಿ ತಮ್ಮೆಲ್ಲ ಕ್ಷೇತ್ರಕಾರ್ಯ ಟಿಪ್ಪಣಿಗಳನ್ನು ಕಳೆದುಕೊಂಡ ವಿಷಾದಕರ ದುರಂತದ ನಂತರ ಅವರು ಬರೆದ ‘ದಿ ರಿಮೆಂಬರ್ಡ್ ವಿಲೇಜ್’ ಎಂಬ ಗ್ರಂಥವು ಮಾನವವಿಜ್ಞಾನ ಮತ್ತು ಸಮಾಜವಿಜ್ಞಾನಗಳಲ್ಲಿ ಒಂದು ಸಾರ್ವಕಾಲಿಕ ಶ್ರೇಷ್ಠ ಕೃತಿ ಎನ್ನಬಹುದು. 1976ರಲ್ಲಿ ಮೊದಲು ಪ್ರಕಟವಾದ ಈ ಕೃತಿಯು, ಅನೇಕ ಮರುಮುದ್ರಣಗಳನ್ನು ಕಂಡಿದೆಯಲ್ಲದೆ, ಕಳೆದ ಅನೇಕ ದಶಕಗಳ ಉದ್ದಕ್ಕೂ ಅದು ತನ್ನ ತಾಜಾತನವನ್ನು ಉಳಿಸಿಕೊಂಡು ಬಂದಿದೆ. ಪ್ರೊ. ಶ್ರೀನಿವಾಸರು ಇಂಗ್ಲಿಷ್ ಬರವಣಿಗೆಯ ಒಬ್ಬ ಶ್ರೇಷ್ಠ ಪಟುವಾಗಿದ್ದರು. ಅವರು ತನ್ನ ವಿದ್ವತ್ಪೂರ್ಣ ಬರವಣಿಗೆಗಳಲ್ಲಿ ಪ್ರಚುರಪಡಿಸಿದ ಅಂಶಗಳು ನಿಸ್ಸಂದೇಹವಾಗಿ ಮುಖ್ಯವಾದವುಗಳೇ ಆದರೂ, ಅವುಗಳನ್ನು ಅವರು ಹೇಗೆ ಅಭಿವ್ಯಕ್ತಗೊಳಿಸಿದರು ಎಂಬುದು ಇನ್ನೂ ಹೆಚ್ಚು ಆಕರ್ಷಕವಾದುದಾಗಿದೆ. ಅವರ ಬರವಣಿಗೆಯ ಈ ಕೌಶಲ್ಯವು ಅತ್ಯಂತ ಉತ್ಕೃಷ್ಟವಾಗಿ ಮೂಡಿ ಬಂದಿದ್ದೇ ‘ದಿ ರಿಮೆಂಬರ್ಡ್ ವಿಲೇಜ್’ ಕೃತಿಯಲ್ಲಿ. ಈ ಕೃತಿಯ ಸಮೃದ್ಧ ಅಂಶಗಳನ್ನು ಮತ್ತು ಅನುಪಮ ಶೈಲಿಯನ್ನು ಕನ್ನಡಿಗರು ಆಸ್ವಾದಿಸಲಿ ಎಂಬ ಉದ್ದೇಶದಿಂದ ಪ್ರೊ. ಟಿ.ಆರ್. ಶಾಮಭಟ್ಟ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಶಾಸ್ತ್ರೀಯ ಕೃತಿ ಎನ್ನಬಹುದಾದ ಇದನ್ನು ಅನುವಾದಿಸುವುದು ಒಂದು ಸವಾಲೇ ಸೈ. ಈ ಸಾಹಸಕ್ಕೆ ಕೈ ಹಾಕಿದ ಅವರು ನಮ್ಮ ಕೃತಜ್ಞತೆಗೆ ಹಾಗು ಅಭಿನಂದನೆಗೆ ಅರ್ಹರು.
ಡಾ. ಎನ್. ಜಯರಾಮ್ ಟಿ.ಐ.ಎಸ್.ಎಸ್. ಮುಂಬಯಿ
0 Comments
Leave a Reply. |
Categories![]()
|
Site
|
Vertical Divider
|
Our Other Websites
|
Vertical Divider
|
+91-8073067542
080-23213710 +91-9980066890 +91-8310241136 Mail-hrniratanka@mhrspl.com |
Receive email updates on the new books & offers
for the subjects of interest to you. |